ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, January 1, 2018

CRIME INCIDENTS 01-01-2018ಹೊಸ ವರ್ಷದ ಹಾರ್ದಿಕ ಶುಭಾಷಯಗಳು

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-01-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಂಗೋಲಿ ಫ್ಯಾಕ್ಟರಿಯಲ್ಲಿ, ಇದರಲ್ಲಿ ಮೃತ ಹಜರತಸಾಬ ಕರೀಂಸಾಬ ಕಿತ್ತೂರ ವಯಾ. 28 ವರ್ಷ ಸಾ. ಹಳೆ ಹುಬ್ಬಳ್ಳಿ, ಬಾಣತಿಕಟ್ಟಿ ಇವರು ಮನೆಯಲ್ಲಿ ಜಗಳ ಮಾಡಿಕೊಂಡಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡು, ತಾನೂ ಕೆಲಸ ಮಾಡುತ್ತಿರುವ ರಂಗೋಲಿ  ಫ್ಯಾಕ್ಟರಿಯಲ್ಲಿ ತನ್ಸಷ್ಣಕ್ಕೆ ತಾನೇ ವೇಸ್ಟ್ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿನಃ ಸದರಿಯವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಫಿಯಾಱಧಿ ನಿಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 01/2018.02/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹಳಿಯಾಳ ಗ್ರಾಮದ ಹತ್ತಿರ  ಮಲ್ಲಿಕಾರ್ಜುನಗೌಡ ತಂದೆ ಯಲ್ಲಪ್ಪಗೌಡ ನಾಗನಗೌಡರ ವಯಾ.39 ವರ್ಷ ಸಾಃ ಹಳಿಯ್ಯಾಳ ಇವರು ಹೊಲದಿಂದ ಮನೆಗೆ ಮೋಟರ ಸೈಕಲ್ ನಂಬರ ಕೆ.ಎ-26/ವಾಯ್-2086 ನೇದ್ದನ್ನು ನಡೆಯಿಸಿಕೊಂಡು ಬರುತ್ತಿರುವಾಗ  ಆರೋಪಿತನಾದ  ಸೋಮು ಬುಳಪ್ಪ ಬುಳಪ್ಪನವರ ಇವರು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆ.ಎ-25/ಇ.ಝಡ್-5728 ನೇದ್ದನು  ಹಳಿಯ್ಯಾಳ ಕಡೆಯಿಂದ ಕುಸುಗಲ್ಲ ಕಡೆಗೆ ಬಹಳ ಜೋರಿನಿಂದ,ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಯಾವುದೇ ಸಿಗ್ನಲ್ ವಗೈರೆ ಕೊಡದೆ ಒಮ್ಮೇಲೆ ತನ್ನ ಮೋಟರ ಸೈಕಲ್ಲನ್ನು ರಾಂಗ್ ಸೈಡ್ ತಗೆದುಕೊಂಡವನೆ ಮೋಟರ ಸೈಕಲ್ಲಕ್ಕೆ ಡಿಕ್ಕಿ ಮಾಡಿ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2018 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.