ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 16, 2018

CRIME INCIDENTS 16-01-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-01-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶೆಲವಡಿ ಗ್ರಾಮದ ಬಸ್ ನಿಲ್ದಾಣದ ಮುಂದಿನ ರಸ್ತೆ ಮೇಲೆ ಆರೋಪಿತನಾದ ಬಸವರಾಜ ಲಿಂಗದಾಳ ಇತನು ಯಾವುದೆ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೆಟ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ 39 ಹೈವರ್ಡ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಪಾಕೇಟ್ ಗಳ ಸಮೇತ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 02/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಭದ್ರಾಪುರ ಗ್ರಾಮದ ಹತ್ತಿರ ಮಾರುತಿ ಸುಜುಕಿ ವಗೇನಾರ ಕಾರ ನಂಬರ ಕೀ-26/ಎಮ್-9156 ಚಾಲಕನಾದ ಉಮೇಶ ಗದಗ ಇತನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಭದ್ರಾಪುರ ಗ್ರಾಮದ ಸೀಮಿ ದ್ಯಾಮವ್ವನ ಗುಡಿಯ ಹತ್ತಿರ ಕಾರಿನ ವೇಗವನ್ನು ನಿಯಂತ್ರಣ ಮಾಡಲಾಗದೇ ಕಾರನ್ನು ಪಲ್ಟಿ ಮಾಡಿ ತನಗೆ ಹಾಗೂ ಕಾರಿನಲ್ಲಿದ್ದವರಿಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಅಲ್ಲದೇ  ಅಪಘಾತವಾದ ನಂತರ ಸದರ ಕಾರಿಗೆ ಅಪಘಾತದ ದೋಷದಿಂದ ಅಥವಾ ಇನ್ನಾವುದೋ ರೀತಿಯಿಂದ ಬೆಂಕಿ ಹೊತ್ತಿಕೊಂಡು ಕಾರು ಪೂರ್ತಿಯಾಗಿ ಸುಟ್ಟಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 05/2018 ಕಲಂ279 337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಚಂದನಮಟ್ಟಿ ಗ್ರಾಮದ ಯಡಳ್ಳಿ ಅವರ ಚಹಾದ ಅಂಗಡಿಯ ಮುಂದೆ ಆರೋಪಿತರಾದ ಪಾಂಡು ಯಮೋಜಿ 2.ಗದೆಗೆಪ್ಪಾ ದೇಸಾಯಿ ಹಾಗೂ ಇನ್ನೂ 05 ಜನರು  ಗುಂಪು ಕಟ್ಟಿಕೊಂಡು ಬಂದು ಚಹಾದ ಅಂಗಡಿಯಲ್ಲಿ  ಚಹಾ ಕುಡಿಯುತ್ತಿದ್ದ ಶಿವಾನಂದ ಕಳ್ಳಿಮನಿ ಇವರಿಗೆ ಆರೋಪಿತರೆಲ್ಲರು ಕೊಡಿಕೊಂಡು ಹೊಸ ವರ್ಷದ ದಿವಸ ನಿಂದು ಬಹಳ ಸೊಕ್ಕು ಆಗಿತ್ತು ಅಂತಾ ಹೊರಗೆ ಕರೆದು ಹಲ್ಕಟ ಬಹಳ ಹಾರಾಟ್ಯಾನ ಅಂತಾ ಕೈಯಿಂದ ಮುಖಕ್ಕೆ ತಲೆಗೆ ಬಾಯಿಗೆ ಮೈಕೈಗಳಿಗೆ ಹೊಡೆ ಬಡಿ ಮಾಡಿದ್ದಲ್ಲದೆ ತೆಲೆಗೆ ಹೊಡೆದಿದ್ದು ಬಿಡಿಸಲು ಬಂದ ಅಣ್ಣನಿಗೆ ಕೈಯಿಂದ ಹೊಡೆ ಬಡಿ ಮಾಡಿದ್ದು  ಇನ್ನೂ 4 ಮಂದಿ ಅದಾರ ಅವರನ್ನು ಬಿಡುವದಿಲ್ಲಾ ಅಂತಾ ಹಾಗೂ ಇನ್ನೋಮ್ಮೆ  ನಿಮ್ಮನ್ನು ನೋಡಿಕೊಳ್ಳುತ್ತೇವೆ ಅಂತಾ ಜೀವದ ಧಮಕಿಯನ್ನು ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2018 ಕಲಂ 506.504.147.148.143.324.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.