ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, January 31, 2018

CRIME INCIDENTS 31-01-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-01-2018 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ  ಗ್ರಾಮದ ರೌಡಿ ಶೀಟರ್ಸ  ಆದ ಗಂಗಾಧರ ಧರೇಣ್ಣವರ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ  ಗುನ್ನಾನಂ 07/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ರಮೇಶ ಕಟ್ಟಿ  ಇತನು ರೌಡಿ ಶೀಟರ್ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ  ಗುನ್ನಾನಂ 08/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ ರೌಡಿ ಶೀಟರ್ ಸುನೀಲ ಕುಂದಗೋಳ ಇತನು ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಗುಡಗೇರಿ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಮೇಲೆ ಗುನ್ನಾನಂ 09/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ

4. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಜುನಾಥ ತಂದೆ ಶಂಕ್ರಪ್ಪ ಅತ್ತಿಗೇರಿ ಸಾಃ ಬೂ ತರ್ಲಘಟ್ಟ ಇವರು ಖುದ್ದಾಗಿ ಠಾಣೆಗೆ ದೇವರಿಗೆ ಅಂತಾ ಹೋದಾಗ ನೆಲಗುಡ್ಡ ಗ್ರಾಮದ ಜನರು ಹನುಮಂತ ದೇವರ ಗುಡಿಯಲ್ಲಿರುವ ದೇವರ ಮೂರ್ತಿ ಡಬ್ಬ ಬಿದ್ದೈತಿ ಅಂತಾ ಮಾತನಾಡುವುದನ್ನು ಕೇಳಿ ತಮ್ಮ ಸಂಗಡ ಇನ್ನೂ 02 ಜನರನ್ನು ಕರೆಯಿಸಿ ನೋಡಿ ಹನುಮಂತ ದೇವರ ಗುಡಿಯಲ್ಲಿರುವ ಹನುಮಂತ ದೇವರ ಮೂರ್ತಿಯನ್ನು ಎತ್ತಿ ಇಟ್ಟಿರುವುದಾಗಿ ಮತ್ತು ಈ ಕೃತ್ಯವನ್ನು ದಿನಾಂಕಃ 28-01-2018 ರ ಮುಂಜಾನೆ 08-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆ ನಡುವಿನ ಅವಧಿಯಲ್ಲಿ ಯಾವುದೋ ಕಿಡಿಗೇಡಿ ಜನರು ಯಾವುದೋ ಧರ್ಮದ ಅವಹೇಳನಕರ ಕೆಲಸಕ್ಕಾಗಿ ಕೆಡವಿರಬಹುದು ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10./2018 ಕಲಂ 295.153 (ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಬುಡರಸಿಂಗಿ ಗ್ರಾಮ ಹದ್ದಿಯ,ಇಸ್ಮಾಯಲ್ ನಧಾಫ ಇವರ ಹೊಲದಲ್ಲಿ ನಿಲ್ಲಿಸಿದ್ದ, ಮೋಟಾರ ಸೈಕಲ್ ನಂಬರ ಕೆಎ-63-ಹೆಚ್-3676 ಚಾಸ್ಸಿ ನಂ. MBLHAR08XHHK04683  ಇಂಜಿನ್ ನಂ. HA10AGHHKA4611 C.Q 35000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ರುದ್ರಪ್ಪ ತಂದೆ ರಾಮಪ್ಪ ಹೆಬಸೂರ ಈತನು ಮಗಳ ಮದುವೆಗಾಗಿ  ಮತ್ತು ಮನೆಯ ಅಡಚನೆಗಾಗಿ ಊರಲ್ಲಿ 2-3 ಲಕ್ಷ ಸಾಲ ಮತ್ತು ನವಲಗುಂದ ಕೆವಿಜಿ ಬ್ಯಾಂಕ್ ನಲ್ಲಿ  25 ಸಾವಿರ ರೂ ಸಾಲ ಮಾಡಿದ್ದು ಸಾಲ ತೀರಿಸಲಾಗಲಿಲ್ಲವೆಂದು ಮಾನಸಿಕ ಮಾಡಿಕೊಂಡು ದಿನಾಂಕ 27-01-2018 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ತನ್ನಷ್ಟಕ್ಕೆ ತಾನೇ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ನವಲಗುಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಗೆ ದಾಖಲಿಸಿದಾಗ ಅಲ್ಲಿ ಉಪಚಾರ ಫಲಿಸದೆ ಈ ದಿವಸ ದಿನಾಂಕ 31-01-2018 ರಂದು 01-45 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇದೆಯೇ ವಿನಹಃ ಸದರಿಯವನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ಇರುವುದಿಲ್ಲ ಫಿಯಾಱಧೀ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 04/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗರಗ ಗ್ರಾಮದ  ಶ್ರೀಮಡಿವಾಳೆಶ್ವರ ಮಠದ ಪಿ.ಯು. ಕಾಲೇಜಿನ ಕಟ್ಟೆಯ ಮೇಲೆ ಒಬ್ಬ ಅನಾಮಧೇಯ ಗಂಡಸು ವ್ಯಕ್ತಿ ಅಜಮಾಸ 50 ರಿಂದ 52 ವಯಸ್ಸಿನವನು ಯಾವುದೋ ಕಾಯಿಲೆಯಿಂದ ಚಳಿಯಲ್ಲಿ ಮೃತ ಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ವಗೈರೆ ಕೊಟ್ಟ ವರದಿಯನ್ನು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.