ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, January 28, 2018

CRIME INCIDENTS 28-01-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-01-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 28-01-2018 ರಂದು ಬೆಳಿಗ್ಗೆ 05-45 ಗಂಟೆ ಸುಮಾರಿಗೆ  ಇದರಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಲಾರಿ ನಂ ಕೆಎ-29/ಬಿ-3981 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನರಗುಂದ ಕಡೆಗೆ ಅಮರಗೋಳ ಹದ್ದಿಯಲ್ಲಿ ಕಲಕೆರಿಯಿಂದ ಎರಡು ಕಿ.ಮೀ ಅಂತರದಲ್ಲಿ ಅತೀವೇಗದಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ನರಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಪಿರ್ಯಾದಿ ವಿನಯ ಪಾಟೀಲ ಇವರ ಕಾರ್ ನಂ ಕೆಎ-04/ಎಮ್.ಎಫ್-1252 ನೇದ್ದಕ್ಕೆ ಬಲಸೈಡ್ ಮುಂಭಾಗಕ್ಕೆ ಡಿಕ್ಕಿ ಮಾಡಿ ಕಾರ್ ಜಖಂಗೊಳಿಸಿ ಲಾರಿ  ಬಿಟ್ಟು ಹೋಡಿ ಹೋದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 05-2018 ಕಲಂ INDIAN MOTOR VEHICLES ACT, 1988 (U/s-134(B)); IPC 1860 (U/s-279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕಃ 28-01-2018 ರಂದು ಮದ್ಯರಾತ್ರಿ 01-00 ಗಂಟೆ ಯಿಂದ ಬೆಳಗಿನ 07-00 ಗಂಟೆ ನಡುವಿನ ಅವಧಿಯಲ್ಲಿ ಪುನಾ ಬೆಂಗಳೂರ  ರಸ್ತೆಯ ತಾರಿಹಾಳ ಹದ್ದಿಯ ಹವಾವಾಲ್ಸ್ ಫ್ಯಾಕ್ಟರಿ ಹತ್ತಿರ ಪಿರ್ಯಾದಿ ಪ್ರಮೋದ ಚಿನ್ನಪ್ಪ ಚಿಕ್ಕಲಕರ ಸಾ. ಧಾರವಾಡ ಇವರ ತಮ್ಮ ಮೃತ ವಿನೋಧ ಚಿನ್ನಪ್ಪ ಚಿಕ್ಕಲಕರ 28 ವರ್ಷ ಸಾ. ಧಾರವಾಡ ಇವನು ನಡೆಸುತ್ತಿದ್ದ ಮೋಟರ ಸೈಕಲ್ ನಂಬರ ಕೆ.ಎ-25/ಇ.ಎಂ-0165 ನೇದ್ದನ್ನು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ  ಅತಿ ವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿರುವಾಗ ಸ್ಕಿಡ್ಡಾಗಿ ಮೋಟರ ಸೈಕಲ್ ಸಮೇತ ರಸ್ತೆ ಬದಿಯ ತಗ್ಗಿನಲ್ಲಿ ಕೆಡವಿ ತೆಲೆಗೆ ಮುಖಕ್ಕೆ ಭಾರಿ ರಕ್ತಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಪಡಿಸಿಕೊಂಡ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 25/2018 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 34/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 27-01-2016 ರಂದು 2200 ಗಂಟೆ ಸುಮಾರಿಗೆ ಧಾರವಾಡ ಕಲಘಟಗಿ ರಸ್ತೆ  ಕಣವಿಹೊನ್ನಾಪೂರ ಗ್ರಾಮದ ಇಂಚಲ ಇವರ ಜಮೀನ ಹತ್ತಿರ  ಲಾರಿ ನಂ MH04GF1937 ನೇದ್ದರ ಚಾಲಕ ಸಂತೋಷ ಇತನು  ತನ್ನ ಲಾರಿಯನ್ನು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಅದೇ ಮಾರ್ಗವಾಗಿ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದಸ್ದ ಪಿರ್ಯಾದಿದಾರ ಚನ್ನಬಸಪ್ಪ ಬಜಂತ್ರಿ ಇವನ ಚಕ್ಕಡಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಚಕ್ಕಡಿಯನ್ನು ಜಖಂಗೋಳಿಸಿ ಲುಕ್ಸಾನ ಪಡಿಸಿದ್ದಲ್ಲದೆ ಪಿರ್ಯಾದಿಗೆ ಮತ್ತು ಚಕ್ಕಡಿಯಲ್ಲಿದ್ದ ಇನ್ನೂ 3 ಜನರಿಗೆ  ಸಾದಾ ವ ಬಾರೀ ಸ್ವರೂಪದ ಗಾಯ ಪಡಿಸಿದ್ದಲ್ಲದೆ ಹಾಗೂ  ಎತ್ತುಗಳಿಗೆ ಗಾಯ ಪಡಿಸಿದ  ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 35/2018 ಕಲಂ IPC 1860 (U/s-427,279,338,337) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 19/2018, 20/2018 & 21/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.