ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 12, 2018

CRIME INCIDENTS 12-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-02-2018 ರಂದು ವರದಿಯಾದ ಪ್ರಕರಣಗಳು
1. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 11-02-2018 ರಂದು 23-30 ಗಂಟೆಗೆ ಅಳ್ನಾವರ ಪೊಲೀಸ ಠಾಣೆಯಲ್ಲಿ ಎನ್.ಸಿ 03/18 ನೇದ್ದರ ವಿಚಾರಣೆ ನಡೆಸುತ್ತೀರುವಾಗ ಆ ಕಾಲಕ್ಕೆ ಅಜ್ಜಪ್ಪ ರಾವಪ್ಪ ಕುರುಬರ ಹಾಗೂ ಅವನ ಮಗ ವಿನಾಯಕ ಅಜ್ಜಪ್ಪ ಕುರುಬರ ಸಾ: ಇಬ್ಬರೂ ಅಳ್ನಾವರ ಇವರು ಈ  ಹಿಂದೆ ವಿನಾಯಕ ಕುರುಬರ ಇವನ ಮೇಲೆ ಸರಾಯಿ ಕುಡಿದ ವಾಹನ ಚಲಾಯಿಸಿದ ಕೇಸ ಹಾಕಿದ್ದರ ಸಿಟ್ಟಿನಿಂದ  ಇವರು ಜೋರು ದ್ವನಿಯಿಂದ ಒದುರಾಡುತ್ತಾ ಠಾಣೆಗೆ ಬಂದು ಪೊಲೀಸರು ನಿಮ್ಮದು ಬಹಳ ಆಗೈತಿ  ಪೊಲೀಸರು ನಾಲಾಯಕ ನನ್ನ ಮಕ್ಕಳಾ, ನಮ್ಮ ಮೇಲೆ ಸರಾಯಿ ಕುಡಿದು ವಾಹನದ ಚಾಲಾಯಿಸಿದ ಬಗ್ಗೆ ಕೇಸ ಹಾಕತ್ತೀರಾ ಮಕ್ಕಳಾ ನಿಮಗೆ ಒಂದು ಗತಿ ಕಾಣಿಸ್ತೇವಿ ಅಂತಾ ಬೈದಾಡುತ್ತಿದ್ದಾಗ ಹಿಂಗ್ಯಾಕ ಬೈದಾಡುತ್ತೀರಿ ಅಂತಾ ಪಿರ್ಯಾದಿದಾರನು ವಿಚಾರಿಸಿದ್ದಕ್ಕೆ ಅವರ ಮೈಮೇಲೆ ಏರಿ ಹೋಗಿ ನೀನು ಏನ ಮಾಡವಾ ಮಗನಾ ಅವರನ್ನು ಏಕೆ ಠಾಣೆಗೆ ಕರೆದುಕೊಂಡು ಬಂದಿ, ಆ ವಿಷಯವನ್ನು ಅಲ್ಲಿಯೇ ಮುಗಿಸುತ್ತಿದ್ದಿವಿ ನಿನ್ನ ಜಿವಂತ ಬಿಡುವುದಿಲ್ಲ ಅಂದವರೇ ಪಿರ್ಯಾದಿದಾರನು ಸಮವಸ್ತ್ರದಲ್ಲಿರುವ ಒಬ್ಬ ಸರಕಾರಿ ನೌಕರ ಅಂತಾ ಗೊತ್ತಿದ್ದರೂ ಎದೆ ಮೇಲಿನ ಪೊಲೀಸ ಅಂಗಿ ಹಿಡಿದು ಜಗ್ಗಿ ಹರಿದು ದೂಡಾಡಿ ಎದೆಗೆ ಗುದ್ದಿ ಗಾಯಪಡಿಸಿದ ಅಪರಾಧ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 12/2018 ಕಲಂ IPC 1860 (U/s-353,332,186,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ. 27/2018, 28/2018 ಮತ್ತು 29/2018 ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ. 48/2018 ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.