ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 2, 2018

CRIME INCIDENTS 02-01-2018

           
             ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 02-01-2018 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 01-01-2018  ರಂದು 0930 ಗಂಟೆಗೆ ಹೆಬ್ಬಳ್ಳಿ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದೆ ರಸ್ತೆ ಮೇಲೆ ಮೋಟರ್ ಸೈಕಲ ನಂ KA-25-EP-0657 ನೇದರ ಚಾಲಕನು ತನ್ನ ಮೋಟರ್ ಸೈಕಲನ್ನು  ಹೆಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಹೆಬ್ಬಳ್ಳಿ ಗ್ರಾಮದ ಕಡೆಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ದಾಟುತ್ತಿದ್ದ ನೀಲಪ್ಪ ಗುಡದಪ್ಪ ಕಾಲವಾಡ ವಯಾ-44 ವರ್ಷ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಬಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 31-12-2017 ರಂದು 1900 ಗಂಟೆಗೆ NH-04 ರಸ್ತೆ ನರೆಂದ್ರ ಕ್ರಾಸ ಓವರ ಬ್ರೀಜ್ಡ್ ಹತ್ತಿರ ಸರ್ವಿಸ್ ರಸ್ತೆ ಮೇಲೆ ಕಾರ ನಂ KA-25-MA-2893 ನೇದರ ಚಾಲಕನು ತನ್ನ ಕಾರನ್ನು  ನರೇಂದ್ರ ಕ್ರಾಸದಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು  NH-04 ಓವರ ಬ್ರೀಡ್ಜ ಕಡೆಯಿಂದ ನರೇಂದ್ರ ಕ್ರಾಸ ಕಡೆಗೆ  ಹೋಗುತ್ತಿದ್ದ ಪಿರ್ಯಾದಿದಾರರ ಮೋಟರ್ ಸೈಕಲ ನಂ KA-25-ER-6485 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಮೋಟರ್ ಸೈಕಲ ಚಾಲಕ ಪಿರ್ಯಾದಿಗೆ ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ ಪಿರ್ಯಾದಿಯ ತಂದೆ ಅಜ್ಜಪ್ಪ ಕನಾಜನವರ ಇವರಿಗೆ ಬಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿದಾರನ ಮಗಳಾದ ಶ್ರೀಮತಿ ರೇಣುಕಾ ಕೋಂ ಲಕ್ಷ್ಮಣ ಗುಡ್ಡಮ್ಮನವರ, ವಯಾ: 28 ವರ್ಷ, ಸಾ: ಕೋಳಿವಾಡ ತಾ: ಹುಬ್ಬಳ್ಳಿ ಹಾಲಿ: ಚಿಕ್ಕನರ್ತಿ ತಾ: ಕುಂದಗೋಳ ಇವಳು ತನಗೆ ಮದುವೆಯಾಗಿ  9 ವರ್ಷವಾದರೂ ಮಕ್ಕಳು ಆಗಿರುವುದಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೇ ತಾನೇ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆಯಲ್ಲಿ ಯಾವುದೋ ವಿಷಕಾರಕ ಪದಾರ್ಥವನ್ನು ಸೇವನೆ ಮಾಡಿದ್ದು ಅವಳಿಗೆ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಉಪಚಾರ ಫಲಿಸದೇ ದಿನಾಂಕ: 01-01-2018 ರಂದು ರಾತ್ರಿ 8-20 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 31/12/2017 ರಂದು ಮುಂಜಾನೆ 10.00 ಗಂಟೆಗೆ ಮನೆಯಿಂದ ಮೃತ ಮಂಜುನಾಥ ಸಂಗಪ್ಪ ಮೇಟಿ ತನ್ನ ಹೆಂಡತಿಯೊಂದಿಗೆ ಹೊಲಕ್ಕೆ ಹೋದವನು ಮನೆಗೆ ಬಾರದೇ ಇರುವದರಿಂದ  ಇಂದೇ ದಿವಸ ಅವನ ಹೆಂಡತಿ ಸಾಯಂಕಾಲ ಒಬ್ಬಳೇ ಮನೆಗೆ ಬಂದಿದ್ದರಿಂದ ತಮ್ಮನು ಎಲ್ಲಿ ಹೋಗಿದ್ದಾನೆ ಎಂಬುದು ತಿಳಿಯದಾಗಿದ್ದರಿಂದ ಹಾಗೂ ಅವನ ನಿಖರವಾದ ತಿರುವಿಕೆ ತಿಳಿಯದೇ ಇರುವದರಿಂದ ಹುಡುಕಾಡಲು ಸಿಗದೇ ಇದ್ದವನು ಈ ದಿವಸ ದಿನಾಂಕ: 02/01/2018 ರಂದು ಮುಂಜಾನೆ 9.30 ಗಂಟೆಗೆ ಜಿಯೋಜಿರವರ ಹೊಲದಲ್ಲಿ ಶವವಾಗಿ ದೊರೆತಿದ್ದು ಅವನ ಮರಣದಲ್ಲಿ ಸಂಶಯ ಇರುವುದಾಗಿ ಮೃತನ ಅಕ್ಕ ವರದಿ ಕೊಟ್ಟಿದ್ದು ಇರುತ್ತದೆ. ಕಾರಣ ಈ ಕುರಿತು ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.