ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, December 20, 2017

CRIME INCIDENTS 20-12-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-12-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 19-12-2017 ರಂದು ರಾತ್ರಿ 00-30 ಗಂಟೆಯ ಸುಮಾರಿಗೆ ಆರೋಪಿ ಎಚ್.ಆರ್.55/ಯು-9165 ನೇದ್ದರ ಲಾಂಗ ಚೆಸ್ಸಿ ವಾಹನದ ಲಾರಿ ಚಾಲಕನು ತನ್ನ ಲಾರಿಯನ್ನು ಧಾರವಾಡದಿಂದ ನವಲಗುಂದ ಮಾರ್ಗವಾಗಿ ನರಗುಂದ ಕಡೆಗೆ ಹೊರಟಾಗ ನವಲಗುಂದ ಪಟ್ಟಣದ ತೆಗ್ನಿನಕೇರಿ ಓಣಿ ಕ್ರಾಸದ ಕರ್ವಿಂಗದಲ್ಲಿ ಅತೀ ವೇಗದಿಂದ ಅಲಕ್ಷತನದಿಂದ ನಡೆಸಿಕೊಂಡು ಮೋಟಾರು ಸೈಕಲ್ ನಂಬರ ಕೆಎ-24/ಎಲ್-2954 ನೇದ್ದಕ್ಕೆ ಢಿಕ್ಕಿ ಮಾಡಿ ಮೋಟಾರು ಸೈಕಲ್ ಸವಾರ ಮಲ್ಲೇಶಪ್ಪ ದ್ಯಾಮಣ್ಣವರ ಈತನಿಗೆ ಭಾರಿ ಗಾಯ ಪಡಿಸಿ ಮೋಟಾರು ಸೈಕಲ್ ಜಕಂಗೊಳಿಸಿದ ಅಪರಾಧ. ಈ ಕುರಿತು  ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 148/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-12-2017 ರಂದು ಮುಂಜಾನೆ 11-00 ಗಂಟೆಗೆ, ತಾರಿಹಾಳ ಗ್ರಾಮದ ವಾಜಪೆಯ ನಗರದ, ಆರೋಪಿತಳ ಮನೆಯ ಮುಂದಿನ ರಸ್ತೆಯ ಪಕ್ಕ, ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗಿರಿಜವ್ವ ಕೋಂ ಆನಂದ ಕೊರವರ ಸಾ. ತಾರಿಹಾಳ, ವಾಜಪೆಯನಗರ, ಇವಳು ತನ್ನ ಫಾಯ್ದೆಗೋಸ್ಕರ, ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ, ಒಟ್ಟು 82 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್. ದ ಟೆಟ್ರಾ ಪೌಚಗಳು ಅ.ಕಿ 2296/- ರೂ. ಗಳನ್ನು ಮಾರಾಟ ಮಾಡುತ್ತಿದ್ದಾಗ, ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 288/2017 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 20-12-2017  ರಂದು ಸಾಯಂಕಾಲ 04-00 ಗಂಟೆಗೆ, ತಾರಿಹಾಳ ಗ್ರಾಮದ ವಾಜಪೆಯ ನಗರ, ಆರೋಪಿ ಅಶೋಕ ವೀರಭದ್ರಪ್ಪ ಕುಬಸದ ಇವರ ಮನೆಯ ಮುಂದೆ, ರಸ್ತೆಯ ಪಕ್ಕದಲ್ಲಿ, ಆರೋಪಿ ಅಶೋಕ ವೀರಭದ್ರಪ್ಪ ಕುಬಸದ ಮತ್ತು ಶಂಕ್ರಪ್ಪ ಬಸಪ್ಪ ಅರಿವಾಳ ಇಬ್ಬರೂ ಕೂಡಿಕೊಂಡು ತಮ್ಮ ಫಾಯ್ದೇಗೋಸ್ಕರ ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಒಟ್ಟು 80 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್ ದ ಟೆಟ್ರಾ ಪೌಚಗಳು ಅ.ಕಿ 2240/- ರೂ. ಮಾರಾಟ ಮಾಡುತ್ತಿದ್ದಾಗ, ಮಾಲ ಸಮೇತ ಸಿಕ್ಕ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 289/2017 ಕಲಂ KARNATAKA EXCISE ACT, 1965 (U/s-34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 11-12-2017 ರಂದು 21-30 ಗಂಟೆ ಸುಮಾರಿಗೆ  ಧಾರವಾಡ ಸವದತ್ತಿರ ರಸ್ತೆ ಅಮ್ಮಿನಭಾವಿ ಗ್ರಾಮದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ಅಮ್ಮಿನಭಾವಿ ಕಡೆಯಿಂದ ಇನಾಮಹೊಂಗಲ ಕಡೆಗೆ  ಕಾರ ನಂ ಕೆಎ 03 ಎಂಈ 5643  ನೇದ್ದರ ಚಾಲಕನಾದ ಗಂಗನಗೌಡ ಶಿವನಗೌಡ ವೀರನಗೌಡ್ರ ಸಾಃಕಬ್ಬೆನೂರ  ಇವನು ತನ್ನ ಕಾರನ್ನು ಅತೀ ವೇಗವಾಗಿ ಮಾನವೀಯ ಪ್ರಾಣಕ್ಕೆ ಅಪಾಯ ಆಗುವ ರೀತಯಲ್ಲಿ ಚಲಾಯಿಸಿ  ತನ್ನ ಕಾರಿನ ವೇಗ ನಿಯಂತ್ರಣ ಮಾಡಲಾಗದೇ ಕಾರನ್ನು ರಸ್ತೆ ಪಕ್ಕದ ಗೀಡಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಸಾದಾ  ಗಾಯ ಪಡಿಸಿಕೊಂಡು ಪಿರ್ಯಾದಿಗೆ ಭಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಠಾಣಾ ಗುನ್ನಾ ನಂ. 291/2017 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-19-12-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಗಂಜಿಗಟ್ಟಿ ಗ್ರಾಮದ ಪಿರ್ಯಾದಿ ಗುರನಾಥ ಕಾಮಧೇನು ಇವರ ವಾಸದ ಮನೆಯ ಮುಂದೆ ರಸ್ತೆಯ ಮೇಲೆ ನಮೂದ ಮಾಡಿದ ಆರೋಪಿತರು ಪಿರ್ಯಾದಿ ಹಾಗು ಅವರ ಮನೆಯ ಜನರೊಂದಿಗೆ ಸುಮಾರು ವರ್ಷಗಳಿಂದಾ ಹೊಲಕ್ಕೆ ಹೋಗುವ ದಾರಿಯ ಸಲುವಾಗಿ ತಂಟೆ ತಕರಾರು ಮಾಡಿಕೊಂಡು ಬಂದಿದ್ದಲ್ಲದೆ ಈ ಬಗ್ಗೆ ಹಿರಿಯರನ್ನು ಕೂಡಿಸಿ ಬುದ್ದಿವಾದ ಹೇಳಿಸಿದರೂ ಸಹಾ ಕೇಳದೆ ಅದೆ ತಂಟೆಯ ದ್ವೇಷದಿಂದ 3 ಜನ ಆರೋಪಿತರು ಕೂಡಿಕೊಂಡು ಬಂದು ಪಿರ್ಯಾದಿಯ ಮನೆಯ ಮುಂದೆ ಬಂದು ಲೇ ಹಾದರಗಿತ್ತಿ ಸೂಳೆ ಮಕ್ಕಳಾ ನಮ್ಮ ಜಮೀನದಲ್ಲಿ ಹಾಯಬೇಡಿರಿ ಅಂತಾ ಎಷ್ಟು ಸಾರಿ ಹೇಳಬೇಕು ನಿಮಗೆ ಅಂತಾ ಬೈದಾಡುತ್ತಿರುವಾಗ ಯಾಕೆ ಬೈದಾಡುತ್ತಿದ್ದಿರಿ ಅಂತಾ ಕೇಳಲು ಬಂದ ಪಿರ್ಯಾದಿಗೆ ಆರೋಪಿ ನಂ 1ಶಿವಾನಂದ ಕಾಮಧೇನು ನೇದವನು ತನ್ನ ಕೈಯಲ್ಲಿದ್ದ ಬಡಿಗೆಯಿಂದಾ ಪಿರ್ಯಾದಿಗೆ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿ ಅಣ್ಣ ಕಲ್ಲಪ್ಪ ಇವನಿಗೆ ಆರೋಪಿ ನಂ 2 ಗುರನಾಧ ಕಾಮಧೇನು & 3 ಬಸವರಾಜ ಕಾಮಧೇನು ನೇದವರು ಅದೆ ಬಡಿಗೆಯಿಂದಾ ಕಲ್ಲಪ್ಪನ ತಲೆಗೆ ಮೈಕೈಗೆ ಹೊಡೆದು ರಕ್ತಗಾಯಪಡಿಸಿದ್ದಲ್ಲದೆ ಇವತ್ ಉಳಕೊಂಡ್ರಿ ಮಕ್ಕಳಾ ಇಲ್ಲಾಂದ್ರ ನಿಮ್ಮನ್ನು ಜೀವಂತ ಬಿತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ ಅಪರಾಧ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.379/2017 ಕಲಂ IPC 1860 (U/s-324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-20-12-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಹಾರೋಗೇರಿ ಗ್ರಾಮದ ಹತ್ತಿರ ಇರುವ ಹೊಲದ ಕಚ್ಚಾ ರಸ್ತೆಯ ಮೇಲೆ ಟ್ರ್ಯಾಕ್ಟರ ಎಂಜಿನ್ ನಂ CG-15-ZG-1520 ಮತ್ತು ಟ್ರೇಲರ್ ನಂ KA-25-TA-0315 ನೇದ್ದರಲ್ಲಿ ಚಾಲಕನಾದ ರಾಘವೇಂದ್ರ ತಂದೆ ಹನಮಂತಪ್ಪ ಹುಲಕೊಪ್ಪ ಸಾ..ಗೋಕುಲ ಇವನು ದ್ಯಾಮಣ್ಣ ಹರಿಜನ  ಸಾ..ಹಾರೋಗೇರಿ ಇವರ ಜಮೀನದಿಂದ ಉರುವಲು ಕಟ್ಟಿಗೆಗಳನ್ನು ಹೇರಿಕೊಂಡು ಹೊಲದಿಂದ ಹಾರೋಗೇರಿಗೆ ಕಚ್ಚಾ ರಸ್ತೆಯ ಮೇಲೆ ಅತೀ ಜೋರಿನಿಂದ ವ ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಮುಂದೆ ಇರುವ ಏರಿಯನ್ನು ಹತ್ತಿಸುವಾಗ ಇಂಜಿನ್ ದ ಮುಂಭಾಗವನ್ನು ಮೇಲಕ್ಕೆ ಏಳುವಂತೆ ಮಾಡಿ ಉದ್ದಿಗೆಯ ಮೇಲೆ ನಿಂತ ದೇಸಾಯಿಗೌಡ ತಂದೆ ಫಕ್ಕಿರಗೌಡ ಪಾಟೀಲ ವಯಾ 28 ವರ್ಷ ಸಾ..ಗೋಕುಲ ಇವನಿಗೆ ಇಂಜಿನ್ &  ಟ್ರೇಲರ್ ಮದ್ಯೆ ಸಿಕ್ಕು ಸ್ಥಳದಲ್ಲಿಯೇ ಮರಣಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.380/2017 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.