ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 13, 2018

CRIME INCIDENTS 13-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-02-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 12-02-2018 ರಂದು ರಾತ್ರಿ 08-45 ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-42/ಎಫ್-1084 ನೇದ್ದನ್ನು ಅದರ ಚಾಲಕನು ಅಳಗವಾಡಿ ಕಡೆಯಿಂದ  ಗೊಬ್ಬರಗುಂಪಿ ಕಡೆಗೆ ಅತಿ ಜೋರಿನಿಂದ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು ಪಿರ್ಯಾದಿಯ ಕುರಿ ಹಿಂಡಿನ ಮೇಲೆ ಹಾಯಿಸಿ 7 ಕುರಿಗಳು ಸ್ಥಳದಲ್ಲಿಯೆ ಮರಣಪಡಿಸಿ 10 ಕುರಿಗಳಿಗೆ  ಗಾಯಪಡಿಸಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 11/2018 ಕಲಂ 279 IPC ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 13-02-2018 ರಂದು ಬೆಳಗಿನ 0100 ಗಂಟೆಗೆ ಧಾರವಾಡ ಸವದತ್ತಿ ರಸ್ತೆ ಅಮ್ಮಿನಬಾವಿ ಗ್ರಾಮದ ವಾಟರ ಪಂಪ ಹೌಸ ಹತ್ತಿರ ರಸ್ತೆ ಮೇಲೆ  ಲಾರಿ ನಂ ಕೆಎ-25-ಎ-9877 ನೇದರ ಚಾಲಕನು ತನ್ನ ಲಾರಿಯನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಪಲ್ಟಿ ಮಾಡಿ ಕೆಡವಿ ಜಖಂಗೊಳಿಸಿದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 49/2018 ಕಲಂ 279 IPC ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 13-02-2018 ರಂದು 1445 ಘಂಟೆಯ ಸುಮಾರಿಗೆ ಧಾರವಾಡ ಸವದತ್ತಿ ರೋಡ ಕೆ ಇ ಬಿ ಗ್ರೀಡ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಜಾಗೆಯ ಮೇಲೆ ಆರೋಪಿ ಚಂದ್ರಶೇಖರಯ್ಯಾ ಸಾ:ಬದಾಮಿ ಇತನು ತನ್ನ ಸ್ವಂತ ಪಾಯ್ದಿಗಿಸ್ಕರ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಸರಕಾರದ ಭೋಕ್ಕಸಕ್ಕೆ ನಷ್ಟಯವನ್ನುಂಟು ಮಾಡುವ ಉದ್ದೇಶದಿಂದ ಒಂದು ಕೈಚೀಲದಲ್ಲಿ 36 ಬೆಂಗಳೂರು ಮಾಲ್ಟ ವಿಸ್ಕೀ ತುಂಬಿದ 180 ಎಮ್ ಎಲ್ ದ ಮದ್ಯೆದ ಟ್ರೇಟ್ರಾ ಪಾಕೀಟಗಳನ್ನು ಅ;ಕಿ; 1719/-ರೂ ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟವನ್ನು ಮಾಡುವಾಗ ಸಿಕ್ಕ ಅಪರಾದ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 50/2018 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ. 13/2018 ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾನಂ. 50/2018 ನೇದ್ದು ಪ್ರಕರಣ ದಾಖಲಿಸಿದ್ದು ಇರುತ್ತದೆ.