ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 9, 2018

CRIME INCIDENTS 09-02-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದ್ಯಾಮಾಪೂರ ಗ್ರಾಮದ ಸೋಮರಾಯ ತಂಬರಣ್ಣವರ ಇವರು ವಾಸಿಸುವ ಮನೆಯಲ್ಲಿ ಯಾರೋ ಕಳ್ಳೃರು  ವಾಸಿಸುವ ಮನೆಯ ಹಿತ್ತಿಲು ಬಾಗಿಲದ ಚಿಲಕ ತೆಗೆದು ಒಳಹೊಕ್ಕು ಪಡಸಾಲಿಯಲ್ಲಿಟ್ಟಿದ್ದ ಟ್ರೇಜರಿಯ ಕೀಲಿ ತೆಗೆದು ಅದರಲ್ಲಿಟ್ಟಿದ್ದ 60,000/- ಕಿಮ್ಮತ್ತಿನ ಒಟ್ಟು 35 ಗ್ರಾಂ ತೂಕದ ಬಂಗಾರದ ಆಭರಣಗಳು, 10,000/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗಳು, & 10,000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 35/2018 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಹಂಗರಕಿ ಗ್ರಾಮದ ಹತ್ತಿರ  ಮೊಟಾರ ಸೈಕಲ ನಂ.ಕೆ.ಎ.25-ಇಡಬ್ಲು-9249 ನೇದ್ದರ ಸವಾರನಾದ ಆತ್ಮಾನಂದ.ಮಹಾದೇವಪ್ಪ.ಬಾರ್ಕಿ.@ ಬಾರಕೇರ ಸಾಃಹಂಗರಕಿ ಇತನು ತನ್ನ ಮೊಟಾರ ಸೈಕಲನ್ನು ಗರಗ ಕಡೆಯಿಂದ ಹಂಗರಕಿ ಕಡೆಗೆ ಅತಿಜೋರಿನಿಂದ ವ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಶಿವಾನಂದ.ತಿಮ್ಮಾಪೂರ ಇವರ ಮನೆಯ ಮುಂದೆ ರಸ್ತೆಯ ಮೇಲೆ ಮೊಟಾರ ಸೈಕಲನ್ನು ಸ್ಕಿಡ್ ಮಾಡಿ ಕೆಡವಿ ಹಿಂದೆ ಕುಳಿತ ಆನಂದ.ಶಿವಪ್ಪ.ಬಾರ್ಕಿ.@ ಬಾರಕೇರ ವಯಾ-27 ವರ್ಷ.ಸಾಃಹಂಗರಕಿ ಇತನಿಗೆ ಮರಣ ಹೊಂದುವಂತೆ ಮಾಡಿ ತನಗೂ ಸಾದಾ ಸ್ವರೂಪದ ಗಾಯಪಡಿಸಿಕೊಂದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2018 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.