ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, December 12, 2017

CRIME INCIDENTS 12-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-12-2017 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ  ಪೊಲೀಸ್ ಠಾಣಾ ವ್ಯಾಪ್ತಿಯ: ದೇವನೂರ ಕ್ರಾಸ್ ಹತ್ತಿರ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ, ಆರೋಪಿತನಾದ ಇಮಾಮಹುಸೇನ ಅಹ್ಮದಸಾಬ ಅತ್ತಾರ, ವಯಾ: 26 ವರ್ಷ ಸಾ: ಕುಲಕರ್ಣಿ ಹಕ್ಕಲ ಗುಡ್ ಶೆಡ್ ರೋಡ ಹುಬ್ಬಳ್ಳಿ ಇವನು ತನ್ನ ರಾಯಲ್ ಎನಪೀಲ್ಡ ಮೋಟಾರ ಸೈಕಲ್ ನಂ: ಕೆಎ 63 / ಹೆಚ್: 0806 ರಲ್ಲಿ ಹಿಂದಿನ ಶೀಟಿನಲ್ಲಿ ಶೈನಾಜಬೀ ಕೋಂ ಭಾಷೇಸಾಬ ಅತ್ತಾರ, ವಯಾ: 48 ವರ್ಷ, ಸಾ: ಕುಲಕರ್ಣಿ ಹಕ್ಕಲ ಗುಡ್ ಶೆಡ್ ರೋಡ ಹುಬ್ಬಳ್ಳಿ ಇವಳನ್ನು ಕೂಡ್ರಿಸಿಕೊಂಡು ಸದರ ಮೋಟಾರ ಸೈಕಲ್ ನ್ನು ಕುಂದಗೋಳದಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿ ಸ್ಕಿಡ್ ಮಾಡಿ ಶೈನಾಜಬೀ ಅತ್ತಾರ ಇವಳನ್ನು ಕೆಳಗೆ ಬೀಳುವಂತೆ ಮಾಡಿ ಅವಳ ತಲೆಗೆ ಭಾರೀ ಮರಣಾಂತಿಕ ಗಾಯಪೆಟ್ಟು ಆಗುವಂತೆ ಮಾಡಿ, ಅವಳು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ, ಉಪಚಾರ ಫಲಿಸದೇ ಈ ದಿವಸ ದಿನಾಂಕ: 12-12-2017 ರಂದು ಮುಂಜಾನೆ 7-10 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 183/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ತಡಸ ರಸ್ತೆಯ ಮೇಲೆ ಮಲಕನಕೊಪ್ಪ ತಬಕದಹೊನ್ನಳ್ಳಿ ಗ್ರಾಮದ ಚಿಕ್ಕಪ್ಪಾ ಹರಿನಜ ಇವರ ತಮ್ಮನಾದ ಸುರೇಶ ತಂದೆ ಫಕ್ಕೀರಪ್ಪ ಹರಿಜನ ವಯಾ 42 ವರ್ಷ ಸಾ..ಚವರಗುಡ್ಡ ತಾ..ಹುಬ್ಬಳ್ಳಿ ಇವನು ತನ್ನ Bajaj Paltina Motore Cycle No KA-63-E-4312 ನೇದ್ದನ್ನು ಕಲಘಟಗಿ ಕಡೆಯಿಂದಾ ತಬಕದಹೊನ್ನಳ್ಳಿಗೆ ನೆಡೆಸಿಕೊಂಡು ಹೋಗುವಾಗ ಯಾವುದೋ ವಾಹನದ ಚಾಲಕನು ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಘುವ ರೀತಿಯಲ್ಲಿ ನೆಡೆಸಿ ಸುರೇನು ನೆಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಲೆಗೆ ಗಂಭೀರ ಗಾಯಪಡಿಸಿ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 373/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. . ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಬಕದಹೊನ್ನಳ್ಳಿ ಗ್ರಾಮದ ಹೊಳೆಮ್ಮನ ದೇವಸ್ಥಾನದಲ್ಲಿ ಮೃತ  ಭೀಮವ್ವಾ ಕೋಂ ಹೊಳೆಪ್ಪ ಬಡಪ್ಪನವರ ವಯಾ 75 ವರ್ಷ ಸಾ..ತಬಕದಹೊನ್ನಳ್ಳಿ ಇವಳು ದೇವರ ದರ್ಶನಕ್ಕೆ ಅಂತಾ ದೇವಸ್ಥಾಣಕ್ಕೆ ಹೋಗಿ ದೇವರಿಗೆ ನಮಸ್ಕರಿಸುವ ಕಾಲಕ್ಕೆ ದೇವಸ್ಥಾನದಲ್ಲಿದ್ದ ದೀಪಕ್ಕೆ ಭೀಮವ್ವಳು ಉಟ್ಟ ಸೀರೆಯ ಸೆರಗು ಆಕಸ್ಮಾತಾಗಿ ತಾಗಿ ಬೆಂಕಿ ಹತ್ತಿಕೊಂಡು ಕೈಕಾಲುಗಳಿಗೆ, ಮೈಕೈಗಳಿಗೆ ಸುಟ್ಟ ಗಾಯಗಳಾಗಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದಾಗ ಉಪಚಾರ ಫಲಿಸದೆ ದಿ..12-12-2017 ರ ಬೆಳಗಿನ 02-00 ಗಂಟೆಯ ಸುಮಾರಿಗೆ ಮರಣಹೊಂದಿದ್ದು ಇರುತ್ತದೆ ಈ  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ  72/2017 ಕಲಂ 174 ಸಿ..ಅರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.