ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, January 21, 2018

CRIME INCIDENTS 21-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21-01-2018 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಮೊಟಾರ ಸೈಕಲ ನಂ.ಕೆ.ಎ.24/ಆರ್/2966 ನೇದ್ದರ ಸವಾರ ಅರುಣಕುಮಾರ ಮಾರುತಿ ಮಡಿವಾಳರ ಇತನು ದಿನಾಂಕ:17-01-2018 ರಂದು ಮದ್ಯಾಹ್ನ-14-00 ಗಂಟೆ ಸುಮಾರಿಗೆ ತನ್ನ ಮೊಟಾರ ಸೈಕಲನ್ನು ಕಿತ್ತೂರ ಕಡೆಯಿಂದ ತಡಕೊಡ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಾಧನಬಾವಿ ಗ್ರಾಮದ ಹತ್ತೀರ ಇರುವ ಗಂಗನಗೌಡ.ಹೊಳೆಹಡಗಲಿ ಇವರ ಹೊಲದ ಮುಂದೆ ರಸ್ತೆಯ ಮೇಲೆ ಸ್ಕೀಡ್ ಮಾಡಿ ಅಪಘಾತ ಪಡಿಸಿಕೊಂಡು ತನಗೆ ಭಾರಿ ಸ್ವರೂಫದ ಗಾಯವನ್ನು ಪಡೆಸಿಕೊಂಡ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2018 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-27-11-2017 ರಂದು ಮುಂಜಾನೆ 10-00 ಗಂಟೆಯಿಂದಾ ಸಂಜೆ 5-00 ಗಂಟೆಯ ನಡುವೆ ಕಲಘಟಗಿ ಶಹರದ ಭಾರತೀಯ ಸ್ಟೇಟ್ ಬ್ಯಾಂಕ ದಲ್ಲಿ ಆರೋಪಿ ಈಶ್ವರಪ್ಪ ತಂದೆ ನಿಂಗಪ್ಪ ತಿಗಡಿ ಸಾ..ಬಮ್ಮಿಗಟ್ಟಿ ಇವನು ಬಸವಣ್ಣೆಯ್ಯಾ ಹಿರೇಮಠ ಸಾ..ಹನಮಾಪೂರ ಇವನೊಂದಿಗೆ ಕೂಡಿಕೊಂಡು ಮೋಸ ಮಾಡುವ ಒಳಸಂಚು ರೂಪಿಸಿ   ಈ ಮೊದಲು 08-11-2017 ರಂದು ಕಲಘಟಗಿ ಶಹರದ ಕೆನರಾ ಬ್ಯಾಂಕಿನಲ್ಲಿ ಸುಮಾರು 3,00,000/- ರೂಗಳನ್ನು ಸಾಲವನ್ನು ಪಡೆದುಕೊಂಡು ನಂತರ ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ದಾಖಲಾತಿಗಳನ್ನು ಸೃಷ್ಠೀಸಿ ಮ್ಯಾನೇಜರ್ ಕೆನರಾ ಬ್ಯಾಂಕ ಕಲಘಟಗಿ ಇವರ ಖೊಟ್ಟಿ ಸಹಿಯನ್ನು ಮಾಡಿ SBI ದಲ್ಲಿ ಕೊಟ್ಟು ಬೇರೆ ಬ್ಯಾಂಕಗಳಲ್ಲಿ ಯಾವುದೆ ಸಾಲ ಇರುವದಿಲ್ಲಾ ಅಂತಾ ಹೇಳಿ ನಂಬಿಸಿ ಅವರಿಂದಲೂ ಸಹಾ 3,90,000/- ರೂ ಗಳನ್ನು ಕೃಷಿ ಸಾಲ ಅಂತಾ ಪಡೆದುಕೊಂಡು ಮೋಸ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 15/2018 ಕಲಂ IPC 1860 (U/s-120B,465,467,468,420,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3 ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 21-12-21017 ರಂದು ಮದ್ಯಾಹ್ನ 1-30 ಗಂಟೆಯಿಂದ ಸಾಯಂಕಾಲ 04-00 ಗಂಟೆ ನಡುವಿನ ಅವಧಿಯಲ್ಲಿ ಕುರಡಿಕೇರಿ ಗ್ರಾಮದ ಪಿರ್ಯಾದಿ ಅಕ್ಕಮ್ಮ ತೋಟದ ಇವರ ಮನೆಯಿಂದ ಪಿರ್ಯಾದಿಯ ಮಗಳು ಅಶ್ವಿನಿ ತಂದೆ ಯಲ್ಲಪ್ಪ ತೋಟದ ವಯಾ.19 ವರ್ಷ ಸಾ. ಕುರಡಿಕೇರಿ ಇವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇಲ್ಲಿಯವರೆಗೆ ಎಲ್ಲ ಕಡೆಗಳಲ್ಲಿ ಹುಡುಕಾಡಿದ್ದರಲ್ಲಿ ಸದರಿಯುವಳು ಸಿಗದೇ ಕಾಣೆಯಾಗಿರುತ್ತಾಳೆ ಅಂತ ಪಿರ್ಯಾದಿ ಕೊಟ್ಟಿದ್ದು ಅದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 18/2018 ಕಲಂ IPC 1860 (U/s-00MP) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.