ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 5, 2018

CRIME INCIDENTS 05-02-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 05-02-2018 ರಂದು  ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 05/02/2018 ರಂದು ಮುಂಜಾನೆ 08-30 ಗಂಟೆ ಸುಮಾರಕ್ಕೆ ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಹೆಬಸೂರ ಹದ್ದಿಯ ನಿಗರಿ ಹಳ್ಳದ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ.ಎ-25/ಎಫ್-2959 ನೇದ್ದನ್ನು ಅದರ ಚಾಲಕ ಕಲ್ಲಪ್ಪ ಬರಮಪ್ಪ ಸುಳ್ಳದ ಸಾ. ಅರೆಕುರಹಟ್ಟಿ ತಾ!! ನವಲಗುಂದ ಇತನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತಿ ಜೋರಿನಿಂದ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹೆಬಸೂರ ಕಡೆಯಿಂದ ಕಿರೇಸೂರ ಕಡೆಗೆ ಬರುತ್ತಿದ್ದ ಮೋಟರ ಸೈಕಲ್ ನಂ. ಕೆ.ಎ-31/ಜೆ.-5692 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟರ ಸೈಕಲ್ ಸವಾರ ಶಿವಪ್ಪ ದ್ಯಾಮಣ್ಣ ಹುಗ್ಗೇನ್ನವರ ಸಾ. ಕಿರೇಸೂರ ಇತನಿಗೆ ಹಾಗೂ ಹಿಂಬದಿಯ ಸವಾರನಾದ ಗದಿಗೆಪ್ಪ ಹನಮಂತಪ್ಪ ಯಂಡಿಗೇರಿ @ ಗುಮ್ಮಗೋಳ ಸಾ.ಕಿರೇಸೂರ ಇವರೂಗಳಿಗೆ ತೆಲೆಗೆ ಕೈಕಾಲಿಗೆ ಭಾರಿ ಗಾಯಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 37/2018 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 05-02-2018 ರಂದು ಬೆಳಗಿನ ಜಾವ 01-00 ಗಂಟೆ ಸುಮಾರಿಗೆ  ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮದ ಹತ್ತಿರ ರಸ್ತೆ ಮೇಲೆ  ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿ ವೇಗ ನಿಯಂತ್ರಣ ಮಾಡಲಾಗದೇ ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಹೋಗುತ್ತಿದ್ದ ಮೋಟರ ಸೈಕಲ ನಂ ಕೆಎ 25 ಈಆರ್ 5507 ನೇದ್ದಕ್ಕೆ ಡಿಕ್ಕಿ ಪಡಿಸಿ ಮೋಟರ ಸೈಕಲ ಚಾಲಕ ನೀತಿನ ತಂದೆ ಬಾಸ್ಕರ ಶೇಟ್ಟಿ ವಯಾಃ22ವರ್ಷ ಉದ್ಯೋಗಃವಿದ್ಯಾರ್ಥಿ ಸಾಃಶಂಕರ ಮಠದ ಹತ್ತಿರ ಸವದತ್ತಿ ಇವನಿಗೆ ಭಾರಿ ಗಾಯ ಪಡಿಸಿ ಸ್ಥಳದಲ್ಲಿ ಮರಣ ಪಡಿಸಿದಲ್ಲದೆ ಮೋಟರ ಸೈಕಲ ಹಿಂದೆ ಕುಳಿತ ಪರಮೇಶ್ವರ ತಂದೆ ಶಂಬುಲಿಂಗ ಕುಲ್ಕರ್ಣಿ ಸಾಃಧಾರವಾಡ ಇವನಿಗೆ ಭಾರಿ ಗಾಯ ಪಡಿಸಿ ಲಾರಿ ಸಮೇತವಾಗಿ ಪರಾರಿಯಾದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 43/2018 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-304A,338,279) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 05-02-2018 ರಂದು 16-00 ಗಂಟೆಗೆ ಮರೇವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಆರೋಪಿತಳಾ ಬೇಬಿಜಾನ ಮುಲ್ಲಾನವರ ಸಾ: ಮರೇವಾಡ ಇತಳು ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಪಾಸು ವ ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತಮ್ಮ  ತಾಬಾದಲ್ಲಿ ಅಕ್ರಮವಾಗಿ ಒಂದು ಗುಟಕಾ ಸ್ಟಾರ ಕೈ ಚೀಲಗಳಲ್ಲಿ  ಒಟ್ಟು 24 ಓಲ್ಡ ಟವರನ್ ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ:1608/- ರೂ   ನೇದವುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಸಿಕ್ಕ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 44/2018 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.