ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, December 13, 2017

CRIME INCIDENTS 13-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 13-12-2017 ರಮದು ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 13-12-2017 ರಂದು ಮುಂಜಾನೆ 8-30 ಗಂಟೆಗೆ ನಿಗದಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆಪಾದಿತನಾದ ಕಲ್ಮೇಶ ತಂದೆ ಶಿವಲಿಂಗಪ್ಪ ಜುಲ್ಪಿ ಸಾ|| ನಿಗದಿ ತಾ||ಜಿ|| ದಾರವಾಡ ಇವನು ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪಾಸ ವ ಪರ್ಮೀಟ ಇಲ್ಲದೆ ಒಂದು ಕೈ ಚೀಲದಲ್ಲಿ ಸುಮಾರು 1800/- ರೂ ಕಿಮ್ಮತ್ತಿನ 180 ಎಮ್ ಎಲ್ ದ ಒಟ್ಟು 10 ಓಲ್ಡ ಟವರಿನ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳು ಹಾಗೂ 90 ಎಮ್ ಎಲ್ ದ ಒಟ್ಟು 40 ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ ಟೆಟ್ರಾ ಪಾಕೇಟುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅನದೀಕೃತವಾಗಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 140/2017 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 12-12-2017 ರಂದು ರಾತ್ರಿ 11:30 ಗಂಟೆಯ ಸುಮಾರಿಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಕುಂದಗೋಳದಿಂದ ಶರೇವಾಡ ಕಡೆಗೆ 3 ಕಿ.ಮೀ ಅಂತರದಲ್ಲಿ ಕೊಪ್ಪದವರ ಕೆರೆಯ ಹತ್ತಿರ ಯಾವುದೋ ಟ್ರ್ಯಾಕ್ಟರ ಚಾಲಕನು ಸದರ ಟ್ರ್ಯಾಕ್ಟರನ್ನು ಕುಂದಗೋಳ ಕಡೆಯಿಂದ ಶರೇವಾಡ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಟಿ.ವ್ಹಿ.ಎಸ್ ಅಪ್ಪಾಚಿ ಮೋಟಾರ ಸೈಕಲ್ ನಂ: ಕೆಎ 25 / ಇಪಿ 0630 ನೇದ್ದರಲ್ಲಿ ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಬರುತ್ತಿದ್ದ ಸಂಜಯ ಅಶೋಕ ಶಿವಳ್ಳಿ, ವಯಾ: 30 ವರ್ಷ ಸಾ: ಅಜ್ಜನಭಾವಿ ಓಣಿ ಕುಂದಗೋಳ ಇವನ ಮೋಟಾರ ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಅವನಿಗೆ ಭಾರೀ ಮರಣಾಂತಿಕ ಗಾಯಪೆಟ್ಟಾಗುವಂತೆ ಮಾಡಿ, ಸ್ಥಳದಲ್ಲಿಯೇ ಮರಣವಾಗುವಂತೆ ಮಾಡಿ, ತನ್ನ ಟ್ರ್ಯಾಕ್ಟರನ್ನು ನಿಲ್ಲಿಸದೇ ಹೋಗಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 184/2017 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 14-10-2017 ರಂದು ಮುಂಜಾನೆ 9-00 ಗಂಟೆಗೆ, ಹೆಬಸೂರ ಗ್ರಾಮದ ರೈಲ್ವೆ ಸ್ಟೇಷನ್ ಹತ್ತಿರ ನಡೆಯುತ್ತಿರುವ ಬ್ರಿಡ್ಜ್ ಕಾಮಗಾರಿ ಸ್ಥಳದಿಂದ ಇದರಲ್ಲಿಯ ಪಿರ್ಯಾದಿಯ ಸಹೋದರ ಹರಕೇಶ ಯಾದವ ತಂದೆ ಭರತ ಯಾದವ ವಯಾ. 20 ವರ್ಷ ಲಕ್ಷ್ಮಿಪುರ ಸೌರಹಾನ ಪೊ. ಸೆಮೆರಾ ಮೆಡ್ರೋಲ್ ತಾ. ಬಗಹಾ ಜಿ. ಪಶ್ಚಿಮ ಚಂಪಾರಣ ರಾಜ್ಯ ಬಿಹಾರ ಮತ್ತು ಅವನ ಗೆಳೆಯ ಸುರೇಂದರ ಯಾದವ ತಂದೆ ಫಾಗೂ ಯಾದವ ವಯಾ. 21 ವರ್ಷ ಸಾ. ಚೂರಿ ಹರವಾ ಪೊ. ಗುದಗುದಿ ತಾ. ಡುಮರಿ ಗೋವರ್ಧನ ಜಿ. ಪಶ್ಚಿಮ ಚಂಪಾರಣ ರಾಜ್ಯ ಬಿಹಾರ ಇವರು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಇಲ್ಲಿಯವರೆಗೆ ಎಲ್ಲ ಕಡೆಗಳಲ್ಲಿ ಹುಡುಕಾಡಿದ್ದರಲ್ಲಿ ಸದರಿಯವರು ಸಿಗದೇ ಕಾಣೆಯಾಗಿರುತ್ತಾರೆ ಅಂತ ಪಿರ್ಯಾದಿ ಕೊಟ್ಟಿದ್ದು  ಇರುತ್ತದೆ. ಕಾರಣ   ೀ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮನುಷ್ಯಕಾಣೆ ಪ್ರಕರಣ ಸಂ. 284/2017 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-09-12-2017 ರಂದು ಸಂಜೆ 17-00 ಗಂಟೆಯ ಸುಮಾರಿಗೆ ಸೋಲಾರಗೊಪ್ಪ ಪರಸಾಪೂರ ರಸ್ತೆಯ ಮೇಲೆ ಟ್ರ್ಯಾಕ್ಟರ ನಂ KA-25-TA-2241, & ಟ್ರೇಲರ್ ನಂ KA-25-TA-2242 ನೇದ್ದನ್ನು ಸೋಲಾರಗೊಪ್ಪ ಕಡೆಯಿಂದಾ ಪರಸಾಪೂರ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದೆ ಹೊರಟ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ವೇಗದ ನಿತಂತ್ರಣ ಮಾಡಲಾಗದೆ ರಸ್ತೆಯ ಬಲಬದಿ ಇರುವ ಹಾಳಾದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಾನೆ ತಲೆಗೆ, ಎದೆಗೆ, ಭುಜಕ್ಕೆ, ಪಕ್ಕಡಿಗೆ ವಗೈರೆ ಕಡೆಗಳಲ್ಲಿ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 374/2017 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

5) ಗರಗ ಪೊಲೀಸ್ ಠಾಣಾವ್ಯಾಪ್ತಿಯ ಜಿರಿಗಿವಾಡ ಗ್ರಾಮದಲ್ಲಿ ಮೃತ ಕಾವೇರಿ ತಂದೆ ಬಸಪ್ಪ.ಬೆಳವಡಿ.ವಯಾ-16 ವರ್ಷ ಸಾಃಜಿರಿಗವಾಡ.ತಾಃಧಾರವಾಡ ಇವಳಿಗೆ 5-6 ತಿಂಗಳಿಂದಾ ಋತುಚಕ್ರ ಸರಿಯಾಗಿ ಆಗದೇ ಇದ್ದುದ್ದರಿಂದ ಅದರಿಂದ ವಿಪರೀತ ಹೊಟ್ಟೆ ನೋವು ಬರುತ್ತಿದ್ದರಿಂದ ಅವಳಿಗೆ ಅಲ್ಲಲ್ಲಿ ತೋರಿಸಿ ಗೌವಟಿ ಔಷಧ ಕೋಡಿಸಿದರೂ ಆರಾಮವಾಗದೇ ಇದ್ದುದ್ದರಿಂದ ಮಾನಸಿಕ ಮಾಡಿಕೊಂಡು ದಿನಾಂಕ:12-12-2017 ರಂದು ಸಾಯಂಕಾಲ-5-30 ಗಂಟೆ ಸುಮಾರಿಗೆ ಮೆನಯಲ್ಲಿ ತನ್ಕಷ್ಟಕ್ಕೆ ತಾನೇ ಯಾವುದೇ ವಿಷಕಾರಕ ಎಣ್ಣೆಯನ್ನು ಸೇವಿಸಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯದಲ್ಲಿಯೇ ರಾತ್ರಿ-9-33 ಗಂಟೆ ಗೆ ಮೃತಪಟ್ಟಿದ್ದುಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.