ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, January 12, 2018

CRIME INCIDENTS 12-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-01-2018 ರಂದು ವರದಿಯಾದ ಪ್ರಕರಣಗಳು

1 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಆಶ್ರಯ ಪ್ಲಾಟದ ಹತ್ತಿರ ಇರುವ ಹನಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ತೌಸೀಪ ಅಹ್ಮದ ಅಖೀಲಅಹ್ಮದ ಹಲಸಿ 2) ಮೌಸೀನ ತಂದೆ ಅಖೀಲ ಅಹ್ಮದ ಹಲಸಿ 3) ಸುಮಂತ ತಂದೆ ನೀಲಕಂಠಪ್ಪ ಹಿಂಡಸಗೇರಿ ಸಾ|| ಎಲ್ಲರೂ ಅಳ್ನಾವರ ತಾ|| ಜಿ|| ದಾರವಾಡ ಹಾಗೂ 4) ಸಂಜೀವ ತಂದೆ ಶಿವಾನಂದ ಅಂಬಡಗಟ್ಟಿ ಸಾ|| ಕಕ್ಕೇರಿ ತಾ|| ಖಾನಾಫೂರ ಅವರು ತಮ್ಮ ತಮ್ಮ ವಯಕ್ತಿಕ ದ್ವೇಷದಿಂದ ಸಾರ್ವಜನಿಕ ಸ್ಥಳದಲ್ಲಿ ಕೈ ಕೈ ಮಿಲಾಯಿಸಿ ಹೊಡೆದಾಟ ಬಡಿದಾಟ ಮಾಡಿ ಸಾರ್ವಜನಿಕ ಕಲಹ ಕದಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಳ್ನಾವವ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2018 ಕಲಂ 160 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಿರುಮಲಕೊಪ್ಪ ಕ್ರಾಸ್ ಹತ್ತಿರ, ಪೂನಾ ಬೆಂಗಳೂರು ರಸ್ತೆ ಮೇಲೆ, ಕಾರ ನಂ. ಕೆಎ-25-ಪಿ-1842 ನೇದ್ದರ ಚಾಲಕ ಆಸೀಪ್ ತಂದೆ ಮಹ್ಮದಗೌಸ ಇಕ್ಬಾಲ ಸಾ. ಶ್ರೀನಗರ, ಹುಬ್ಬಳ್ಳಿ ಇವರು ಕಾರನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಪಿರ್ಯಾದಿಯ ಮಾವ ಶ್ರೀ ಗುರುನಾಥರಾವ ತಂದೆ ಲಕ್ಷ್ಮಣರಾವ್ ದೇಶಪಾಂಡೆ ವಯಾ. 64 ವರ್ಷ ಸಾ. ಮನೆ ನಂ. 39, ನಾವಳ್ಳಿ ಪ್ಲಾಟ್, ಪ್ರಿಯದರ್ಶಿನಿ ಕಾಲನಿ, ಗೋಕುಲ ರಸ್ತೆ, ಹುಬ್ಬಳ್ಳಿ ಇವರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ತಲೆಗೆ ತೀವ್ರ ಗಾಯಪಡಿಸಿದ್ದು, ಸದರಿಯವರಿಗೆ ಉಪಚಾರ ಕುರಿತು ಶಿಗ್ಗಾವಿಗೆ ತಾಲೂಕಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 03/2018 ಹಾಗೂ 04/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಶ್ರೀ ಸಿದ್ದಪ್ಪ ಅಜ್ಜನ ಗುಡಿನ ಹತ್ತಿರ 1] ಬಸವರಾಜ ಈಶಪ್ಪ ಹರಕುಣಿ ಮತ್ತು 2] ಅಶೋಕ ಚನ್ನಬಸಪ್ಪ ಪಾಣೀಗಟ್ಟಿ ಇವರು ತನ್ನ ಅಣ್ಣ ಈರಪ್ಪ ನಿಂಗಪ್ಪ ಕುಂದಗೋಳ ಇವರಿಗೆ ದಿನಾಂಕಃ16-12-2017 ರ ಸಾಯಂಕಾಲ 4-30 ಗಂಟೆ ಸುಮಾರಿಗೆ ಗುಡಗೇರಿಯ ಸಿದ್ದಪ್ಪಜ್ಜನ ಭಾವಿಯ ಹತ್ತಿರ ಮೋಬೈಲ್ ಬಗ್ಗೆ ಜಗಳಾ ಮಾಡಿ ಅವರಿಗೆ ಎಲ್ಲಿಗು ಹೊಗದಂತೆ ತರುಬಿ ಕೈ ಮುಷ್ಠಿ ಮಾಡಿ ಅವರ ಮುಖಕ್ಕೆ ಮೈ ಕೈಗೆ ಅಲ್ಲಲ್ಲಿ ಹೊಡೆದು ದುಃಖಾಪತ್ ಪಡಿಸಿ ಅವಾಚ್ಯ ಬೈದಾಡಿ ಜೀವದ ಧಮಕೀ ಹಾಕಿದ್ದು  ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2018 ಕಲಂ 506.341.323.324.504 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಉಮಚಗಿ ಗ್ರಾಮದ, ವರದಿಗಾರಳ ಮನೆಯಲ್ಲಿ, ಮೃತ ಶ್ರೀ ವೀರಪ್ಪ ಲಕ್ಷ್ಮಪ್ಪ ಶಿವನಪ್ಪನವರ ವಯಾ. 42 ವರ್ಷ ಸಾ. ಉಮಚಗಿ ಇವರು ಮನೆಯಲ್ಲಿ ಕರೆಂಟ್ ಹೋದ ಕಾಲಕ್ಕೆ, ಚಿಮಣಿ ಹಚ್ಚುವಾಗ, ಆಕಸ್ಮಾತ್ತಾಗಿ ಚಿಮಣಿ ಮೈ ಮೇಲೆ ಬಿದ್ದು, ಮೈಗೆ ಬೆಂಕಿ ಹತ್ತಿ, ಸುಟ್ಟ ಗಾಯವಾಗಿದ್ದು, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಉಪಚಾರ ಫಲಿಸದೇ ಈ ದಿವಸ ದಿನಾಂಕ: 12-01-2018 ರಂದು ಸಾಯಂಕಾಲ 4-00 ಗಂಟೆಗೆ ಮೃತಪಟ್ಟಿದ್ದು ವಿನಃ ತನ್ನ ಗಂಡನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2018 ಕಲಂ 174 ಸಿ.ಆರ್.ಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.