ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, January 6, 2018

CRIME INCIDENTS 06-01-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-01-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಬಸಸ್ಟ್ಯಾಂಡ ಹತ್ತಿರ ಆರೋಪಿತನಾದ ಮಾಬುಸಾಬ ನಭೀಸಾಬ ನದಾಫ. ವಯಾ: 56 ವರ್ಷ, ಸಾ: ಬೆಟದೂರ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 700-00 ರೂ ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 07/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ ಮೃತ ಶಿವಯೋಗಿ ಮಾಂತಯ್ಯಾ ಹಿರೇಮಠ ವಯಾ.45 ವರ್ಷ ಸಾ.ಗುಡಿಹಾಳ ಹಾಲಿ ಅಂಚಟಗೇರಿ ಇತನು ಕಲಘಟಗಿಯ ಹರ್ಷ ಎಂಟರ ಪ್ರೈಸಸನಲ್ಲಿ ಹಣ ಹೂಡಿ ಲುಕ್ಸಾನ್ ಆಗಿ ಮತ್ತು ಇವನಿಂದ ಹಣವನ್ನು ಇಸಿದ್ದುಕೊಂಡವರು ಹಣವನ್ನು ಮರಳಿ ಕೊಡದಕ್ಕೆ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿನಾಂಕಃ 05-01-2018 ರ ಮುಂಜಾನೆ 11-30 ಗಂಟೆಯಿಂದ ರಾತ್ರಿ 8-30 ಗಂಟೆ ನಡುವಿನ ಅವಧಿಯಲ್ಲಿ ತಾನು ವಾಸವಾಗಿದ್ದ ಅಂಚಟಗೇರಿ ಗ್ರಾಮದ ಬಾಡಿಗೆ ಮನೆಯ ಬೇಡ್ ರೂಮ್ ನಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೆ ಹಗ್ಗದಿಂದ ಉರ್ಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಹ ಸದರಿಯವನ ಮರಣದಲ್ಲಿ ನನ್ನದಾಗಲ್ಲಿ ನಮ್ಮ ಮನೆಯವರದಾಗಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2018 ಕಲಂ 174 ಸಿ.ಆರ್.ಪಿ ಸಿ ನೇದ್ರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.