ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, December 7, 2017

CRIME INCIDENTS 07-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-12-2017 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಮಳಲಿ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಇದರಲ್ಲಿ ಆರೋಪಿತನಾದ ಚಂದ್ರಶೇಖರ ಮಹಾದೇವಪ್ಪ ಕಮ್ಮಾರ. ವಯಾ: 42 ವರ್ಷ, ಸಾ: ಮಳಲಿ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 350-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 178/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ ಗ್ರಾಮದ ಹತ್ತಿರ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ನವಲಗುಂದ ಕಡೆಯಿಂದ  ಅಣ್ಣಿಗೇರಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಿಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಬಸಾಪೂರ ಕ್ರಾಸ್ ಕಮಾನ ಹತ್ತಿರ ಮೋಟಾರ ಸೈಕಲ ನಂ ಕೆಎ-24/ಕೆ-5486 ನೇದ್ದನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮಹಮ್ಮದತೌಸಿಪ್ ಇಮಾಮಸಾಬ ಗೂಡುಬಾಯಿ ಸಾ: ಕಾಲವಾಡ ಇತನಿಗೆ ಅಪಘಾತ ಮಾಡಿ ಭಾರೀ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ವಾಹನವನ್ನು ನಿಲ್ಲಿಸದೇ ಹಾಗೇ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 148/2017 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಂತೊರ ಬೆಂತೂರ ಗ್ರಾಮದ ಹತ್ತಿರ  ಮೃತ ಚನ್ನವೀರಪ್ಪ ದೇವಪ್ಪ ಕಳಸಾಪೂರ ಇತನು ನಡೆಸುತ್ತಿದ್ದ ಮೋಟಾರ ಸೈಕಲ್ ನಂ ಕೆಎ-04/ಎಚ್-6635 ನೇದ್ದನ್ನು ಅಂತೂರ ಬೆಂತೂರ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ  ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಸ್ಕೀಡ್ ಆಗಿ ಬಿದ್ದು ತಲೆಗೆ ಭಾರೀ ಗಾಯ ಪಡಿಸಿಕೊಂಡು ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 149/2017 ಕಲಂ 279.304 (ಎ) ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ರೇಲ್ವೆ ಸ್ಟೇಶನ್ ಹತ್ತಿರ ಸಾರ್ವಜನೀಕ ರಸ್ತೆಯ ಹತ್ತಿರ  ಆರೋಪಿತರಾದ ಶಂಕರಪ್ಪಾ ರೆಡ್ಡರ 2.ಬಸವರಾಜ ಗುಮ್ಮಗೋಳ ಇವರು  ತಮ್ಮ ಲಾಭಕ್ಕೋಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 530-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 179/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ ಕಾರವಾರ ರಸ್ತೆಯ ಪಕ್ಕದಲ್ಲಿ, ಅಂಚಟಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ಯಾರೋ ದುಷ್ಕರ್ಮಿಗಳು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಟ್ಟಿದ್ದ, ಮೆಕ್ಕಾ ಮದಿನಾ ಚಿತ್ರವಿರುವ ಬ್ಯಾನರ ಅ.ಕಿ. 500/- ರೂ. ಗಳನ್ನ್ನು ಕಿತ್ತು ಹಾಕಿ, ಸುಟ್ಟು ಲುಕ್ಸಾನಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 280/2017 ಕಲಂ 427 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಡಸ ರಸ್ತೆ ಮಲಕನಕೊಪ್ಪ ಗ್ರಾಮದ ಹತ್ತಿರ ರಸ್ತೆ ಮೇಲೆ ಆರೋಪಿತನಾದ  ಹಜರತಅಲಿ ಸಾ: ಶಿಗ್ಗಾಂವ ೀತನು ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ ಕೆಎ27/ ಇಎ 7252 ನೇದ್ದನ್ನು ತಡಸ ಕಡೆಯಿಂದ ಕಲಗಟಗಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ತಡಸ ಕಡೆಗೆ ಹೊರಟ ಪಿರ್ಯಾದಿದಾರನ ತಂದೆ ಹನಮಂತಪ್ಪ ವೀರಬದ್ರಪ್ಪ ಕುಂದಗೋಳ ಸಾ: ಗುಡ್ಡದಹೂಲಿಕಟ್ಟಿ ಈತನ ಮೊಟಾರ ಸೈಕಲ್ಲ ನಂ ಕೆಎ25/ ಇವಿ 9300 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅದರ ಸವಾರನಿಗೆ ಸ್ತಳದಲ್ಲಿಯೇ ,ಮರಣ ಪಡಿಸಿದ್ದಲ್ಲದೇ ತನ್ನ ಮೊಟಾರ ಸೈಕಲ್ಲ ಮೇಲೆ ಹಿಂದಿನ ಸೀಟಿನಲ್ಲಿ ಕುಳಿತ ಹರಜತಅಲಿ ಪೆಂಡಾರಿ ಸಾ: ಶಿಗ್ಗಾಂವ ಈತನಿಗೆ ಬಲವಾದ ಗಾಯಪಡಿಸಿ ತಾನೂ ಗಾಯಗೊಂಡಿದ್ದು ಇರುತ್ತೆದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 371/2017 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ಧಾಖಲಿಸಿದ್ದು ಇರುತ್ತದೆ.

7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತುಮರಿಕೊಪ್ಪ ಗ್ರಾಮದ ಮೃತ ರುಸ್ತುಮ ತಂದೆ ಮಹ್ಮದಸಾಬ ಬಮ್ಮನಳ್ಳಿ ವಯಾ 32 ವರ್ಷ ಈತನು ದಿನಾಂಕ: 24/11/2017 ರಂದು ಮುಂಜಾನೆ 8.10ಗಂಟೆ ಸುಮಾರಿಗೆ ಮದರಸಾ ಕಲಿಸಲು ಮುತ್ತಿಗಿ ಗ್ರಾಮಕ್ಕೆ ಹೋಗಿ ಬರುವಾಗ ತುಮರಿಕೊಪ್ಪ ಹತ್ತಿರ ಅವನ ತಲೆಯ ಮೇಲೆ ತೆಂಗಿನ ಗಿಡದಲ್ಲಿಯ ಗರಿಯೊಂದು ಬಿದ್ದಿದ್ದರಿಮದ ಬೈಕ್ ಹಾಕಿಕೊಂಡು ಬಿದ್ದು ತಲೆ ಬೆನ್ನು ಭುಜ ಕೈಕಾಲುಗಳಿಗೆ ಗಾಯ ಹೊಂದಿ ಉಪಚಾರಕ್ಕೆ ಅಂತ 108 ಅಂಬುಲೆನ್ಸಿನಲ್ಲಿ ಕಲಘಟಗಿ ದವಾಖಾನೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂತ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದವನು ಉಪಚಾರದಿಂದ ಗುಣಮುಖವಾಗದೇ ದಿನಾಂಕ: 07/12/2017 ರಂದು ಮುಂಜಾನೆ 6.45 ಗಂಟೆಗೆ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 70/2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

8. ಗರಗ ಪೊಲೀಸ ಠಾಣೆ ವ್ಯಾಪ್ತಿಯ: ಪುಡಕಲಕಟ್ಟಿ ಗ್ರಾಮ ಹದ್ದಿಯಲ್ಲಿರುವ ಮಂಟಿಗ್ಯಾನ ಸರುವಿನಲ್ಲಿ ದಿನಾಂಕಃ 06-12-2017 ರಂದು 06-00 ಅವರ್ಸದಿಂದಾ ದಿನಾಂಕಃ 07-12-2017 ರಂದು 09-00 ಅವರ್ಸದ ನಡುವಿನ ಅವಧಿಯಲ್ಲಿ ಮೃತ ತಮ್ಮಣ್ಣಾ ತಂದೆ ವೀರಭದ್ರಪ್ಪಾ ಸತ್ಯಣ್ಣವರ. ವಯಾಃ 70 ವರ್ಷ. ಸಾಃ ಪುಡಕಲಕಟ್ಟಿ ಇತನು ತನಗಿದ್ದ ಮಾನಸಿಕ ಕಾಯಿಲೆಗೆ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನಷ್ಟಕ್ಕೆ ತಾನೆ ಪ್ಲಾಸ್ಟೀಕ ಹಗ್ಗದಿಂದಾ ಸರುವಿನಲ್ಲಿಯ ಜಾಲಿಗಿಡಕ್ಕೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 57//2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.