ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 10, 2018

CRIME INCIDENTS 10-02-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10-02-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 09-02-2018 ರಂದು 20-30 ಗಂಟೆ ಸುಮಾರಿಗೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ, ಅಣ್ಣಿಗೇರಿ ಕಡೆಯಿಂದ ಹುಲಕೋಟಿ ಕಡೆಗೆ ಡಿಸ್ಕವರಿ ಮೋಟರ ಸೈಕಲ ನಂ KA-26/V-2075 ನೇದ್ದನ್ನು ನಡೆಸಿಕೊಂಡು ಹೊರಟಿದ್ದ ಸಂತೋಷರಡ್ಡಿ ಗುರಪ್ಪ ಚಿಲಕವಾಡ ಸಾ!! ಹುಲಕೋಟಿ ಈತನ ಮೋಟರ ಸೈಕಲ್ಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಭಾರಿ ಪ್ರಮಾಣದ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಅಲ್ಲದೇ ವಾಹನ ಸಮೇತ ಪರಾರಿ ಆದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣಾ ಗುನ್ನಾ ನಂ. 11/2018 ಕಲಂ IPC 1860 (U/s-279,304(A)); INDIAN MOTOR VEHICLES ACT, 1988 (U/s-134(A&B),187) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 03-02-2018 ರಂದು 1430 ಗಂಟೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಪೆಟ್ರೋಲ್ ಬಂಕ ಹತ್ತಿರ ಇದರಲ್ಲಿ ಆರೋಪಿ ನಂ 1 ಬಿ.ಎಮ್.ಬಾಗವಾನ ನೇದವನು ತನ್ನ ಮೋಟಾರ ಸೈಕಲ್ ನಂ ಕೆ.ಎ-25/ಇ.ಜೆ-9331 ನೇದ್ದರಲ್ಲಿ ಒಬ್ಬನಿಗೆ ಹತ್ತಿಸಿಕೊಂಡು ಶರೆವಾಡ ಕಡೆಯಿಂದ ಕುಂದಗೋಳ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಆರೋಪಿ ನಂ 2 ಎಮ್.ಬಿ.ಗರಗ ನೇದವನು ತನ್ನ ಮೋಟಾರ ಸೈಕಲ್ ನಂ ಕೆ.ಎ-25/ಇ.ವಾಯ್-7808 ನೇದ್ದನ್ನು ಅತೀ ಜೋರಿನಿಂದ ವ ಅಲಕ್ಷತನದಿಂದ ಚಲಾಯಿಸಿ, ಸದರಿ ಆರೋಪಿತರಿಬ್ಬರೂ ಎದುರು ಬದುರಾಗಿ ಪರಸ್ಪರ ತಮ್ಮ ಮೋಟಾರ ಸೈಕಲ್ ಗಳನ್ನು ಡಿಕ್ಕಿ ಮಾಡಿ ಅಪಘಾತಪಡಿಸಿ ತಮಗೆ ಸಾದಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿಕೊಂಡ ಅಪರಾಧ. ಈ ಕುರಿತು ಕುಂದಗೋಳ ಪೊಲೀಸ್ ಠಾಣಯಲ್ಲಿ ಗುನ್ನಾ ನಂ. 39/2018 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ:ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 33/2018, 34/2018, 35/2018, 36/2018, 37/2018 ಮತ್ತು 38/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 45/2018 ನೇದ್ದನ್ನು ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:10-02-2018 ರಂದು ಮುಂಜಾನೆ 08-00 ಗಂಟೆಗೆ ಜಿನ್ನೂರ ಗ್ರಾಮದ ಪಿರ್ಯಾದಿದಾರಳಾದ ಶಾಂತವ್ವಾ ಹಿಂಡಸಗೇರಿ  ಮನೆಯ ಮುಂದೆ ಆರೋಪಿತರಾದ ನಿಂಗಪ್ಪ ಬಸವಣ್ಣೆಪ್ಪ ಹಿಂಡಸಗೇರಿ ಹಾಗೂ ಮಹಾದೇವಿ ಕೊಂ ನಿಂಗಪ್ಪ ಹಿಂಡಸಗೇರಿ ಸಾ: ಜಿನ್ನೂರ ಇವರು ಪಿರ್ಯಾದಿದಾರಳ ಗಂಡನು ಖರೀದಿಸಿ ಖುಲ್ಲಾ ಜ್ಯಾಗೆಯನ್ನು ತಮಗೆ ಕೊಡಬೇಕು ಅಂತಾ ಅವಾಚ್ಯ ಬೈದಾಡುತ್ತಾ ಅವಳಿಗೆ ರುಬ್ಬುಗುಂಡಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 37/2018 ಕಲಂ IPC 1860 (U/s-324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-10-02-2018 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ಜಿನ್ನೂರ ಗ್ರಾಮದ ಬಸ್ಟ್ಯಾಂಡ ಎದುರಿಗೆ ಆರೋಪಿತರು ಪಿರ್ಯಾದಿ ಹಾಗು ಅವಳ ಗಂಡನೊಂದಿಗೆ ಮನೆಯ ಜಾಗೆಯ ಸಲುವಾಗಿ ಹಿಂದಿನಿಂದಲೂ ತಂಟೆ ತಕರಾರು ಮಾಡಿಕೊಂಡು ಬಂದಿದ್ದಲ್ಲದೆ ಅದೆ ತಂಟೆಯ ದ್ವೇಷದಿಂದ ಪಿರ್ಯಾಧಿ ಗಂಡ ನಿಂಗಪ್ಪನಿಗೆ ಬೈದಾಡುತ್ತಿರುವಾಗ ನಿಂಗಪ್ಪನು ಹಿಂಡಸಗೇರಿ ಇವನು ಅವರಿಗೆ ಹಿರಿಯೆ ಆಸ್ತಿ ಹಂಚಿಕೆ ಮಾಡಿಕೊಟ್ಟಿರುವರು ಇನ್ನು ಎಷ್ಟು ಜಾಗೆ ಕೊಡಬೇಕು ನಿಮಗೆ ಅಂತಾ ಅಂದಾಗ ಆರೋಪಿ 1 ಶಿವಪ್ಪನು ಕಲ್ಲಿನಿಂದಾ , ಆರೋಪಿ 2 ನಿಂಗಪ್ಪ & 3 ಘಕ್ಕಿರಪ್ಪ ಸರವರಿ ನೇದವರು ಒಂದು ಬಡಿಗೆಯಿಂದಾ ಆರೋಪಿ ನಂ 4 ಶಾಂತವ್ವ ನೇದವಳು ಕೈಯಿಂದಾ ತಲೆಗೆ, ಮೈಕೈಗೆ ಮುಖಕ್ಕೆ ಹೊಡಿಬಡಿ ಮಾಡಿ ರಕ್ತಗಾಯಪಡಿಸಿದ್ದು ಬಿಡಿಸಿಕೊಳ್ಳಲು ಬಂದ ಪಿರ್ಯಾಧಿಗೂ ಸಹಾ ಆರೋಪಿತರೆಲ್ಲರೂ ದೂಡಾಡಿ ಕೈಯಿಂದಾ ಹೊಡಿಬಡಿ ಮಾಡಿ ಜಾಗೆ ಕೊಡಲಿಲ್ಲಾ ಅಂದ್ರ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 38/2018 ಕಲಂ IPC 1860 (U/s-323,324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ-09-02-2018 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಹೂಲಿಕಟ್ಟಿ ತಾಂಡಾದ ರಾಮಚಂದ್ರ ಲಮಾಣಿ ಇವರ ಮನೆಯ ಹತ್ತೀರ ರಸ್ತೆಯ ಮೇಲೆ ಮಿನಿ ಗೂಡ್ಸ ವಾಹನ ನಂ KA-25-AA-9100 ನೇದ್ದರ ಚಾಲಕನು ಅಮರಗೋಳದ ಜೈನ್ ಮಾರ್ಬಲ್ಸದಲ್ಲಿ ಮಾರ್ಬಲ್ಸಗಳನ್ನು ಲೋಡ್ ಮಾಡಿಕೊಂಡು ಬಂದು ರಾಮಚಂದ್ರ ಲಮಾಣಿ ಇವರ ಮನೆಯ ಹತ್ತೀರ ಮಾರ್ಬಲ್ಸಗಳನ್ನು ಅನ್ ಲೋಡ್ ಮಾಡುವ ಕಾಲಕ್ಕೆ ಹಿಂದೆ ನೋಡದೆ ಒಮ್ಮೇಲೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ರಿವರ್ಸ ನೆಡೆಸಿಕೊಂಡು  ಹೋಗಿ ಮಾರ್ಬಲ್ಸಗಳನ್ನು ಇಳಿಸುತ್ತಿದ್ದ ಪಿರ್ಯಾದಿಯ ಮಗನಾಧ ಮಹಾದೇವಪ್ಪ ಶ್ರೀಕಾಂತ ದೊಡಮನಿ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಅವನ ಎಡಪಕ್ಕಡಿಯ ಹತ್ತೀರ ಭಾರಿಗಾಯಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 38/2018 IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ