ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, January 25, 2018

CRIME INCIDENTS 25-01-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-01-2018 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಳಗಿಹುಲಕೋಪ್ಪ ಧಾರವಾಡ ರಸ್ತೆಯ  ಮೇಲೆ ಗಳಗಿಹುಲಕೋಪ್ಪ ಗ್ರಾಮದ ಹತ್ತಿರ  ಆರೋಪಿತನಾದ ಶಿವರಾಜ ವಾಲಿಕರ ಇತನು ನಡೆಸುತ್ತಿದ್ದ ಲಾರಿ ನಂಬರ ಕೆ.ಎ 35/ 3719 ನೇದ್ದನ್ನು ಗಳಗಿಹುಲಕೋಪ್ಪ  ಕಡೆಯಿಂದ ಧಾರವಾಡ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಲಾರಿ  ಮೇಲಿನ ನೀಯಂತ್ರಣ ಕಳೆದುಕೊಂಡು ಲಾರಿ ಕೆಡವಿ ವಾಹನ ನಡೆಸುತ್ತಿದ್ದ ತನಗೆ ಸದಾ ವ ಭಾರಿ ಗಾಯಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 18/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಬಾವಿ ಗ್ರಾಮದ ಮೃತ ಪರಮೇಶ್ವರ ತಂದೆ ಚನ್ನಪ್ಪ ಕುರಹಟ್ಟಿ ವಯಾ 28 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಅಮ್ಮಿನಬಾವಿ ಇತನು ಇವರ ಬಾಬಾತ 4 ಎಕ್ಕರೆ ಜಮೀನು ಇದ್ದು ಈ ಜಮೀನುದಲ್ಲಿ 2 ಎಕ್ಕರೆ ಹತ್ತಿಯನ್ನು 2 ಎಕ್ಕರೆ ಕಡ್ಲಿಯನ್ನು ಹಾಕಿದ್ದು ಆ ಪೀಕು ಸರಿಯಾಗಿ ಬಾರದ್ದರಿಂದ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 24-01-2018 ರಂದು ರಾತ್ರಿ 2230 ಘಂಟೆಯಿಂದ ದಿನಾಂಕ 25-01-2018 ರ ಬೆಳಗಿನ 0730 ಘಂಟೆಯ ಮದ್ಯೆದ ಅವದಿಯಲ್ಲಿ ಅಮ್ಮಿನಬಾವಿ ಗ್ರಾಮದ ಕೆರೆಯ ಹತ್ತಿರ ಇರುವ ಬೇವಿನ ಗಿಡಕ್ಕೆ ಹಗ್ಗವನ್ನು ಕಟ್ಟಿ ಅದೆ ಹಗ್ಗದಿಂದ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.