ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 9, 2018

CRIME INCIDENTS 09-01-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-01-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಶಿವಳ್ಳಿ ಗ್ರಾಮದ ಮುಲ್ಲಾನವರ  ಇವರ ಜಮೀನ ಹತ್ತಿರ ಧಾರವಾಡ ಕಡೆಯಿಂದ ಶಿವಳ್ಳಿ ಕಡೆಗೆ ಕಚ್ಚಾ ರಸ್ತೆ ಮೇಲೆ ರನ್ನಿಂಗ ಪ್ರ್ಯಾಕ್ಟಿಸ ಮಾಡುತ್ತಿದ್ದ ಕರಿಗುಡ್ಡ ಮುಶ್ನವರ ಇವರ  ಮಗ ಮಲ್ಲಿಕಾರ್ಜುನ ಹಾಗೂ ಸುನಿಲ ಇವನಿಗೆ ಬುಲೇರೊ ವಾಹನ ನಂ AP 02 TC 0046 ನೇದ್ದರ ಚಾಲಕ ನವಲಗುಂದ ಕಡೆಯಿಂದ ಧಾರವಾಡ ಕಡೆಗೆ  ಅತೀವೇಗವಾಗಿ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನದ ವೇಗ ನಿಯಂತ್ರಣ ಮಾಡಲಾಗದೇ ಒಮ್ಮೆಲೆ ರಾಂಗ ಸೈಡಿಗೆ ತೆಗೆದು ಕೊಂಡು  ಸದರಿಯವರಿಗೆ ಅಪಘಾತ ಪಡಸಿ ಅಪಘಾತದಲ್ಲಿ ಮಲ್ಲಿಕಾರ್ಜುನ ತಂದೆ ಕರಿಗೌಡ ಮುಶನ್ನವರ ವಯಾ 22 ವರ್ಷ ಸಾಃಶಿವಳ್ಳಿ ಇವನಿಗೆ ತೀವೃ ಗಾಯ ಪಡಿಸಿ ಕೀಮ್ಸ ಆಸ್ಪತ್ರೆಗೆ ಉಪಚಾರಕ್ಕೆ ಅಂತಾ ಧಾಖಲಿಸಿದಾಗ ಉಪಚಾರ ಫಲಿಸದೇ ಬೆಳಗಿನ ಜಾವ 0715 ಗಂಟೆಗೆ ಮರಣ ಪಡಿಸಿದ್ದಲ್ಲದೆ ಸುನಿಲ ತಂದೆ ಸೋಮಪ್ಪ ಕದಂ ವಯಾಃ22ವರ್ಷ ಸಾಃಶಿವಳ್ಳಿ ಇವನಿಗೆ ತೀವೃ ಗಾಯ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2018 ಕಲಂ 279.338.304(ಎ) ಹಾಗೂ ವಾಹನ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ