ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 6, 2018

CRIME INCIDENTS 06-02-2018

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06-02-2018 ರಂದು ವರದಿಯಾದ ಪ್ರಕರಣಗಳು

1ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿ ಶಿವಪುತ್ತಪ್ಪ ಬ್ಯಾಹಟ್ಟಿ ಸಾ:ಸುಳ್ಳ ಇತನು ದಿನಾಂಕ 05-02-2018 ರಂದು ಮುಂಜಾನೆ 11-10 ಗಂಟೆಯ ಸುಮಾರಿಗೆ ತಾನೂ ನಡೆಸುತ್ತಿದ್ದ ಟಾಟಾ ಗೂಡ್ಸ ಗಾಡಿ ನಂ ಕೆಎ-25/ಸಿ-3651 ನೇದನ್ನು ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹನಸಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-42/ಎಪ್ -850 ನೇದರ ಬಲ ಸೈಡಗೆ ಬಂದು ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದಲ್ಲದೆ ತನ್ನ ಗಾಡಿಯಲ್ಲಿದ್ದ 8 ಜನರಿಗೆ ಸಾಧಾ ವ ಭಾರಿ ಗಾಯ ಪಡಿಸಿ ತಾನೂ ಭಾರಿ ಗಾಯ ಹೊಂದಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 09/2018 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿ: ಮೊಟಾರ ಸೈಕಲ ನಂ.ಕೆ.ಎ.25-ಎಚ.ಎ-1570 ನೇದ್ದರ ಚಾಲಕನು ದಿನಾಂಕ:04-02-2018 ರಂದು ಸಂಜೆ-6-15 ಗಂಟೆ ಸುಮಾರಿಗೆ ಮುಮ್ಮಿಗಟ್ಟಿ ತಾಂಡಾ ಕಡೆಯಿಂದ ಮುಮ್ಮಿಗಟ್ಟಿ ಕಡೆಗೆ ಅತೀಜೊರಿನಿಂದ ವ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಮೇಲೆ ಹೋಗುತ್ತಿದ್ದ ಪಿರ್ಯಾದಿಯ ತಮ್ಮನಾದ ರಾಮಪ್ಪ.ತಂದೆ ಮಡಿವಾಳಪ್ಪ.ಗುಂಡಣ್ಣವರ ಸಾಃಮುಮ್ಮಿಗಟ್ಟಿ   ಇತನಿಗೆ ಹಿಂದಿನಿಂದಾ ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರಿಸ್ವರೂಪದ ಗಾಯಪಡಿಸಿ ಎಕ್ಸಿಡೆಂಟ ಮಾಡಿದ ತನ್ನ ಮೊಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಹೋದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 21/2018 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-06-02-2018 ರಂದು ಸಂಜೆ 4-45 ಗಂಟೆಯ ಸುಮಾರಿಗೆ ಕಾಮಧೇನು ಬೋಗೆನಾಗರಕೊಪ್ಪ ರಸ್ತೆಯ ಮೇಲೆ ಧರ್ಮಣ್ಣ ಕಟ್ಟಿ ಇವರ ಜಮೀನ ಹತ್ತೀರ ಆರೋಪಿ ಮಾದೇವಪ್ಪ ದುಮ್ಮವಾಡ ಇವನು ಟ್ರ್ಯಾಕ್ಟರ ಎಂಜಿನ್ ನಂ KA-18-TA-0542 ನೇದ್ದರ ಮಡ್ ಗಾರ್ಡ ಮೇಲೆ ತನ್ನ ತಾಯಿ ಸಾವಕ್ಕಾ ಕೋಂ ಬಸವಣ್ಣೆಪ್ಪ ದುಮ್ಮವಾಡ 62 ವರ್ಷ ಸಾ..ಕಾಮಧೇನು ಇವಳಿಗೆ ಕೂಡ್ರಿಸಿಕೊಂಡು ಹೊಲದಿಂದ ಮನೆಯ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಮಡ್ ಗಾರ್ಡ ಮೇಲೆ ಕುಳಿತ ಪಿರ್ಯಾಧಿಯ ತಾಯಿ ಸಾವಕ್ಕಾ ಇವಳು ಪುಟಿದು ಕೆಳಗೆ ಬೀಳುವಂತೆ ಮಾಡಿ ಅವಳ ಮುಖಕ್ಕೆ, ಎಡಗೈಗೆ ಗಾಯಪಡಿಸಿ ಉಪಚಾರಕ್ಕೆ ಅಂತಾ ಕಲಘಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆದಲ್ಲಿ ಮರಣಹೊಂದುವಂತೆ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 26/2018 ಕಲಂ IPC 1860 (U/s-279,304(A)) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.