ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 1, 2018

CRIME INCIDENTS 01-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-02-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ಕಣವಿಹೊನ್ನಾಪೂರ ಗ್ರಾಮದ ನಾಯಕನಹೂಲಿಕಟ್ಟಿ ಕ್ರಾಸ ಹತ್ತಿರ ರಸ್ತೆ ಮೇಲೆ ಮೋಟರ್ ಸೈಕಲ್ ನಂ KA-25-EL-8856 ನೇದ್ದರ ಚಾಲಕನಾದ ಗಣೇಶ ಪಾಲನಕರ ಇವನು ತನ್ನ ಮೋಟರ್ ಸೈಕಲನ್ನು ದುಮ್ಮವಾಡ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಾವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್ ಸೈಕಲ ವೇಗ ನಿಯಂತ್ರಣ ಮಾಡಲಾಗದೇ ಮೋಟರ್ ಸೈಕಲನ್ನು ರಸ್ತೆ ಮೇಲೆ ಕೆಡವಿ ತನಗೆ ತಲೆಗೆ ಮೈಕೈಗೆ ಬಾರೀ ಗಾಯಪಡಿಸಿಕೊಂಡಿದ್ದಲ್ಲದೇ  ಉಪಚಾರಕ್ಕೆ ಅಂತಾ ಜಿಲ್ಲಾ  ಆಸ್ಪತ್ರೆ ಧಾರವಾಡಕ್ಕೆ ಹಾಗೂ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚರಿಸಿಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಈ ದಿವಸ ದಿನಾಂಕ 01-02-2018 ರಂದು ಬೆಳಗಿನ 0900 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 37/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ಲ ಹದ್ದಿಯ ಶ್ರೀ ಸಿದ್ದಾರೂಢಮಠದ ಎದುರಿಗೆ ವ್ಯಾನ್ ನಂಬರ GA-01/R-1570 ನೇದ್ದರನ್ನು ಅದರ ಚಾಲಕನಾದ ಅಮರ ಶೇಯಾಂಶಕುಮಾರ ಗೌಡರ ಸಾ!! ಕುಸುಗಲ್ಲ ತಾ!! ಹುಬ್ಬಳ್ಲಿ ಇತನು ಸದರ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಅಜಗಾತಕರುತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಪಿರ್ಯಾಧಿ ಮಹಾಂತೇಶ ರಾಮಣ್ಣ ಕಿನ್ನೂರ ಸಾ!! ಪಶುಪತಿಹಾಳ ತಾ!! ಕುಂದಗೋಳ ಇವರು ನಡೆಯಿಸಿಕೊಂಡು ಹೊರಟಿದ್ದ ಎತ್ತಿನ ಚಕ್ಕಡಿಗೆ ಹಿಂದುಗಡೆಯಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಚಕ್ಕಡಿ ಮುರಿದು ಕೆಳಗೆ ಬೀಳುವಂತೆ ಮಾಡಿ ಚಕ್ಕಡಿಯಲ್ಲಿದ್ದ 1) ಮಹಾಂತೇಶ ರಾಮಣ್ಣ ಕಿನ್ನೂರಿ 2) ಹೊನ್ನವ್ವ ಕೊಂ ಫಕ್ಕೀರಪ್ಪ ಮಲ್ಲಿಗವಾಡ 3) ಮಹಾದೇವಿ ಕೊಂಡ ಮಹಾಂತೇಶ ಕಿನ್ನೂರಿ 4) ದಾನಪ್ಪ ರಾಮಣ್ಣ ಶಿರೂರ 5) ಮಹ್ಮದಅಲಿ ಮೌಲಾಸಾಬ ಯಲವತ್ತಿ 6) ಹುಸೇನಸಾಬ ರಾಜೇಸಾಬ ನದಾಫ್ 7) ಗಂಗವ್ವ ಕೊಂ ಫಕ್ಕೀರೇಶ ನೂಲ್ವೀ ಇವರಿಗೆ ಸಾಧ ವ ಬಾರಿ ಗಾಯಪಡಿಸಿದ್ದಲ್ಲದೇ, ಎರಡೂ ಎತ್ತುಗಳಿಗೆ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ 16/2018, 17/2018 ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.