ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, January 29, 2018

CRIME INCIDENTS 29-01-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-01-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಅಳ್ನಾವರ ರಸ್ತೆ ಪ್ರಭುನಗರ ಹೊನ್ನಾಪೂರ ಗ್ರಾಮದ ಹತ್ತಿರ ಟ್ರ್ಯಾಕ್ಟರ ಇಂಜಿನ ನಂ ಕೆಎ 25 ಟಿಎ 8699 ಟ್ರೇಲರ ನಂ ಕೆಎ 25 ಟಿಎ 8700 ಮತ್ತು ಕೆಎ 23 6728 ನೇದ್ದರ ಚಾಲಕನು ಟ್ರೇಲರ ಗಳಲ್ಲಿ ಕಬ್ಬನ್ನು ಹೇರಿಕೊಂಡು ತನ್ನ ಟ್ರ್ಯಾಕ್ಟರನ್ನು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಕಾರ ನಂ ಕೆಎ 25 ಎಂಬಿ 7672 ನೇದ್ದ್ಕಕೆ ತನ್ನ ಟ್ರ್ಯಾಕ್ಟರ ಟ್ರೇಲರದಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಕಾರ ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನೂ 5 ಜನರಿಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 36/2018 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಅಳಗವಾಡಿ ಗ್ರಾಮದ ಹತ್ತಿರ ಕಾಂಕ್ರೀಟ್ ಕಾಮಗಾರಿ ಸಂಬಂಧ ಗಿಡ್ಡಪ್ಪ ಹಣಸಿ  ಮತ್ತು ಅವರ ಮನೆಯ ಜನರ ಮೇಲಿನ ಸಿಟ್ಟಿನಿಂದ ಗೈರು ಕಾಯ್ದೆ ಶಿರ್ ಮಂಡಳಿಯಾಗಿ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಬೈದಾಡುತ್ತಾ ಬಡಿಗೆಯಿಂದ ಹೊಡಿ-ಬಡಿ ಮಾಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿ ಹೆಂಡತಿ ನೀಲಮ್ಮ ಸೊಸೆ ಯಲ್ಲಮ್ಮ ಇವರಿಗೂ ಸಹ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2018 ಕಲಂ 143.147.148.323.324.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ, ಬುಡನಾಳದ ಸಂತೋಷ ಆರ್. ಶೆಟ್ಟರ ಇವರ ಹೊಲದ ಮನೆಯಿಂದ, ಕು. ಸೌಮ್ಯ ತಂದೆ ಬಸವರಾಜ ಜಮ್ಮಿಹಾಳ ವಯಾ. 21 ವರ್ಷ ಇವಳು ಮನೆಯಲ್ಲಿ, ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೋದವಳು, ಇಲ್ಲಿಯವರೆಗೆ ಮನೆಗೆ ಮರಳಿ ಬಾರದೇ, ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇನಾಂಮವೀರಾಪೂರ ಗ್ರಾಮದ ದೇವನಗೌಡ ಪಾಟೀಲ ಇವರ ಹೊಲದ ಹತ್ತಿರ ಗುಡ್ಡದ ತಗ್ಗಿನಲ್ಲಿ ಮೃತ  ಮಂಜುನಾಥ ದೇವಪ್ಪ ಸಲಗಾರ 65 ವರ್ಷ ಇವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ತನಿಖೆಯನ್ನು ಕೈಗೂಂಡಿದ್ದುಇರುತ್ತದೆ.