ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, December 30, 2017

CRIME INCIDETNS 30-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-12-2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಭೂ-ತರ್ಲಘಟ್ಟ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರದ ಸರ್ಕಲ್ ದಲ್ಲಿ ಆರೋಪಿತರಾದ 1.ಕಾದರ ಕುಂದಗೋಳ 2.ಪರಶುರಾಮ ಹಣಬಿ ಇವರು ತಮ್ಮ ತಮ್ಮ ಫಾಯಿದೇಗೋಸ್ಕರ ಬರ ಹೋಗುವ ಜನರಿಂದ ಹಣ ಪಡೆದುಕೊಂಡು ಓಸಿ ಎಂಬ ಜೂಜಾಟದ ಅಂಕಿ ಚೀಟಿಗಳನ್ನು ಬರೆದುಕೊಡುತ್ತಿದ್ದಾಗ ದಾಳಿ ಕಾಲಕ್ಕೆ ಒಬ್ಬನು ಸಿಕ್ಕಿದ್ದು ಇನ್ನೊಬ್ಬನು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ಹತ್ತಿರ  ಮೊಟಾರ ಸೈಕಲ ನಂ.ಕೆ.ಎ.25/ಇಟಿ/1599 ನೇದ್ದರ ಚಾಲಕನು ಪ್ರಕಾಶ ವಗ್ಗಣವರ ಇತನು ಮೊಟಾರ ಸೈಕಲನ್ನು ಸಂಗ್ರೇಶಕೊಪ್ಪದಿಂದ ಕಲ್ಲೆದ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ತೆಗ್ಗಿನಲ್ಲಿ ಮೊಟಾರಸೈಕಲ ಗಾಲಿಯನ್ನು ಹಾಕಿ ಹಿಂದೆ ಕುಳಿತ ಪಿರ್ಯಾದಿಯ ತಾಯಿಗೆ ನೆಲಕ್ಕೆ ಬಿಳುವಂತೆ ಮಾಡಿ ಕೆಡವಿ ಎಕ್ಸಿಡೆಂಟ ಪಡಿಸಿ ತಲೆಗೆ ಭಾರಿಸ್ವರೂಪದ ಗಾಯಪಡಿಸಿ ಗಾಯಾಳುವಿಗೆ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ಒಯ್ಯುತ್ತಿದ್ದಾಗ ಮಾರ್ಗ ಮದ್ಯದಲ್ಲಿಯೇ ಮೃತ ಪಡಿಸಿದದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 188/2017 ಕಲಂ 304(ಎ)279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಳಗಿಹುಲಕೊಪ್ಪ ಗ್ರಾಮದ ಕೋಟಿ ಇವರ ದನಗಳ ಪಾರ್ಮದಿಂದ ಹೋದ ಪಿರ್ಯಾದಿದಾರನ ಮಗ ಈರಪ್ಪ ವಯಾ 40 ವರ್ಷ ಸಾ: ಶಿಗಿಗಟ್ಟಿ ತಾಂಡೆ ಈತನ ಶವವು ಗಳಗಿಹುಲಕೊಪ್ಪ ಗ್ರಾಮದ ಶಾಲೆಯ ಸಮೀಪ ರಸ್ತೆ ಮೇಲೆ ಬಿದ್ದಿದ್ದು ಅವನ ಮುಖಕ್ಕೆ ಗಾಯವಾಗಿ ಮಾಂಸ ಹಾಗೂ ಚರ್ಮ ಕಿತ್ತುಕೊಂಡು ಹೋಗಿದ್ದು ಅವನಿಗೆ ಯಾವುದೋ ಪ್ರಾಣಿಯಿಂದ ಆಗಿರಬಹುದೋ ಅಥವಾ ಅಪಘಾತದಿಂದ ಆಗಿರಬಹುದೋ ಅನ್ನುವ ಬಗ್ಗೆ ಸಾವಿನಲ್ಲಿ ಸಂಶಯವಿರುತ್ತದೆ ಎಂದು ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 75/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.