ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, December 21, 2017

CRIME INCIDENTS 21-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-12-2017 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ:  ದಿನಾಂಕ 21-12-2017 ರಂದು ಡೌಗಿ ನಾಲಾ ಬ್ರಿಡ್ಜ ಹತ್ತಿರ ಅಳ್ನಾವರ ಹಳಿಯಾಳ ರಸ್ತೆಯ ಮೇಲೆ  ಹೋಗುತ್ತಿರುವಾಗ  ತಮ್ಮನ ಮಗನಾದ ವಿಶಾಲ ತಂದೆ ಮನೋಹರ  ಚಲವಾದಿ, ಇವನು ತನ್ನ ಮೋಟಾರ ಸೈಕಲ್ ದಲ್ಲಿ ಸರಕಾರಿ ಆಸ್ಪತ್ರೆ ಕಡೆಯಿಂದ ಅಳ್ನಾವರ ಕಡೆಗೆ ಹೋಗುತ್ತಿದ್ದವನ ಮೇಲೆ ಲಾರಿ ನಂ. ಕೆಎ-17/ಸಿ-6229 ನೇದ್ದರ ಚಾಲಕನಾದ ಅಬ್ದುಲ್ ಆರೀಪ ತಂದೆ ಬಾಬುಸಾಬ ಪೀರೋಜಿ, ಸಾ ಃ ಹಳಿಯಾಳ ಇತನು ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ಬಂದು ಮೋಟಾರ ಸೈಕಲ್ ನಂ. ಜಿಎ-07/ಎ-0724 ನೇದ್ದಕ್ಕೆ  ಡಿಕ್ಕಿ ಮಾಡಿ ತಮ್ಮನ ಮಗನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ ಅಪರಾಧ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 143/2017 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 18-12-2017 ರಂದು 18-00 ಗಂಟೆಯಿಂದ ದಿಃ19-12-2017 ರಂದು ಮುಂಜಾಣೆ 10-00 ಗಂಟೆಯ ನಡುವಿನ ಅವದಿಯಲ್ಲಿ  ಶಿವಳ್ಳಿಯ ಮಹಾಂತೇಶ ಹೀರೆಮಠ ಇವರ ಬಾಬತ ಸರ್ವೆ ನಂ 215 ಕ್ಷೇತ್ರ 5 ಎಕರೆ  4 ಗುಂಟೆ ಜಮೀನದಲ್ಲಿಯ ವಿಂಟ ಎನರ್ಜಿ ಕನ್ಸಲ್ಟೆನ್ಸಿ ಸರ್ವಿಸ ಬೆಂಗಳೂರಿನ ಕಂಪನಿಯ ಟವರದಲ್ಲಿಯ ಒಂದು ಶೆಲ್ಟರ ಬಾಕ್ಸ ಇದರಲ್ಲಿಯ ಎರಡು ಅಮರೊನ 12 ವೋಲ್ಟ ಬ್ಯಾಟರಗಳು, ಒಂದು ಕಿಂಟಕ ಲೋಗರ ಬಾಕ್ಸ, ಹಾಗೂ ಒಂದು ಅಮಿನಿ ಸೋಲಾರ ಪ್ಯಾನಲ 10 ವ್ಯಾಟ್ಸ 12 ವೋಲ್ಟ ಮತ್ತು ಕೇಬಲಗಳು ಕಟ್ಟಆಗಿದ್ದವು  ಇವುಗಳ ಅಕಿ 45000/-ರೂ ನೇದ್ದವುಗಳನ್ನು ಯಾರೋ ಆರೋಪಿತರು ಕಳುವು ಮಾಡಿ ಕೊಂಡು ಹೋದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 293/2017 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.