ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, December 6, 2017

CRIME INCIDENTS 06-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-12-2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಧಾರವಾಡ ರಸ್ತೆ ದುಮ್ಮವಾಡ ಗ್ರಾಮದ ಕೃಷಿ ಆಪೀಸ ಮುಂದೆ ರಸ್ತೆ ಮೇಲೆ ಯಾವದೋ ಟಾಟಾ ಎಸ್ ವಾಹನ ಚಾಲಕನು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ತನ್ನ ಮೊಟಾರ ಸೈಕಲ್ಲ ನಂ KA 25/ EB 8425 ನೇದ್ದರ ಮೇಲೆ ಬರುತ್ತಿದ್ದ ಪಿರ್ಯಾದಿದಾರನ ಅಳಿಯ ಬಸವರಾಜ ತಂದೆ ಸಿದ್ರಾಮಪ್ಪ ಎಮ್ಮಿ ವಯಾ 24 ವರ್ಷ ಸಾ: ಬೋಗೇನಾಗರಕೊಪ್ಪ ಈತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಬಲವಾದ ಗಾಯಪಡಿಸಿ ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಪಲಿಸದೇ ದಿ:06-12-2017 ರಂದು ಬೆಳಗಿನ 01-30 ಗಂಟೆಗೆ ಮರಣಹೊಂದುವಂತೆ ಮಾಡಿ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 370/2017 ಕಲಂ 279.304(ಎ)ವಾಹನ ಕಾಯ್ದ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮರೆವಾಡ ಬೆಟಗೇರಿ ರಸ್ತೆ ಮರೆವಾಡ ಗ್ರಾಮದ ಜಿನ್ನಿ ಪ್ಯಾಕ್ಟರಿ ಕ್ರಾಸ ಹತ್ತಿರ ಟ್ಯ್ರಾಕ್ಟರ ಇಂಜಿನ ನಂ MEW 5977 ನೇದ್ದರ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಬೆಟಗೇರಿ ಕಡೆಯಿಂದ ಮರೆವಾಡ ಕಡೆಗೆ ನಡೆಸಿಕೊಂಡು ಬಂದು ರಸ್ತೆ ಸೈಡಿನಲ್ಲಿ ಕಚ್ಚಾರಸ್ತೆಯ ಮೇಲೆ  ಮರೆವಾಡ ಕಡೆಯಿಂದ ನಡೆದು ಕೊಂಡು ಬರುತ್ತಿದ್ದ ಗಣೇಶ ಸುಬಾಷ ದೇಸಾಯಿ ವಯಾ07ವರ್ಷ ಇವನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯ ಪಡಿಸಿ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತಿರವಾಗ ಮಾರ್ಗಮದ್ಯ ಮರಣ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 280/2017 ಕಲಂ 279/2017 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.