ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 30, 2018

CRIME INCIDENTS 30-01-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-01-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ ಹತ್ತಿರ  ಆರೋಪಿತರಾದ 1) ಬಸವರಾಜ ಶಿವಪ್ಪ ಸವದತ್ತಿ,2)ರಾಜು ಶಿವಪ್ಪ ಸವದತ್ತಿ 3) ಕರೆವ್ವ ಕೋಂ ರಾಜು ಸವದತ್ತಿ ಇವರೆಲ್ಲರೂ ಕೂಡಿಕೊಂಡು ಪದ್ಮಾವತಿ ಸವದತ್ತಿ ಇವರ ಮನೆಯ ಒಳಗೆ ಹೊಕ್ಕು ಮನೆಯಿಂದ ಹೊರಗೆ ಹಾಕುವ ಉದ್ದೇಶದಿಂದ ಮನೆ ಬಗ್ಗೆ ಕೋರ್ಟನಲ್ಲಿ ದಾವಾ ಮಾಡಿದ್ದರ ಸಿಟ್ಟಿನಿಂದ ತಂಟೆ ತೆಗೆದು ಬೈದಾಡಿ ಕೈಯಿಂದ ಹಾಗೂ ಬಡಿಗೆಯಿಂದ ಹೊಡಿ ಬಡಿ ಮಾಡಿ ಸೀರೆ ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದಲ್ಲದೆ ಅವರ ಗಂಡನಿಗೆ ಹಾಗೂ ಮಗಳಿಗೆ ಸಹ  ಕೈಯಿಂದ ಹೊಡಿಬಡಿ ಮಾಡಿ ಅವಾಚ್ಯ ಬೈದಾಡಿ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 07/2018 ಕಲಂ 323.324.452.354.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ತಾರಿಹಾಳ ಗ್ರಾಮದ ನಿಮಱಲಾ ಮುತ್ತಗಿ ಇವರ ಮನೆಯ ಒಳಗೆ ಆರೋಪಿತರಾದ 1) ಕಲ್ಲಪ್ಪ ಕಲ್ಯಾಣಪ್ಪ ಮುತ್ತಗಿ 2) ಕಲ್ಯಾಣಪ್ಪ ಕಲ್ಲಪ್ಪ ಮುತ್ತಗಿ 3) ಸಂತೋಷ ಕಲ್ಲಪ್ಪ ಮುತ್ತಗಿ 4) ಸದಾನಂದ ಶಿವಾನಂದ ಬೆನಕಟ್ಟಿ 5) ಮಂಜುನಾಥ ಬಸವರಾಜ ಅಜಗೊಂಡ 6) ನಾಗರಾಜ ಬಸವರಾಜ ಅಜಗೊಂಡ ಎಲ್ಲರೂ ತಾರಿಹಾಳ 7) ಉಮೇಶ ಮಲ್ಲಪ್ಪ ಬಮ್ಮಿಗಟ್ಟಿ ಸಾ!! ಮುತ್ತಗಿ 8) ವೀರುಪಾಕ್ಷಪ್ಪ ಶಿವಪ್ಪ ಮುತ್ತಗಿ ಸಾ!! ತಾರಿಹಾಳ 9) ಶೇಖಪ್ಪ ಬಸಪ್ಪ ನವಣಿ ಸಾ!! ಮುತ್ತಗಿ ತಾ!! ಕಲಘಟಗಿ ಇವರುಗಳು ಗೈರ ಕಾಯ್ದೆಶೀರ ಮಂಡಳಿಯಾಗಿ ಗುಂಪು ಕಟ್ಟಿಕೊಂಡು ಮನೆಯಲ್ಲಿ ಅತೀಕ್ರಮಣ ಪ್ರವೇಶ ಮಾಡಿ ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಜಮೀನನ್ನು ಸರಳ ಬಿಡಬೇಕು ಇಲ್ಲಾ ಅಂದರ ನಿನ್ನನ್ನು ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆಧರಿಕೆ ಹಾಕಿ ಕೈಯಿಂದ ಸೀರೆ ಹಿಡಿದು ಎಳೆದಾಡಿ ಮಾನಬಂಗಪಡಿಸಲು ಪ್ರಯತ್ನಿಸಿದ್ದಲ್ಲದೇ, ಬಿಡಿಸಲು ಹೋದ ಮಕ್ಕಳಾದ ಮಂಜುನಾಥ ಹಾಗೂ ಸಂತೋಷ ಇವರಿಗೂ ಸಹಾ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾ ಣೆಯಲ್ಲಿ ಗುನ್ನನಂ 28/2018 ಕಲಂ 134.147323.448.504 506.35 ನೇದ್ದರಲ್ಲಿ ಕ್ರಮವನ್ನು ದಾಲಿಸಿದ್ದು ಇರುತ್ತದೆ.