ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, January 31, 2018

CRIME INCIDENTS 31-01-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-01-2018 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ  ಗ್ರಾಮದ ರೌಡಿ ಶೀಟರ್ಸ  ಆದ ಗಂಗಾಧರ ಧರೇಣ್ಣವರ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ  ಗುನ್ನಾನಂ 07/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ರಮೇಶ ಕಟ್ಟಿ  ಇತನು ರೌಡಿ ಶೀಟರ್ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ  ಗುನ್ನಾನಂ 08/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ರೌಡಿ ಶೀಟರ್ ಸುನೀಲ ಕುಂದಗೋಳ ಇತನು ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ ಗುನ್ನಾನಂ 09/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ

4. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಜುನಾಥ ತಂದೆ ಶಂಕ್ರಪ್ಪ ಅತ್ತಿಗೇರಿ ಸಾಃ ಬೂ ತರ್ಲಘಟ್ಟ ಇವರು ಖುದ್ದಾಗಿ ಠಾಣೆಗೆ ದೇವರಿಗೆ ಅಂತಾ ಹೋದಾಗ ನೆಲಗುಡ್ಡ ಗ್ರಾಮದ ಜನರು ಹನುಮಂತ ದೇವರ ಗುಡಿಯಲ್ಲಿರುವ ದೇವರ ಮೂರ್ತಿ ಡಬ್ಬ ಬಿದ್ದೈತಿ ಅಂತಾ ಮಾತನಾಡುವುದನ್ನು ಕೇಳಿ ತಮ್ಮ ಸಂಗಡ ಇನ್ನೂ 02 ಜನರನ್ನು ಕರೆಯಿಸಿ ನೋಡಿ ಹನುಮಂತ ದೇವರ ಗುಡಿಯಲ್ಲಿರುವ ಹನುಮಂತ ದೇವರ ಮೂರ್ತಿಯನ್ನು ಎತ್ತಿ ಇಟ್ಟಿರುವುದಾಗಿ ಮತ್ತು ಈ ಕೃತ್ಯವನ್ನು ದಿನಾಂಕಃ 28-01-2018 ರ ಮುಂಜಾನೆ 08-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆ ನಡುವಿನ ಅವಧಿಯಲ್ಲಿ ಯಾವುದೋ ಕಿಡಿಗೇಡಿ ಜನರು ಯಾವುದೋ ಧರ್ಮದ ಅವಹೇಳನಕರ ಕೆಲಸಕ್ಕಾಗಿ ಕೆಡವಿರಬಹುದು ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10./2018 ಕಲಂ 295.153 (ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಬುಡರಸಿಂಗಿ ಗ್ರಾಮ ಹದ್ದಿಯ,ಇಸ್ಮಾಯಲ್ ನಧಾಫ ಇವರ ಹೊಲದಲ್ಲಿ ನಿಲ್ಲಿಸಿದ್ದ, ಮೋಟಾರ ಸೈಕಲ್ ನಂಬರ ಕೆಎ-63-ಹೆಚ್-3676 ಚಾಸ್ಸಿ ನಂ. MBLHAR08XHHK04683  ಇಂಜಿನ್ ನಂ. HA10AGHHKA4611 C.Q 35000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ರುದ್ರಪ್ಪ ತಂದೆ ರಾಮಪ್ಪ ಹೆಬಸೂರ ಈತನು ಮಗಳ ಮದುವೆಗಾಗಿ  ಮತ್ತು ಮನೆಯ ಅಡಚನೆಗಾಗಿ ಊರಲ್ಲಿ 2-3 ಲಕ್ಷ ಸಾಲ ಮತ್ತು ನವಲಗುಂದ ಕೆವಿಜಿ ಬ್ಯಾಂಕ್ ನಲ್ಲಿ  25 ಸಾವಿರ ರೂ ಸಾಲ ಮಾಡಿದ್ದು ಸಾಲ ತೀರಿಸಲಾಗಲಿಲ್ಲವೆಂದು ಮಾನಸಿಕ ಮಾಡಿಕೊಂಡು ದಿನಾಂಕ 27-01-2018 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ತನ್ನಷ್ಟಕ್ಕೆ ತಾನೇ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಗೆ ದಾಖಲಿಸಿದಾಗ ಅಲ್ಲಿ ಉಪಚಾರ ಫಲಿಸದೆ ಈ ದಿವಸ ದಿನಾಂಕ 31-01-2018 ರಂದು 01-45 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇದೆಯೇ ವಿನಹಃ ಸದರಿಯವನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ಇರುವುದಿಲ್ಲ ಫಿಯಾಱಧೀ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 04/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗರಗ ಗ್ರಾಮದ  ಶ್ರೀಮಡಿವಾಳೆಶ್ವರ ಮಠದ ಪಿ.ಯು. ಕಾಲೇಜಿನ ಕಟ್ಟೆಯ ಮೇಲೆ ಒಬ್ಬ ಅನಾಮಧೇಯ ಗಂಡಸು ವ್ಯಕ್ತಿ ಅಜಮಾಸ 50 ರಿಂದ 52 ವಯಸ್ಸಿನವನು ಯಾವುದೋ ಕಾಯಿಲೆಯಿಂದ ಚಳಿಯಲ್ಲಿ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವಗೈರೆ ಕೊಟ್ಟ ವರದಿಯನ್ನು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, January 30, 2018

CRIME INCIDENTS 30-01-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-01-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ ಹತ್ತಿರ  ಆರೋಪಿತರಾದ 1) ಬಸವರಾಜ ಶಿವಪ್ಪ ಸವದತ್ತಿ,2)ರಾಜು ಶಿವಪ್ಪ ಸವದತ್ತಿ 3) ಕರೆವ್ವ ಕೋಂ ರಾಜು ಸವದತ್ತಿ ಇವರೆಲ್ಲರೂ ಕೂಡಿಕೊಂಡು ಪದ್ಮಾವತಿ ಸವದತ್ತಿ ಇವರ ಮನೆಯ ಒಳಗೆ ಹೊಕ್ಕು ಮನೆಯಿಂದ ಹೊರಗೆ ಹಾಕುವ ಉದ್ದೇಶದಿಂದ ಮನೆ ಬಗ್ಗೆ ಕೋರ್ಟನಲ್ಲಿ ದಾವಾ ಮಾಡಿದ್ದರ ಸಿಟ್ಟಿನಿಂದ ತಂಟೆ ತೆಗೆದು ಬೈದಾಡಿ ಕೈಯಿಂದ ಹಾಗೂ ಬಡಿಗೆಯಿಂದ ಹೊಡಿ ಬಡಿ ಮಾಡಿ ಸೀರೆ ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದಲ್ಲದೆ ಅವರ ಗಂಡನಿಗೆ ಹಾಗೂ ಮಗಳಿಗೆ ಸಹ  ಕೈಯಿಂದ ಹೊಡಿಬಡಿ ಮಾಡಿ ಅವಾಚ್ಯ ಬೈದಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 07/2018 ಕಲಂ 323.324.452.354.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ತಾರಿಹಾಳ ಗ್ರಾಮದ ನಿಮಱಲಾ ಮುತ್ತಗಿ ಇವರ ಮನೆಯ ಒಳಗೆ ಆರೋಪಿತರಾದ 1) ಕಲ್ಲಪ್ಪ ಕಲ್ಯಾಣಪ್ಪ ಮುತ್ತಗಿ 2) ಕಲ್ಯಾಣಪ್ಪ ಕಲ್ಲಪ್ಪ ಮುತ್ತಗಿ 3) ಸಂತೋಷ ಕಲ್ಲಪ್ಪ ಮುತ್ತಗಿ 4) ಸದಾನಂದ ಶಿವಾನಂದ ಬೆನಕಟ್ಟಿ 5) ಮಂಜುನಾಥ ಬಸವರಾಜ ಅಜಗೊಂಡ 6) ನಾಗರಾಜ ಬಸವರಾಜ ಅಜಗೊಂಡ ಎಲ್ಲರೂ ತಾರಿಹಾಳ 7) ಉಮೇಶ ಮಲ್ಲಪ್ಪ ಬಮ್ಮಿಗಟ್ಟಿ ಸಾ!! ಮುತ್ತಗಿ 8) ವೀರುಪಾಕ್ಷಪ್ಪ ಶಿವಪ್ಪ ಮುತ್ತಗಿ ಸಾ!! ತಾರಿಹಾಳ 9) ಶೇಖಪ್ಪ ಬಸಪ್ಪ ನವಣಿ ಸಾ!! ಮುತ್ತಗಿ ತಾ!! ಕಲಘಟಗಿ ಇವರುಗಳು ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪು ಕಟ್ಟಿಕೊಂಡು ಮನೆಯಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಜಮೀನನ್ನು ಸರಳ ಬಿಡಬೇಕು ಇಲ್ಲಾ ಅಂದರ ನಿನ್ನನ್ನು ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆಧರಿಕೆ ಹಾಕಿ ಕೈಯಿಂದ ಸೀರೆ ಹಿಡಿದು ಎಳೆದಾಡಿ ಮಾನಬಂಗಪಡಿಸಲು ಪ್ರಯತ್ನಿಸಿದ್ದಲ್ಲದೇ, ಬಿಡಿಸಲು ಹೋದ ಮಕ್ಕಳಾದ ಮಂಜುನಾಥ ಹಾಗೂ ಸಂತೋಷ ಇವರಿಗೂ ಸಹಾ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾ ಣೆಯಲ್ಲಿ ಗುನ್ನನಂ 28/2018 ಕಲಂ 134.147323.448.504 506.35 ನೇದ್ದರಲ್ಲಿ ಕ್ರಮವನ್ನು ದಾಲಿಸಿದ್ದು ಇರುತ್ತದೆ.

Monday, January 29, 2018

CRIME INCIDENTS 29-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-01-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಅಳ್ನಾವರ ರಸ್ತೆ ಪ್ರಭುನಗರ ಹೊನ್ನಾಪೂರ ಗ್ರಾಮದ ಹತ್ತಿರ ಟ್ರ್ಯಾಕ್ಟರ ಇಂಜಿನ ನಂ ಕೆಎ 25 ಟಿಎ 8699 ಟ್ರೇಲರ ನಂ ಕೆಎ 25 ಟಿಎ 8700 ಮತ್ತು ಕೆಎ 23 6728 ನೇದ್ದರ ಚಾಲಕನು ಟ್ರೇಲರ ಗಳಲ್ಲಿ ಕಬ್ಬನ್ನು ಹೇರಿಕೊಂಡು ತನ್ನ ಟ್ರ್ಯಾಕ್ಟರನ್ನು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಕಾರ ನಂ ಕೆಎ 25 ಎಂಬಿ 7672 ನೇದ್ದ್ಕಕೆ ತನ್ನ ಟ್ರ್ಯಾಕ್ಟರ ಟ್ರೇಲರದಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಕಾರ ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನೂ 5 ಜನರಿಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 36/2018 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಅಳಗವಾಡಿ ಗ್ರಾಮದ ಹತ್ತಿರ ಕಾಂಕ್ರೀಟ್ ಕಾಮಗಾರಿ ಸಂಬಂಧ ಗಿಡ್ಡಪ್ಪ ಹಣಸಿ  ಮತ್ತು ಅವರ ಮನೆಯ ಜನರ ಮೇಲಿನ ಸಿಟ್ಟಿನಿಂದ ಗೈರು ಕಾಯ್ದೆ ಶಿರ್ ಮಂಡಳಿಯಾಗಿ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಬೈದಾಡುತ್ತಾ ಬಡಿಗೆಯಿಂದ ಹೊಡಿ-ಬಡಿ ಮಾಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿ ಹೆಂಡತಿ ನೀಲಮ್ಮ ಸೊಸೆ ಯಲ್ಲಮ್ಮ ಇವರಿಗೂ ಸಹ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 143.147.148.323.324.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ, ಬುಡನಾಳದ ಸಂತೋಷ ಆರ್. ಶೆಟ್ಟರ ಇವರ ಹೊಲದ ಮನೆಯಿಂದ, ಕು. ಸೌಮ್ಯ ತಂದೆ ಬಸವರಾಜ ಜಮ್ಮಿಹಾಳ ವಯಾ. 21 ವರ್ಷ ಇವಳು ಮನೆಯಲ್ಲಿ, ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೋದವಳು, ಇಲ್ಲಿಯವರೆಗೆ ಮನೆಗೆ ಮರಳಿ ಬಾರದೇ, ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇನಾಂಮವೀರಾಪೂರ ಗ್ರಾಮದ ದೇವನಗೌಡ ಪಾಟೀಲ ಇವರ ಹೊಲದ ಹತ್ತಿರ ಗುಡ್ಡದ ತಗ್ಗಿನಲ್ಲಿ ಮೃತ  ಮಂಜುನಾಥ ದೇವಪ್ಪ ಸಲಗಾರ 65 ವರ್ಷ ಇವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ತನಿಖೆಯನ್ನು ಕೈಗೂಂಡಿದ್ದುಇರುತ್ತದೆ.


Sunday, January 28, 2018

CRIME INCIDENTS 28-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-01-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 28-01-2018 ರಂದು ಬೆಳಿಗ್ಗೆ 05-45 ಗಂಟೆ ಸುಮಾರಿಗೆ  ಇದರಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಲಾರಿ ನಂ ಕೆಎ-29/ಬಿ-3981 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನರಗುಂದ ಕಡೆಗೆ ಅಮರಗೋಳ ಹದ್ದಿಯಲ್ಲಿ ಕಲಕೆರಿಯಿಂದ ಎರಡು ಕಿ.ಮೀ ಅಂತರದಲ್ಲಿ ಅತೀವೇಗದಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ನರಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಪಿರ್ಯಾದಿ ವಿನಯ ಪಾಟೀಲ ಇವರ ಕಾರ್ ನಂ ಕೆಎ-04/ಎಮ್.ಎಫ್-1252 ನೇದ್ದಕ್ಕೆ ಬಲಸೈಡ್ ಮುಂಭಾಗಕ್ಕೆ ಡಿಕ್ಕಿ ಮಾಡಿ ಕಾರ್ ಜಖಂಗೊಳಿಸಿ ಲಾರಿ  ಬಿಟ್ಟು ಹೋಡಿ ಹೋದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 05-2018 ಕಲಂ INDIAN MOTOR VEHICLES ACT, 1988 (U/s-134(B)); IPC 1860 (U/s-279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 28-01-2018 ರಂದು ಮದ್ಯರಾತ್ರಿ 01-00 ಗಂಟೆ ಯಿಂದ ಬೆಳಗಿನ 07-00 ಗಂಟೆ ನಡುವಿನ ಅವಧಿಯಲ್ಲಿ ಪುನಾ ಬೆಂಗಳೂರ  ರಸ್ತೆಯ ತಾರಿಹಾಳ ಹದ್ದಿಯ ಹವಾವಾಲ್ಸ್ ಫ್ಯಾಕ್ಟರಿ ಹತ್ತಿರ ಪಿರ್ಯಾದಿ ಪ್ರಮೋದ ಚಿನ್ನಪ್ಪ ಚಿಕ್ಕಲಕರ ಸಾ. ಧಾರವಾಡ ಇವರ ತಮ್ಮ ಮೃತ ವಿನೋಧ ಚಿನ್ನಪ್ಪ ಚಿಕ್ಕಲಕರ 28 ವರ್ಷ ಸಾ. ಧಾರವಾಡ ಇವನು ನಡೆಸುತ್ತಿದ್ದ ಮೋಟರ ಸೈಕಲ್ ನಂಬರ ಕೆ.ಎ-25/ಇ.ಎಂ-0165 ನೇದ್ದನ್ನು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ  ಅತಿ ವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ಸ್ಕಿಡ್ಡಾಗಿ ಮೋಟರ ಸೈಕಲ್ ಸಮೇತ ರಸ್ತೆ ಬದಿಯ ತಗ್ಗಿನಲ್ಲಿ ಕೆಡವಿ ತೆಲೆಗೆ ಮುಖಕ್ಕೆ ಭಾರಿ ರಕ್ತಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಪಡಿಸಿಕೊಂಡ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 25/2018 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 34/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 27-01-2016 ರಂದು 2200 ಗಂಟೆ ಸುಮಾರಿಗೆ ಧಾರವಾಡ ಕಲಘಟಗಿ ರಸ್ತೆ  ಕಣವಿಹೊನ್ನಾಪೂರ ಗ್ರಾಮದ ಇಂಚಲ ಇವರ ಜಮೀನ ಹತ್ತಿರ  ಲಾರಿ ನಂ MH04GF1937 ನೇದ್ದರ ಚಾಲಕ ಸಂತೋಷ ಇತನು  ತನ್ನ ಲಾರಿಯನ್ನು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಅದೇ ಮಾರ್ಗವಾಗಿ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದಸ್ದ ಪಿರ್ಯಾದಿದಾರ ಚನ್ನಬಸಪ್ಪ ಬಜಂತ್ರಿ ಇವನ ಚಕ್ಕಡಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಚಕ್ಕಡಿಯನ್ನು ಜಖಂಗೋಳಿಸಿ ಲುಕ್ಸಾನ ಪಡಿಸಿದ್ದಲ್ಲದೆ ಪಿರ್ಯಾದಿಗೆ ಮತ್ತು ಚಕ್ಕಡಿಯಲ್ಲಿದ್ದ ಇನ್ನೂ 3 ಜನರಿಗೆ  ಸಾದಾ ವ ಬಾರೀ ಸ್ವರೂಪದ ಗಾಯ ಪಡಿಸಿದ್ದಲ್ಲದೆ ಹಾಗೂ  ಎತ್ತುಗಳಿಗೆ ಗಾಯ ಪಡಿಸಿದ  ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 35/2018 ಕಲಂ IPC 1860 (U/s-427,279,338,337) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 19/2018, 20/2018 & 21/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

Friday, January 26, 2018

CRIME INCIDENTS 26-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-01-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗದಗ ಹುಬ್ಬಳ್ಳಿ ರೋಡ ಹತ್ತಿರ ಆರೋಪಿ ಟಿಪ್ಪರ ಲಾರಿ ನಂಬರ KA-25/D-1348 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅಣ್ಣಿಗೇರಿ ಕಡೆಯಿಂದ ಗದಗ ಕಡೆಗೆ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸವಳಹಳ್ಳ ಬ್ರಿಡ್ಜ ಮೇಲೆ ತನ್ನ ಮುಂದೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಟಾಟಾ ಇಂಡಿಕಾ ವ್ಹಿ2 ಕಾರ ನಂಬರ KA-25/Z-2957 ನೇದ್ದನ್ನು ಓವರಟೇಕ ಮಾಡಲು ಅಂತಾ ತನ್ನ ಬಲಸೈಡಿಗೆ ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ಕಾರಿನ ಮುಂದಿನ ಬಲಸೈಡಿನ ಭಾಗಕ್ಕೆ ಡಿಕ್ಕಿ ಮಾಡಿ ನಂತರ ತನ್ನ ಎಡಸೈಡಿಗೆ ಹೋಗಿ ಸವಳಹಳ್ಳ ಬ್ರಿಡ್ಜ ತಡೆಗೋಡಗೆ ಡಿಕ್ಕಿ ಮಾಡಿ ಗೋಡೆ ಒಡೆದು ಲಾರಿಯನ್ನು ಕೆಳಗಡೆ ಕೆಡವಿ ಜಖಂಗೊಳಿಸಿ ತನೆಗೆ ಸಾಧಾ ವ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಧಾರವಾಡ-ಗರಗ ರಸ್ತೆಯ ಹತ್ತಿರ ಗರಗ ಆರೋಪಿತನಾದ ದತ್ತಾತ್ರಯ ತಂದೆ ಭೀವಾ ಡೊಂಗರೆ. ಸಾಃ ಉಪಳಿ. ತಾಃ ನಡವಣೆ. ಜಿಃ ಬೀಡ.  ರಾಜ್ಯಃ ಮಹಾರಾಷ್ಟ್ರ ಇತನು ತನ್ನ ಬಾಬತ್ತ ಲಾರಿ ನಂಬರಃ ಎಮ್ಎಚ-04-ಸಿಪಿ-3266 ನೇದ್ದನ್ನು ಧಾರವಾಡ ಕಡೆಯಿಂದಾ ಗರಗ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ತನ್ನ ಎದುರಿಗೆ ಬರುತ್ತಿದ್ದ ಮೋಟಾರ ಸೈಕಲ ನಂಬರಃ ಕೆಎಃ25/ಇಬಿ/8818 ನೇದ್ದಕ್ಕೆ ಲಾರಿ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ ಸವಾರನಿಗೆ ಸ್ಥಳದಲ್ಲಿಯೇ ಮರಣಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶೆಲವಡಿ ಗ್ರಾಮದ  ಮೃತಳಾದ ಶಶಿಕಲಾ ತಂದೆ ರಾಮಪ್ಪ ದೊಡ್ಡಮನಿ ಇತಳಿಗೆ ಸುಮಾರು ಒಂದು ವರ್ಷದಿಂದ ಹೊಟ್ಟಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಎಲ್ಲಾಕಡೆ ಗೌಂಟಿ ಔಷಧ ಕೊಡಿಸಿದ್ದರು ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲಾ ಇದರಿಂದ ಮಾನಸಿಕ ಮಾಡಿಕೊಂಡು ದಿನಾಂಕ:25-01-2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ವಿಷಕಾರಿಕ ಎಣ್ಣೆಯನ್ನು ಸೇವನೆ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆಂದು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಿದರು ಅಲ್ಲಿ  ಉಪಚಾರ ಫಲಿಸದೇ ದಿನಾಂಕ 25-01-2018 ರಂದು ರಾತ್ರಿ 11-30 ಗಂಟೆ ಸುಮಾರು ಮೃತಪಟ್ಟಿರುತ್ತಾಳೆ  ಸದರಿ ಮೃತಳ ಮರಣದಲ್ಲಿ ಯಾರ ಮೇಲೂ ಸಂಶಯ ಇರುವದಿಲ್ಲಾ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.