ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, January 8, 2018

CRIME INCIDENTS 08-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-01-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಧಾರವಾಡ ಗ್ರಾಮೀಣ ಗ್ರಾಮದ ಹತ್ತಿರ  ಮಂಜಳಕರ ಇವರ ಮನೆಯ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಹ್ಯಾಪಿ ನ್ಯೂ ಈಯರ ದರ್ಶನ ಅಂತಾ ಸುಣ್ಣದಿಂದ ಬರೆದಿದ್ದು ಇದನ್ನು ಸಹಿಸದ  ಆರೋಪಿತರಾದ 1.ಮಂಜುನಾಥ ಹಳಿಯಾಳ ಹಾಗೂ ಇನ್ನೂ 09 ಜನರು ಕೊಡಿಕೊಂಡು ರಾಜು ಮಂಜಳಕರನೊಂದಿಗೆ ತಂಟೆ ತೆಗೆದಿದ್ದು ಈ ಬಗ್ಗೆ ಹಿರಿಯರು ಇಬ್ಬರಿಗೂ ಬುದ್ದಿ ತಿಳುವಳಿಕೆ ಹೇಳಿದ್ದು ಇರುತ್ತದೆ ಇದೇ ಸಿಟ್ಟಿನಿಂದ ದಿನಾಂಕ 05-01-2018 ರಂದು ರಾತ್ರಿ 2000 ಗಂಟೆ ಸುಮಾರಿಗೆ ತನ್ನೊಂದಿಗೆ ಉಳಿದ ಆರೋಪಿತರನ್ನು ಕರೆದುಕೊಂಡು ಸಂಗನಮತ ಮಾಡಿಕೊಂಡು  ರಾಜು ಮಂಜಳಕರ ಇವನ ಮನೆಯ ಮುಂದೆ ಬಂದು ಎಲ್ಲರೂ ಕೂಡಿ ಅವಾಚ್ಯವಾಗಿ ಬೈಯ್ದಾಡುತ್ತಾ ಕಲ್ಲನ್ನು ತೆಗೆದುಕೊಂಡು ರಾಜು ಮಂಜಳಕರ ಮನೆಯ ಮಾಳಗಿ ಮೇಲೆ ಒಗೆದಿದ್ದಲ್ಲದೇ ರಾಜು ಮಂಜಳಕರವನಿಗೆ ಎಳೆದಾಡಿ  ಕೈಯಿಂದ ಹೊಡಿ ಬಡಿ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಜಗಳ ಬಿಡಿಸಲು ಬಂದ ಮುದಕ್ಕಪ್ಪಾ ಹುಲಕೊಪ್ಪ ಇವರಿಗೆ ಹಾಗೂ ಇತರರಿಗೂ ಸಹ ಹೊಡಿ ಬಡಿ ಮಾಡಿ ಕಲ್ಲಿನಿಂದ  ಮಹಾಂತೇಶ ಹುಲಕೊಪ್ಪನಿಗೆ ಬಡಿಗೆಯಿಂದ ಹೊಡೆದು ಗಾಯಪಡಿಸಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2018 ಕಲಂ 506.504.147.148.143.149.323.324 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಮುಂಡಗೋಡ ರಸ್ತೆಯ ಮೇಲೆ ತಾವರಗರಿ ಗ್ರಾಮದ ಗೋವಿಂದ ಬಸಪ್ಪ ಕುರಡಿಕೇರಿ ಇವರ ಮನೆಯ ಹತ್ತೀರ ಗೂಡ್ಸ ಲಾರಿ ನಂ MH-43-U-1528 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಮುಂಡಗೋಡ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಹೋಗಿ ಮುಂಡಗೋಡ ಕಡೆಯಿಂದಾ ಕಲಘಟಗಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ KA-25-EC-4620 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ಬಸವರಾಜ ತಂದೆ ಈರಪ್ಪ ಕೋಣಿ 21 ವರ್ಷ ಸಾ..ಆಲದಕಟ್ಟಿ & ಮೋಟಾರ್ ಸೈಕಲ್ ಹಿಂಬದಿ ಕುಳಿತ ಸಂಗಯ್ಯಾ ಈರಯ್ಯಾ ಬೆಂಡಿಗೇರಿ ಸಾ..ಅರಳಿಹೊಂಡ ಇವರಿಗೆ ಗಂಭೀರ ಗಾಯಪಡಿಸಿ ಸದರಿಯವರಿಗೆ ಉಪಚಾರಕ್ಕೆ ಅಂತಾ ಕಲಘಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಸವರಾಜ ತಂದೆ ಈರಪ್ಪ ಕೋಣಿ 21 ವರ್ಷ ಸಾ..ಆಲದಕಟ್ಟಿ  ಇವನು ಕಲಘಟಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುವ ಕಾಲಕ್ಕೆ ಉಪಚಾರ ಫಲಿಸದೆ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 279.338.304(ಎ) ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.