ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, January 4, 2018

CRIME INCIDENTS 04-01-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-01-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ಹತ್ತಿರ ವಿನೋದ ಪುಟ್ಟೇದಾರ ಇತನು  ತನ್ನ ಕಾರ ನಂ. ಕೆ.ಎ.23/ಎನ್/5998 ನೇದ್ದನ್ನು ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜತನದಿಂದ ನಡೆಯಿಸಿಕೊಂಡು ಬಂದು ಧಾರವಾಡ ಹೈಕೊರ್ಟ ಹತ್ತೀರ ತನ್ನ ಮುಂದೆ ಹೋಗುತ್ತಿದ್ದ ಲಾರಿ ನಂ.ಕೆ.ಎ.42/9448 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದವರಿಗೆ ಸಾದಾ ವ ಭಾರಿ ಸ್ವರೂಪದ ಗಾಯ ಪಡಿಸಿ ತನಗೂ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ ಠಾಣೆಯಲ್ಲಿ ಗುನ್ನಾನಂ 02/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರಗುಪ್ಪಿ ಗ್ರಾಮದ ನಾಗಪ್ಪ ರಾಮಪ್ಪ ಕಾಳಿ ವಯಾ. 36 ವರ್ಷ ಸಾ. ಶಿರಗುಪ್ಪಿ ಇವನು ಮನೆಯಲ್ಲಿ ಹುಬ್ಬಳ್ಳಿಗೆ ಹೋಗಿ ಶೆವಿಂಗ್ ಮಾಡಿಸಿಕೊಂಡು ಬರುತ್ತೇನೆ ಅಂತ ಹೇಳಿ ಹೋದವನು, ಮರಳಿ ಮನೆಗೆ ಬಾರದೇ, ಇಲ್ಲಿಯವರೆಗೆ ಎಲ್ಲ ಕಡೆ ಹುಡುಕಾಡಿದರು ಎಲ್ಲಿಯೇ ಸಿಗದೇ ಕಾಣೆಯಾಗಿದ್ದು, ಸದರಿಯವನು ಮಾನಸಿಕ ಅಸ್ವಸ್ಥನಿರುತ್ತಾನೆ. ಕಾಣೆಯಾದ ತನ್ನ ಗಂಡನಿಗೆ ಹುಡುಕಿಕೊಡಬೇಕೆಂದು ಕಾಣೆಯಾದವನ ಹೆಂಡತಿ ಗೀತಾ ಕೋಂ ನಾಗಪ್ಪ ಕಾಳಿ ಇವರು ಪಿರ್ಯಾದಿ ಕೊಟ್ಟಿದ್ದು ಇರುತ್ತದೆ.ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2018 ಕಲಂ ಮನುಷ್ಯ ಕಾಣೆ ಪ್ರಕರದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದ, ಹವಾ ವಾಲ್ವ್ಸ್ ಫ್ಯಾಕ್ಟರಿಯ ಮುಂದೆ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಲಾರಿ ನಂ. ಜಿ.ಜೆ-15-ಎ.ಟಿ-0940 ನೇದ್ದರ ಚಾಲಕ ರಾಮೇಶ್ವರ ಶಿವಾಜಿ ಕುಂಡಗಿರ ಸಾ. ಜುನ್ನಾ ಪೊ. ಶಿಕಾರಾ ತಾ. ಮುಖೇಡ್ ಜಿ. ನಾಂದೇಡ್ ರಾಜ್ಯ ಮಹಾರಾಷ್ಟ್ರ ಇವನು ಲಾರಿಯನ್ನು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಲಾರಿ ನಂ. ಕೆಎ-25-ಬಿ-2386 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ, ಲಾರಿಯನ್ನು ತೆಗ್ಗಿನಲ್ಲಿ ಕೆಡವಿ ಲಾರಿ ಜಖಂಗೊಳಿಸಿದ್ದು  ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಗೀತಾ ಕಾಳೆ ಇವರು ಕೆಲಸ ಮಾಡುತ್ತಿರುವ ರಿವಿಗೋ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಫಿಸದಲ್ಲಿ, ಆರೋಪಿ ತಾಜಹುಸೇನ ತಂದೆ ಜಬ್ಬಾರ ಸಾ. ಬನಸಿದ ತಾ. ಬನಸಿದ ಜಿ. ಬಲ್ಲಿಯಾ ರಾಜ್ಯ ಉತ್ತರ ಪ್ರದೇಶ ಇವನು ತಾನು ಕೆಲಸ ಮಾಡುತ್ತಿದ್ದ ರಿವಿಗೋ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಎ.ಟಿ.ಎಂ ಕಾರ್ಡನ್ನು ಯಾರಿಗೂ ಹೇಳದೇ ಕೇಳದೇ ತೆಗೆದುಕೊಂಡು, ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದ ವಿಜಯಾ ಬ್ಯಾಂಕ ಎ.ಟಿ.ಎಂ. ಮಶೀನದಲ್ಲಿ ರೂ. 20,000/- ಗಳನ್ನು, ದಿನಾಂಕ: 30-12-2017 ರಂದು ಉತ್ತರಪ್ರದೇಶ ರಾಜ್ಯ ಬನಸಿದ ಶಹರದ ಎ.ಟಿ.ಎಂ. ಮಶೀದನದಲ್ಲಿ ರೂ. 20,000/-  ಮತ್ತು ದಿನಾಂಕ: 31-12-2017 ರಂದು ಬಲ್ಲಿಯಾ ಶಹರದಲ್ಲಿಯ ಎ.ಟಿ.ಎಂ. ಮಶೀನದಲ್ಲಿ ರೂ. 20,000/- ಗಳನ್ನು ಡ್ರಾ ಮಾಡಿಕೊಂಡು, ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು, ಕಂಪನಿಗೆ ವಂಚನೆ ಹಾಗೂ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 409.420.417 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ಗುರುಸಿದ್ದಪ್ಪಾ ಸೋಮರೆಡ್ಡಿ ಇವರ ಮನೆಯಲ್ಲಿ ಆರೋಪಿತರಾದ 1) ಸಂಗನಗೌಡ ಬಸವರಾಜ ಪೊಲೀಸಪಾಟೀಲ ಸಾ!! ಹಂಪನಾಳ ತಾ!! ಸಿಂಧನೂರ 2) ವೆಂಕನಗೌಡ ಬಸವರಾಜ ಪೊಲೀಸಪಾಟೀಲ ಸಾ!! ಹಂಪನಾಳ ತಾ!! ಸಿಂಧನೂರ  3) ಶರಣಪ್ಪ ಬಸನಗೌಡ ಹೊಸಗೌಡ್ರ ಸಾ!! ತುರುವಿಹಾಳ ತಾ!! ಸಿಂಧನೂರ 4) ವೀರಭದ್ರಗೌಡ ಬಸನಗೌಡ ಪೊಲೀಸಪಾಟೀಲ ಸಾ!! ತುರುವಿಹಾಳ ಇವರುಗಳು ಪಿರ್ಯಾಧಿ ಗುರುಸಿದ್ದಪ್ಪ ಹನಮಂತಪ್ಪ ಸೋಮರೆಡ್ಡಿ ಸಾ!! ಹಳ್ಯಾಳ ಇವರ ಮನೆಯೊಳಗೆ ಅತೀಕ್ರಮಣ ಪ್ರವೇಶ ಮಾಡಿ ಜಮೀನಕ್ಕೆ ಸಂಬಂಧಿಸಿದಂತೆ ಜೊತೆಗೆ ಇದ್ದ ಪಿರ್ಯಾಧಿ ಹೆಂಡತಿ ಗೌರಮ್ಮ ಕೊಂ ಗುರುಸಿದ್ದಪ್ಪ ಸೋಮರೆಡ್ಡಿ ಇವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಅವರ ಕೂದಲು ಹಾಗೂ ಸೀರೆ ಹಿಡಿದು ಎಳೆದಾಡಿ ಮಾನಬಂಗಪಡಿಸಲು ಪ್ರಯತ್ನಿಸಿದ್ದಲ್ಲದೇ, ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 07/2017 ಕಲಂ 323.448.341.354(ಎ)504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಗ್ರಾಮ ಪಂಚಾಯಿತಿ ಮೃತ ಗಂಗವ್ವಾ ಕೋಂ ರಾಜು ಅತ್ತಿಗೇರಿ 30 ವರ್ಷ ಸಾ..ದಾಸ್ತಿಕೊಪ್ಪ ಇವಳು  ಮನೆಯಿಂದಾ ಯಾರಿಗೂ ಹೇಳದೆ ತವರು ಮನೆಗೆ  ಬೇರೆ ಕಡೆಗೆ ಹೋಗುವದು ಬರುವದು ಮಾಡುತ್ತಿದ್ದರಿಂದ ದುಡುಕು ಸ್ವಭಾದವಳು ಇದ್ದುದರಿಂದ ಅವಳ ಮನೆಯ ಜನರು ಅವಳಿಗೆ ಮನೆ ಬಿಟ್ಟು ಹೋಗಬಾರದು ಅಂತಾ ಬುದ್ದಿವಾದ ಹೇಳಿದರೂ ಸಹಾ ಕೇಳದೆ  ಅದೆ ತರಹ ಮಾಡುತ್ತಿದ್ದರಿಂದ ಗಂಗವ್ವಳ ಗಂಡ ರಾಜು ಇವನು ಬೈದು ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ದುಡುಕಿನಿಂದಾ ಎಲ್ಲಿಯೋ ಹೋಗಿ ಯಾವುದೋ ವಿಷಕಾರಿ ಎಣ್ಣೆಯನ್ನು ಕುಡಿದಾಗ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೆ ದಿ..04-01-2017 ರ ಬೆಳಗಿನ 02-00 ಗಂಟೆಯ ಸುಮಾರಿಗೆ ಮರಣಹೊಂದಿದ್ದು ಅವಳ ಮರಣದಲ್ಲಿ ಯಾವುದೆ ಸಂಶಯ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2018 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.