ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, July 18, 2018

CRIME INCIDENTS 18-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-07-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗಿರಿಯಾಲ ಗ್ರಾಮದ ಪಿರ್ಯಾದಿ ಮನೆಯ ಮುಂದೆ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆ, ಚಪ್ಪಲಿ ಹಿಡಿದುಕೊಂಡು ಬಂದು ಸಾಕ್ಷಿದಾರ ರಾಮು ಹನಮಂತಪ್ಪ ಹಾನಗಲ್ ಸಾ. ಗಂಗಾಧರ ಇವರೊಂದಿಗೆ ಹಣದ ವ್ಯವಹಾರದ ಸಲುವಾಗಿ ಅವರಿಗೆ ಹೊಡೆಯುವ ಕಾಲಕ್ಕೆ ಬಿಡಿಸಲು ಹೋದ ಪಿರ್ಯಾದಿ ಶ್ರೀಮತಿ ಮಂಜುಳಾ ಕೋಂ ಗೂಳೇಶ ವಾಲ್ಮೀಕಿ ಸಾ. ಗಿರಿಯಾಲ ಇವರಿಗೆ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈಯ್ದಾಡಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿ ಕೈಯಿಂದ, ಬಡಿಗೆಗಳಿಂದ ಹೊಡೆದು ಗಾಯಪಡಿಸಿ ಚಪ್ಪಲಿಯಿಂದ ಹೊಡೆದು ಅವಮಾನಪಡಿಸಿ ಜೀವದ ಬೆದರಿಎ ಹಾಕಿ, ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 196/2018 ಕಲಂ SC AND THE ST  (PREVENTION OF ATTROCITIES) ACT, 1989 (U/s-3(1)(r),3(1)(s)); IPC 1860 (U/s-355,143,506,504,148,147,149,323,324)

2.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 66/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Tuesday, July 17, 2018

CRIME INCIDENTS 17-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಕೋಟೂರ ಗ್ರಾಮದ ಉಡಚಮ್ಮನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತುಕೊಂಡು  ಆರೋಪಿತನಾದ ಈಮಾಮ ರಾಜೇಸಾಬ 2.ಮೌನೇಶ ಬಡಗೇರ  ಇವರು ತನ್ನ ಪಾಯ್ದೆಗೋಸ್ಕರ ಓ ಸಿ ಅಂಬುವ ಜೂಜಾಟವನು ಆಡಿಸುತ್ತಾ ಅಂಕಿ ಸಂಖೆಗಳನ್ನು ಬರೆದುಕೊಡುವಾಗ ಸಿಕ್ಕಿದ್ದು ಅವರಿಂದ ರೂ 430—00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬೋಗನೂರ ಗ್ರಾಮದ ಮೃತ ರೇಶ್ಮಾ ಕೋಂ ಬಸವರಾಜ ಕುಲಕರ್ಣಿ ಈತಳು ಕೆಲವು ದಿನಗಳಿಂದ ತನ್ನ ಮೈದುನ ವೀರಪ್ಪ ಕುಲಕರ್ಣಿ ಈತನೊಂದಿಗೆ ಬಹಳ ಸಲುಗೆಯಿಂದ ಇದ್ದಳು.  ಅದಕ್ಕೆ ನನ್ನ ಮಗಳ ಗಂಡ ಸಂಶಯ ಮಾಡುತ್ತಿದ್ದನು ಈ ವಿಷಯ ಸಲುವಾಗಿ ನಾನು ಮತ್ತು ನನ್ನ ಮನೆಯ ಜನರು ನನ್ನ ಮಗಳಿಗೆ ಬುದ್ದಿವಾದ ಹೇಳಿದ್ದೇವು. ಇದನ್ನೆ ನನ್ನ ಮಗಳು ಮನಸ್ಸಿಗೆ ಹಚ್ಚಿಕೊಂಡು ನಿನ್ನೆ ದಿವಸ ದಿನಾಂಕ: 16/07/2018 ರಂದು ತನ್ನ ಗಂಡನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡಿದ್ದು ಇರುತ್ತದೆ.  ಆದರೂ ಕೂಡ ನನ್ನ ಮಗಳು ಯಾವ ಕಾರಣಕ್ಕೆ ಉರುಲು ಹಾಕಿಕೊಂಡಿದ್ದಾಳೆ ಅನ್ನುವುದು ತಿಳಿಯುತ್ತಿಲ್ಲ ಅದಕ್ಕಾಗಿ ಮರಣೋತ್ತರ ಪರೀಕ್ಷೇಯಿಂದ ತಿಳಿಯಬೇಕು ಅಂತಾ ವರದಿಗಾರನು  ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Saturday, July 14, 2018

CRIME INCIDENTS 14-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-07-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ: ಬಸಾಪುರ ಗ್ರಾಮದ ಹತ್ತಿರ ಆರೋಪಿಗಳಾದ 1.ಹನಮಂತಪ್ಪಾ ಹಳ್ಳಿ 2.ಸಿದ್ದಪ್ಪಾ ಕಂಬಳಿ ಹಾಗೂ ಇನ್ನೂ 03 ಜನರು ಕೊಡಿದಕೊಂಡು  ಹೊಸ ಪ್ಲಾಟಿನ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂಬುವ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1020-00 ಗಳನ್ನು ವಶಪಡಿಸಿಕೊಂಡು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ 87  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಜಾವುರ  ಗ್ರಾಮದ  ಹತ್ತಿರ ಜಮೀನು ರಿ.ಸಂ.ನಂ.131/1 ಕ್ಷೇತ್ರ, 12 ಎಕರೆ 30 ಗುಂಟೆ ಜಮೀನದಲ್ಲಿ ತನ್ನ ಪಾಲಿನ ಜಮೀನದಲ್ಲಿ ಉಳಿಮೆ ಮಾಡುತ್ತಿರುವಾಗ ಕೃಪ್ಣ ರೇಡ್ಡಿ ಇನತು ಕೆಲವು ಪುಂಡು ಜನರನ್ನು ಕರೆದುಕೊಂಡು ಬಂದು ಫಿರ್ಯಾದಿದಾರನ ಉಳಿಮೆಗೆ ಹರಕತ್ ಮಾಡಿ ಜಮೀನುಗಳ ಮಧ್ಯ ಇರುವ ಹದ್ದಿನ ಒಡ್ಡನ್ನು ಕಿತ್ತು ಹಾಕಿ ಅಪಾರವಾದ 20,000=00 ರೂ.ಗಳನ್ನು ಲುಕ್ಸಾನ ಮಾಡಿದ್ದು ಅಲಲ್ದೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಫಿರ್ಯಾದಿಗೆ ನಿನ್ನನ್ನು ಜೀವಂತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2018 ಕಲಂ 447.427.323.504.506.34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದ ಇರುತ್ತದೆ.

Thursday, July 12, 2018

CRIME INCIDENTS 12-07-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-07-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಶಹರದ ರೇಲ್ವೆ ಸ್ಟೇಶನ್ ಹತ್ತಿರ ಸಾರ್ವಜನೀಕ ರಸ್ತೆಯ ಹತ್ತಿರ ಆರೋಪಿತನಾದ ಹನಮಂತಪ್ಪ ಫಕ್ಕೀರಪ್ಪ ದೊಡ್ಡಮನಿ. ವಯಾ: 36 ವರ್ಷ, ಸಾ: ಅಂಬೇಡ್ಕರ ನಗರ ಕುಂದಗೋಳ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 690-00 ಗಳನ್ನು  ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 111/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ  


2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಶಹರದ ಬಸಸ್ಟ್ಯಾಂಡ ಹತ್ತಿರ ಸಾರ್ವಜನೀಕ ರಸ್ತೆ ಬದಿಗೆ ಇದರಲ್ಲಿ ಆರೋಪಿತನಾದ ಮಾಬೂಲಿ ನನ್ನೆಸಾಬ ಮುಲ್ಲಾನವರ. ವಯಾ: 32 ವರ್ಷ, ಸಾ: ಕಾಳಿದಾಸ ನಗರ ಕುಂದಗೋಳ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಈ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 112/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ  


3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ  ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮದ ಬ್ಯಾಡಕೆರಿ ಮುಂದೆ ಇರುವ ಪಂಚರ ಅಂಗಡಿಯ ಮುಂದೆ ಕಚ್ಚಾರಸ್ತೆ ಮೇಲೆ ಧಾರವಾಡ ಕಡೆಗೆ ಹೋಗುವ ವಾಹನಕ್ಕೆ ಕಾಯುತ್ತ ನಿಂತಿದ್ದ ಜನರಲ್ಲಿ  5 ಜನರಿಗೆ ಟಿಪ್ಪರ ಲಾರಿ ನಂ KA-25-D-6449 ನೇದರ ಚಾಲಕನಾದ ಬಾಬು ತಂದೆ ಮಕ್ತುಂಸಾಬ ಮುಲ್ಲಾನವರ ಸಾಃಹಾರೋಬೆಳವಡಿ ಇವನು ತನ್ನ ಟಿಪ್ಪರ ಲಾರಿಯನ್ನು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ  ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿಯ  ವೇಗ ನಿಯಂತ್ರಣ ಮಾಡಲಾಗದೇ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ 5 ಜನರಿಗೆ ಸಾದಾ ವ ಭಾರಿ ಸ್ವರೂಪದ ಗಾಯ ಪಡಿಸಿದ್ದಲ್ಲದೆ ಬಸವ್ವ ಕೋಂ ಅಡಿವೆಪ್ಪ ತಳವಾರ  ವಯಾ-50 ವರ್ಷ ಸಾ:ಅಮ್ಮಿನಭಾವಿ ಇವಳಿಗೆ ಭಾರಿ ಗಾಯ ಪಡಿಸಿ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕರೆದು ಕೊಂಡು ಬರುವಾಗ ಮಾರ್ಗ ಮದ್ಯ ಮರಣ ಪಡಿಸಿದ್ದಲ್ಲದೆ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 182/2018 ಕಲಂ 279.337.338.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರದ ಕಡಬಗಟ್ಟಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಪುಂಡಲೀಕ ತಂದೆ ಯಲ್ಲಪ್ಪ ಪರಸಣ್ಣವರ ಸಾಃ ಕತ್ರಿದಡ್ಡಿ ತಾಃ ಬೈಲಹೊಂಗಲ್ ಜಿಃ ಬೆಳಗಾವಿ ಇವನು ರಸ್ತೆಯ ಬದಿಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ಪಾಸ್ ವ ಪರ್ಮಿಟ ಇಲ್ಲದೇ ಅನಧಿಕೃತವಾಗಿ ಒಂದು ಕೈಚೀಲದಲ್ಲಿ ಸುಮಾರಿ 649 ರೂ ಕಿಮ್ಮಿತ್ತಿನ 180 ಹಾಗೂ 90 ಎಮ್ ಎಲ್ ದ ಬೆಂಗಳೂರ ಮಾಲ್ಟ ವೀಸ್ಕಿ ತುಂಬಿದ ಟೆಟ್ರಾ ಪಾಕೇಟಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಅದರಗುಂಚಿ ಗ್ರಾಮದ  ಮುತ್ತವ್ವ @ ಭಾರತಿ ತಂದೆ ಚನ್ನಬಸಪ್ಪ ಕಮಡೊಳ್ಳಿ ವಯಾ 19 ವರ್ಷ ಸಾ!! ಅದರಗುಂಚಿ ತಾ!! ಹುಬ್ಬಳ್ಳಿ ಇವಳು ದಿನಾಂಕ: 30-06-2018 ರಂದು 13-30 ಗಂಟೆ ಸುಮಾರಿಗೆ ಗಬ್ಬೂರಲ್ಲಿರುವ ರಿಲಾಯನ್ಸ್ ಮಾರ್ಕೆಟಿಂಗ್ ಕೆಲಸಕ್ಕೆ ಹೋಗುತ್ತೇನೆ ಅಂತ ಮನೆಯಿಂದ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 192/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, July 8, 2018

CRIME INCIDENTS 08-07-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-07-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಪಿ.ಬಿ.ರೋಡಿನ ಮೇಲೆ ಕೊಟೂರ ಕ್ರಾಸ ಹತ್ತೀರ ಇರುವ ಕೇರೆಮುಲ್ಲಾ ದಾಬಾದ ಎದುರಿಗೆ ಕಾರ ನಂ.ಕೆ.ಎ.25/ಎಮ.ಬಿ/9425 ನೇದ್ದರ ಚಾಲಕನಾದ ಹರೀಶ.ಭೀಮಪ್ಪ.ಕರಬಸಿ.ಸಾಃಧಾರವಾಡ ಇತನು ತೆಗೂರ ಕ್ರಾಸ್ ಕಡೆಯಿಂದ ದಾರವಾಡ ಕಡೆಗೆ ಅತೀಜೋರಿನಿಂದ ವ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ಕಾರಿನ ನಿಯಂತ್ರಣವನ್ನುಕಳೆದುಕೊಂಡು ಹೆದ್ದಾರಿಯ ಡಿವೈಡರಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದವರಿಗೆ ಸಾದಾ ವ ಭಾರಿ ಸ್ವರೂಪದ ಗಾಯ ಪಡಿಸಿ ತಾನೂ ಸಹ ಸಾದಾ ಸ್ವರೂಪದ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಾಸ್ತಿಕೊಪ್ಪ ಗ್ರಾಮದ  ಮೃತ ಬಸಮ್ಮ ಗಂಡ ಶಿವಬಸವನಗೌಡ ಜಂಗಳೆಪ್ಪಗೌಡ್ರ ವಯಾ 87 ವರ್ಷ, ಸಾ: ದಾಸ್ತಿಕೊಪ್ಪ ಹಾ:ವ: ತಂಬೂರ ಇವಳು ದಿನಾಂಕ: 04/07/2018 ರಂದು ರಾತ್ರಿ 09.00 ಗಂಟೆ ಸುಮಾರಿಗೆ ತನಗೆ ಚಳಿಯಾಗುತ್ತಿದೆ ಅಂತ ಒಲೆಯ ಮುಂದೆ ಕಾಯಿಸಿಕೊಳ್ಳುವಾಗ ಅವಳ ನೆದರು ಕಡಿಮೆ ಇದ್ದದ್ದರಿಂದ ಒಲೆಯ ಮುಂದೆ ಕಾಯಿಸಿಕೊಳ್ಳುತ್ತಿದ್ದಾಗ ಬೆಂಕಿಯು ಅವಳ ಸೆರಗಿಗೆ ಮತ್ತು ಸೀರೆಗೂ ಸಹ ಬೆಂಕಿ ಹತ್ತಿ ಸುಟ್ಟಗಾಯ ಮಾಡಿಕೊಂಡವಳಿಗೆ ಉಪಚಾರ ಕುರಿತು ಕಿಮ್ಸ್ ಹುಬ್ಬಳ್ಳಿಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದೇ ದಿ: 08/07/2018 ರಂದು ಮುಂಜಾನೆ 06.30 ಗಂಟೆಗೆ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಮಗ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 39/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.