ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 3, 2018

CRIME INCIDENTS 03-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-02-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಳಿಯಾಳ ದಾರವಾಡ ರಸ್ತೆಯ ಮೇಲೆ ಬಣದೂರ ಕ್ರಾಸ ಹತ್ತಿರ ರಸ್ತೆಯ ಮೇಲೆ ಅಶೋಕ ಲೈಲ್ಯಾಂಡ ಕಂಪನಿಯ ಗೂಡ್ಸ ವಾಹನ ನಂಬರ ಕೆ.ಎ 25/ಡಿ-9325 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ದಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹಳಿಯಾಳ ಕಡೆಯಿಂದ ದಾರವಾಡ ಕಡೆಗೆ ಹೊರಟಿದ್ದ ಮೋಟರ ಸೈಕಲ್ಲ ನಂಭರ ಕೆ ಎ25/ಇ.ಎನ್ -5862 ನೇದ್ದಕ್ಕೆ ಡಿಕ್ಕಿ ಮಾಡಿ ಕೆಡವಿ ಅದರ ಸವಾರವಾದ ವಿವೇಕ ತಂದೆ ಪ್ರವೀಣ ಕಾಡಾಪೂರ ಸಾ|| ಹುಬ್ಬಳ್ಳಿ ಹಾಗೂ ಅವನ ಹಿಂದೆ ಕುಳಿತ ಮಂಜುನಾಥ ತಂದೆ ಗಿರಿಮಲ್ಲಪ್ಪ ವಡ್ಡಟ್ಟಿ ಸಾ|| ಹುಬ್ಬಳ್ಳಿ ಅವರಿಗೆ ಸ್ಥಳದಲ್ಲಿಯೆ ಮರಣ ಪಡಿಸಿ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೆ ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2018 ಕಲಂ 279.304(ಎ) ವಾಹನ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಬಿ.ಎಮ್ ಬ್ಯಾಂಕದಲ್ಲಿ ದಿನಾಂಕಃ 08-12-2004 ರಂದು ನಮೂದ ಆರೋಪಿತನಾದ ರಾಮಕ್ರಷ್ಣ ಹುಬ್ಬಳ್ಳಿ ಬ್ಯಾಂಕಿಗೆ ತಾನು ರೇಷ್ಮೆ ಇಲಾಖೆಯಲ್ಲಿ  ಎಸ್.ಡಿ.ಸಿ ಅಂತಾ ಕೆಲಸವನ್ನು ಮಾಡುತ್ತೇನೆ ಅಂತಾ ಸುಳ್ಳು ದಾಖಲಾತಿಗಳನ್ನು ಕೊಟ್ಟು 75,000/-00 ರೂ ಲೋನ ಪಡೆದುಕೊಂಡು ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ಮೋಸವನ್ನು ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2018  ಕಲಂ 406.420.423.471 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಹದ್ದಿನಗುಡ್ಡ ಹತ್ತಿರ ರಸ್ತೆ ಲಾರಿ ನಂ GJ-21-W-3684 ನೇದ್ದರ ಚಾಲಕನು ತನ್ನ ಲಾರಿಯನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿ ವೇಗ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಪಿರ್ಯಾದಿದಾರರ ಬಾಬತ ಟ್ರ್ಯಾಕ್ಟರ ಎಂಜಿನ ನಂ CTW-4113 /ಟ್ರೇಲರ ನಂ CTW-4115 ನೇದಕ್ಕೆ ಹಿಂದನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ NHDL ಕಂಪನಿಯವರು ಅಪಘಾತದ ಸ್ಥಳದಲ್ಲಿ ರಸ್ತೆ ಪಕ್ಕ ತೆಗ್ಗಿಗೆ ಯಾವುದೇ ತಡೆಗೋಡೆ ನಿರ್ಮಿಸದ್ದರಿಂದ ಲಾರಿಯನ್ನು ರಸ್ತೆ ಬದಿಯ ತೆಗ್ಗಿನಲ್ಲಿ ಕೆಡವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ ಟ್ರ್ಯಾಕ್ಟರನಲ್ಲಿದ್ದ ಚನ್ನಪ್ಪ ಗೂಳಪ್ಪ ದೊಡಮನಿ ಇವರಿಗೆ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2018 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ ಮಂಜುನಾಥ ಮಾಳಕೋಟಿ ಇವರ ಫಾರ್ಮ ಹೌಸ ಹತ್ತಿರ, ವರೂರ ಕಂಪ್ಲಿಕೊಪ್ಪ ರಸ್ತೆ ಮೇಲೆ, ಆರೋಪಿ ಸಾಯಿನಾಥ ಚಂದ್ರಕಾಂತ ಮನಿಗಾರ ಸಾ. ನೇಕಾರ ನಗರ, ಹುಬ್ಬಳ್ಳಿ ಇವರು ತನ್ನ ಮೋಟರ ಸೈಕಲ್ ನಂಬರ ಕೆಎ-25-ಇ.ಎಂ.-9595 ನೇದ್ದನ್ನು ಕಂಪ್ಲಿಕೊಪ್ಪ ಕಡೆಯಿಂದ ವರೂರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ನಿಯಂತ್ರಣ ಕಳೆದುಕೊಂಡು, ಮೋಟರ ಸೈಕಲ್ ಸ್ಕಿಡ್ಡಾಗಿ ಮೋಟರ ಸೈಕಲ್ ಕೆಡವಿ ಅಪಘಾತಪಡಿಸಿ, ಮೋಟರ ಸೈಕಲ್ ಹಿಂಬದಿ ಸವಾರ ಕಿರಣ ಸುಭಾಸ ಖರಾಟೆ ಸಾ. ಧಾರವಾಡ, ವಿದ್ಯಾಗಿರಿ, ಲಿಡ್ಕರ ಕಾಲನಿ, ಜೆ.ಎಸ್.ಎಸ್ ಕಾಲೇಜ್ ಹಿಂದುಗಡೆ ನೇದವನಿಗೆ ತಲೆಗೆ ಭಾರಿ ಗಾಯಪಡಿಸಿ, ಧಾರವಾಡದ, ಸತ್ತೂರ, ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ, ದಿನಾಂಕ: 02-02-2018 ರಂದು ರಾತ್ರಿ 11-45 ಗಂಟೆಗೆ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿದ್ದಲ್ಲದೆ, ತಾನೂ ಸಹ ತಲೆಗೆ ತೀವ್ರ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 35/2018 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ರಮ್ಯಾರೆಸಿಡೆನ್ಸಿ ಹತ್ತಿರ ರಸ್ತೆ ಮೇಲೆ ಟ್ರ್ಯಾಂಕರ ಲಾರಿ ನಂ KA-02-AD-3744 ನೇದರ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿ ವೇಗ ನಿಯಂತ್ರಣ ಮಾಡಲಾಗದೇ  ಧಾರವಾಡ ಕಲಘಟಗಿ ರಸ್ತೆಯಿಂದ NH-04 ಬೈಪಾಸ ರಸ್ತೆಗೆ ಬರುತ್ತಿದ್ದ ಅಶೋಕ ಲೈಲ್ಯಾಂಡ ಗೂಡ್ಸ ವಾಹನ ನಂ KA-26-A-6617 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಅಶೋಕ ಲೈಲ್ಯಾಂಡ ಗೂಡ್ಸ ವಾಹನದ ಚಾಲಕನಿಗೆ ಬಾರೀ ಸ್ವರೂಪದ ಗಾಯಪಡಿಸಿ ಟ್ಯಾಂಕರ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2018 ಕಲಂ 279.338 ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ, ಜಾಡಗೇರಿ ಓಣಿಯಲ್ಲಿರುವ, ಮೃತ ಇಮಾಮಸಾಬ ಸಣ್ಣಮೋದಿನಸಾಬ ಅಣ್ಣಿಗೇರಿ ವಯಾ. 50 ವರ್ಷ ಸಾ. ಬ್ಯಾಹಟ್ಟಿ ಇವರು ಮನೆಯ ಮಾಳಿಗೆ ಮೇಲೆ ಬೆಳೆದ ಕಸವನ್ನು ಕೀಳಲು ಮೇಲೆ ಹತ್ತಿ, ಕಸ ಕಿತ್ತು ಚಿಚ್ಚಣಿಕೆಯಿಂದ ಕೆಳಗೆ ಇಳಿಯುತ್ತಿರುವಾಗ, ನಿಚ್ಚಣಿಕೆಯ ಮೇಲಿನ ಹಲ್ಲು ಮುರಿದು, ಮೇಲಿಂದ ಕೆಳಗೆ ಬಿದ್ದು, ತಲೆಗೆ, ನಡಕ್ಕೆ ಪೆಟ್ಟಾಗಿ ಉಪಚಾರಕ್ಕೆ ಅಂತ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ, ಉಪಚಾರ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ದಿನಾಂಕ: 03-02-2018 ರಂದು ಬೆಳಗಿನ ಜಾವ 6-00 ಗಂಟೆಗೆ ಮೃತಪಟ್ಟಿದ್ದು ವಿನಃ, ತನ್ನ ಗಂಡನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವ್ನನು ದಾಖಲಿಸಿದ್ದು ಇರುತ್ತದೆ.