ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, December 10, 2017

CRIME INCIDENTS 10-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-12-2017 ರಂದು ವರದಿಯಾದ ಪ್ರಕರಣಗಳು

1.  ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ನಲವಡಿ ರೋಡ ಹತ್ತಿರ ಆರೋಪಿತ ಟಾಟಾ ಲಾರಿ ನಂಬರ್ KA-25/B 8858 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟ ವಾಹನವನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ ಬಲಗಡೆಗೆ ಲಾರಿಯನ್ನು ಚಲಾಯಿಸಿಕೊಂಡು ಬಂದು ರಸ್ತೆಯ ತನ್ನ ಸೈಡಿನಲ್ಲಿ ಹೊರಟ ಕಾರ್ ನಂಬರ್ KA-26/M 4019 ನೇದ್ದಕ್ಕೆ ತನ್ನ ಲಾರಿಯನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಿರಣ ಪಾಟೀಲ್ ಇವರಿಗೆ ಸಾದಾ ವ ಭಾರೀ ಪ್ರಮಾಣದ ರಕ್ತ ಗಾಯ ಪಡಿಸಿದ್ದಲ್ಲದೇ ಕಾರಿನ ಚಾಲಕ ಆನಂದ ಯಳಮಲಿ ಈತನಿಗೆ ಮರಣಾಂತಿಕ ಗಾಯ ಪೆಟ್ಟು ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ತನ್ನ ಲಾರಿಯನ್ನು ಬಿಟ್ಟು ಅಪಘಾತದ ಬಗ್ಗೆ ಮಾಹಿತಿಯನ್ನು ನೀಡದೇ ಪರಾರಿಯಾಗಿದ್ದು ಇರುತ್ತೆದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 151/2017 ಕಲಂ 279.337.338.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನುಗ್ಗಿಕೇರಿ ಗ್ರಾಮದ ಕೆರೆಯ ದಂಡೆಯ ಮೇಲೆ ಸಾರ್ವಜನಿಕ ಜಾಗೆಯಲ್ಲಿ ಆರೋಪಿತರಾದ 1.ಹನುಮಂತಪ್ಪ ಪಾಟೀಲ 2.ಯಲ್ಲಪ್ಪಾ ತಳವಾಯಿ 3.ಫಕ್ಕಿರಪ್ಪಾ ಬೆಳ್ಳಿಗಟ್ಟಿ 4.ಬಸವನಗೌಡ ಪಾಟೀಲ 5.ಮಾರುತಿ ಪಾಟೀಲ 6.ಬೀಮಸಿ ಹುಲಮನಿ ಹಾಗೂ ಕೂಡಿ ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ 1350-00 ಗಳನ್ನು ವಶಪಡಿಸಿಕೊಂಡಿದ್ದುಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 282/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.