ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, January 13, 2018

CRIME INCIDENTS 13-01-2017 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-01-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವಿ ಗ್ರಾಮದ, ಗಂಗಾಧರ ನಗರದ,ನೂರಜಾಹನ ಮಗಳಾದ ಕು. ಶಾಬೀರಾ ತಂದೆ ಅಲಿಸಾಬ ಪೈಲವಾನವರ ಸಾ. ನೂಲ್ವಿ ಮತ್ತು ಪಿರ್ಯಾದಿಯ ನಾದಿನಿ ಫಾತಿಮಾ. ಬಿ. ಕೋಂ ಕಲೀಮುಲ್ಲಾ ಸಾ. ಬಳ್ಳಾರಿ ಇವರ ಮಗಳಾದ ಕು. ಅಮೀನಾಬೀ ತಂದೆ ಕಲಿಮುಲ್ಲಾ ಸಾ. ಹೊನ್ನಾಳಿ ರಸ್ತೆ, ರಾಜಾಸಾಬ ಕಾಲೋನಿ, ಗುಗ್ಗರಹಟ್ಟಿ, ಬಳ್ಳಾರಿ ಇವರು ಮನೆಯಲ್ಲಿದ್ದಾಗ, ಇಬ್ಬರು ತಮ್ಮ ಮಕ್ಕಳು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲವಾದ್ದರಿಂದ ಅವರಿಗೆ ಹಾಸ್ಟೆಲಗೆ ಸೇರಿಸೋಣ ಅಂತ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡು, ಮನಸಿಗೆ ಬೇಜಾರ ಮಾಡಿಕೊಂಡು, ಮನೆಯಿಂದ ಹೊರಗೆ ಹೋಗಿದ್ದು, ಇಲ್ಲಿಯವರೆಗೆ ಮನೆಗೆ ಮರಳಿ ಬರದೇ, ಯಾರೋ ಯಾವುದೋ ಉದ್ದೇಶಕ್ಕೆ ಅಪಹರಣ  ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2018 ಕಲಂ 363 ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೀರವಳ್ಳಿ ತಡಸ ರಸ್ತೆಯ ಮೇಲೆ ಬೀರವಳ್ಳಿ ಗ್ರಾಮದ ಸಮೀಪ ಗೂಡ್ಸ ಕ್ಯಾಂಟರ್ ವಾಹನ ನಂ KA-25-D-2329 ನೇದ್ದರ ಚಾಲಕನು ತಡಸ ಕಡೆಯಿಂದಾ ಬೀರವಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಎಡಬದಿ ಇರುವ ಗಿಡಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಸದರ ವಾಹನದಲ್ಲಿ ಕ್ಲೀನರ್ ಆದ ಪಿರ್ಯಾದಿದಾರನ ಮಗ ಮಂಜು ಶಂಕ್ರಪ್ಪ ಅಲ್ಲಾಪೂರ 34 ವರ್ಷ ಸಾ..ವರೂರ  ತಾ..ಹುಬ್ಬಳ್ಳಿ ಇವನಿಗೆ ತಲೆಗೆ, ಎದೆಗೆ, ಎಡಗಾಲಿಗೆ ಮೈಕೈಗಳಿಗೆ ಭಾರಿಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್  ಠಾಣೆಯಲ್ಲಿ ಗುನ್ನ ನಂ 279.338 ನೇದರಲ್ಲ ಪ್ರಕರಣವ ನ್ನು ದಾಖಲಿಸಿದ್ದ ಇರುತ್ತದೆ.

3. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ನಿಗದಿ ಗ್ರಾಮದ ಬಸ್ಡ್ಯಾಂಡ ಹತ್ತಿರ ಹಳಿಯಾಳ ದಾರವಾಡ ರಸ್ತೆಯ ಮೇಲೆ ಮೋ ಟರ ಸೈಕಲ್ಲ ನಂಬರ ಕೆ.ಎ 25/ಇ.ಆರ್-1902 ನೇದ್ದರ ಚಾಲಕನಾದ ಕಲ್ಲಪ್ಪ ತಂದೆ ಸಣ್ಣ ಸೋಮಲಿಂಗಪ್ಪ ಕಿತ್ತೂರ ಸಾ|| ದೇವರಹುಬ್ಬಳ್ಳಿ ತಾ|| ಜಿ|| ದಾರವಾಡ ಅವನು ತಾನು ನಡೆಸುತ್ತಿದ್ದ ಮೋಟರ ಸೈಕಲ್ಲನ್ನು ಹಳಿಯಾಳ ಕಡೆಯಿಂದ ದಾರವಾಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯ ಎಡ ರಸ್ತೆಯ ಬದಿಯಲ್ಲಿ ಹೊರಟ ಪಾದಚಾರಿ ಶಾಂತಾ ಕೋಂ ರಾಮಚಂದ್ರ ಪೂಜಾರ ಸಾ|| ದಾರವಾಡ ಅವಳಿಗೆ ಡಿಕ್ಕಿಮಾಡಿ ಕೆಡವಿ ಭಾರಿ ಘಾಯ ಪಡಿಸಿ ಗಾಯಾಳುವಿಗೆ ಉಪಚಾತರದ ಸಹಕರಿಸದೆ ಹಾಗೂ ಸುದ್ದಿಯನ್ನು ಠಾಣೆಗೆ ತಿಳಿಸದೆ ಹಾಗೇ ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 02/2018 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.