ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 4, 2018

CRIME INCIDENTS 04-02-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 04-02-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 09/2018 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 03-02-2018 ರಂದು 19-30 ಗಂಟೆ ಸುಮಾರಿಗೆ ಆರೋಪಿ ಅಶೋಕ ಕರಿಕಟ್ಟಿ ಸಾಳ ಹುಲಿಕಟ್ಟಿ ಇತನು ಆಪೇ ಮೂರು ಗಾಲಿಯ ಅಟೋ ಗೂಡ್ಸ ವಾಹನ ಟೆಂಪರವರಿ ಪಾಸಿಂಗ ನಂಬರ KA-26/TZ-1754 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅಣ್ಣಿಗೇರಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗೂ ಅಲಕ್ಷನತದಿಂದ ಅಡ್ಡಾದಿಡ್ಡಿಯಾಗಿ ತನ್ನ ವಾಹನವನ್ನು ಚಲಾಯಿಸಿಕೊಂಡು ತನ್ನ ಬಲಸೈಡಿಗೆ ಹೋಗಿ, ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಟಾಟಾ ಏಸ್ ವಾಹನ ನಂಬರ್ KA-37/8435 ನೇದ್ದಕ್ಕೆ ಡಿಕ್ಕಿ ಮಾಡಿ ತನಗೆ ಹಾಗೂ ತನ್ನ ವಾಹನದಲ್ಲಿದ್ದ ಗಂಗಪ್ಪ ಹನಮಂತಪ್ಪ ಹೊಂಬಳ ಮತ್ತು ಅವನ ಹೆಂಡತಿ ದುರಗವ್ವ ಕೋಂ ಗಂಗಪ್ಪ ಹೊಂಬಳ ಸಾ!! ಗದಗ ಹಾಗೂ ಪಿರ್ಯಾದಿಗೆ ಸಾಧಾ ವ ಭಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 10/2018 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:01-02-2018 ರಂದು ರಾತ್ರಿ 22-00 ಗಂಟೆಯಿಂದ ದಿ:02-02-2018ರಂದು ಬೆಳಗಿನ 04-30 ಗಂಟೆ ನಡುವಿನ ಅವದಿಯಲ್ಲಿ ಮಲಕನಕೊಪ್ಪ ಗ್ರಾಮದ ಪಿರ್ಯಾದಿದಾರ  ಈಶ್ದರಪ್ಪ ದೇಸಾಯಿ ಇವರ ವಾಸದ ಮನೆಯಲ್ಲಿ ಯಾರೋ ಕಳ್ಳರು ಮನೆಯ  ಹಿತ್ತಲ ಬಾಗಿಲ ತೆರೆದುಕೊಂಡು ಒಳ ಪ್ರವೇಶಮಾಡಿ ಮನೆಯ ಕೊಠಡಿಯಲ್ಲಿ ಇರಿಸಿದ ಟ್ರೇಜರಿ ಬಾಗಿಲು ಕೀಲಿ ತೆಗೆದು ಅದರಲ್ಲಿದ್ದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಗತನ ಮಾಡಿಕೊಂಡು ಹೋದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 23/2018 ಕಲಂ 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 04-02-2018 ರಂದು 0900 ಗಂಟೆ ಸುಮಾರಿಗೆ ಶಿವಳ್ಳಿ ಉಣಕಲ್ ರಸ್ತೆ ತೋಳನಹಳ್ಳದ ಹತ್ತಿರ ರಸ್ತೆ ಮೇಲೆ ಮೋಟರ್ ಸೈಕಲ್ ನಂ KA-25-EV-6823ನೇದರ ಚಾಲಕ ಮಂಜುನಾಥ ಕೋಳಿ ಸಾ: ಊಣಕಲ್ಲ ಇತನು ತನ್ನ ಮೋಟರ್ ಸೈಕಲನ್ನು ಶಿವಳ್ಳಿ ಕಡೆಯಿಂದ ಉಣಕಲ್ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ಉಣಕಲ್ ಕಡೆಯಿಂದ ಶಿವಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಪಿರ್ಯಾದಿಯ ಟಾಟಾ ಏಸ್ ವಾಹನ ನಂ KA-25-AA-6552 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ಮೋಟರ್ ಸೈಕಲ ಹಿಂಬದಿ ಸವಾರರಾದ ವಿಜಯ ಸಿದ್ದಪ್ಪ ಮಾಗೊಂಡ ಸಾ: ಗೋಪ್ಪನಕೊಪ್ಪ ಹಾಗೂ ಸಂಜು ಲಂಕಿ ಸಾ: ಗೋಪ್ಪನಕೊಪ್ಪ ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 41/2018 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 36/2018 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.