ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, January 5, 2018

CRIME INCIDENTS 05-01-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-01-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ಬಸಸ್ಟ್ಯಾಂಡ ಮಂಜುನಾಥ ಮದ್ನಹಳ್ಳಿ ಇತನು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಾ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ ಸೈಕಲ್ ಗಳ ಹೆಂಡಲ್ ಗಳನ್ನು ಅಲುಗಾಡಿಸುವುದು ಹಾಗೂ ಅವುಗಳ ಸೈಡ ಬ್ಯಾಗಗಳಲ್ಲಿ ಕೈ ಹಾಕಿ ಬ್ಯಾಗಿನಲ್ಲಿ ಇಣುಕಿ ನೋಡುವುದು ಮಾಡುತ್ತಾ ಯಾವುದಾದರೂ ಕಳುವಿನ ಗುನ್ನೆ ಮಾಡುವ ಇರಾದೆಯಲ್ಲಿದ್ದಾಗ ಸಿಕ್ಕಿದ್ದು ಸದರಿಯವನ ಮೇಲೆ ಮುಂಜಾಗೃತಾ ಕ್ರಮವಾಗಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2017 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮನಕೊಪ್ಪ ಗ್ರಾಮದ ಗ್ರಾಮ ಪಂಚಾಯತಿ ಮುಂದೆ ಸಾರ್ವಜನೀಕ ರಸ್ತೆ ಬದಿಗೆ ಇದರಲ್ಲಿ ಆರೋಪಿತನಾದ ರಾಜು ಸೋಮಪ್ಪ ಕುರಾಡೆ. ವಯಾ: 31 ವರ್ಷ, ಸಾ: ರಾಮನಕೊಪ್ಪ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣವನ್ನು ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 485-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 78(3) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
 
3. ಕಲಘಟಗಿ ಪೊಲಿಸ್ ಠಾಣಾ ವ್ಯಾಪ್ತಿಯ: ಹಿರೇಹೊನ್ನಳ್ಳಿ ಗ್ರಾಮದ ಸುನೀಲ್ ತಂದೆ ಸಹದೇವಪ್ಪಧನಿಗೊಂಡ ರವರ ಹೊಲದಲ್ಲಿ ಹೆಸರು ಪೀಕು ಕಟಾವು ಮಾಡಲು ಕೂಲಿ ಕೆಲಸಕ್ಕೆ ಹೋಗಿದ್ದಾಗ ಹೆಸರು ಪೀಕು ಕಟಾವು ಮಾಡುವಾಗ ಮೃತ  ಅಕ್ಕಮ್ಮ ಇವರಿಗೆ  ಮದ್ಯಾಹ್ನ 12.30 ಗಂಟೆ ಸುಮಾರಿಗೆ ಅವಳ ಎಡಗಾಲ ಹೆಬ್ಬೆರಳಿಗೆ ಯಾವುದೋ ಒಂದು ವಿಷಪೂರಿತ ಹಾವು ಕಚ್ಚಿ ಉಪಚಾರಕ್ಕೆ ಅಂತ ಕಲಘಟಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಅಂಬುಲೆನ್ಸದಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕಲಘಟಗಿ ಎ.ಪಿ.ಎಮ್.ಸಿ ಹತ್ತಿರ ಮೃತಪಟ್ಟಿದ್ದು ಅವಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ತಮ್ಮ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.