ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 14, 2018

CRIME INCIDENTS 14-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-02-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಯಾದವಾಡ ಗ್ರಾಮದ ಬಸ್ಸಸ್ಟಾಪ ಹತ್ತಿರ ಆರೋಪಿತರಾದ 1.ಪ್ರಕಾಶ ದೊಡ್ಡಮನಿ 2.ಯಲ್ಲಪ್ಪಾ ಕಜ್ಜಾಣ್ಣವರ ಇವರು  ತಮ್ಮ ಫಾಯಿದೇಗೋಸ್ಕರ ಯಾವುದೇ ಅಧಿಕೃತ ಸಾಗಾಟ ಮಾಡುವ ಲೈಸನ್ಸ ವ ಪಾಸ ವ ಪರ್ಮಿಟ ಇಲ್ಲದೆ ಒಂದು ಬಿಳಿ ಬಣ್ಣದ ಗೊಬ್ಬರ ಚೀಲದಲ್ಲಿ ಒಟ್ಟು 48 ಓಲ್ಡ ಟಾವರೇನ್ ವಿಸ್ಕಿ ತುಂಬಿದ 180 ಎಮ್. ಎಲ್. ಟೆಟ್ರಾ ಪಾಕೇಟಗಳನ್ನು [ಒಟ್ಟು ಅಃಕಿಃ 3840/-ರೂ] ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2018 ಕಲಂ 32 ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಶಹರದ ಹಳಿಯಾಳ ಸರ್ಕಲ್ ಹತ್ತಿರ ಶಶಿಕುಮಾರ ಪಟ್ಟಣಶೆಟ್ಟಿ ಇವರ ಮೊಬೈಲ್ ಅಂಗಡಿಯಲ್ಲಿ ಯಾರೋ ಕಳ್ಳರು ಕಲಘಟಗಿ ಶಾಪನ ಮುಂದಿನ ಬಾಗಿಲದ ಕೀಲಿ ಹಾಗೂ ಚಿಲಕ ಮುರಿದು ಒಳ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಹೊಸ ಮೊಬೈಲ್ ಪೋನಗಳು ಅಕಿ 4800/- ರೂ ಕಿಮ್ಮತ್ತಿನವುಗಳ್ನನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/2018 ಕಲಂ 454.457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲ್ಲೂಕ ಗಳಗಿಹುಲಕೊಪ್ಪ ಮತ್ತು ಹಿಂಡಸಗೇರಿ ಗ್ರಾಮಗಳಲ್ಲಿ ಆರೋಪಿತರಾದ  1] ಜಯವಂತ ಕಿಳ್ಳಿಕ್ಯಾತರ ಸಾ: ಹಿಂಡಸಗೇರಿ ಈತನ ಮೇಲೆ ಠಾಣೆಯಲ್ಲಿ 278/2014 .283/2017 .278/2016.2] ಬಸಪ್ಪ @ ಬಸವರಾಜ ರಾಮಪೂರ ಸಾ: ಗಳಗಿಹುಲಕೊಪ್ಪ ಈತನ ಮೇಲೆ 334/2016 ಮತ್ತು 3] ಯಲ್ಲಪ್ಪ ಸೂರಣ್ಣವರ ಸಾ: ಗಳಗಿಹುಲಕೊಪ್ಪ ಈತನ ಮೇಲೆ 334/2016 ನೇ ಪ್ರಕರಣಗಳು  ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಸ್ವಭಾವದವರಿರುತ್ತಾರೆ. ಸದರಿಯವರಿಗೆ ಹಾಗೇ ಬಿಟ್ಟಲ್ಲಿ ಮುಂಬರುವ ವಿಧಾನಸಭೆ ಚುನಾವಣಿ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಹಾಳು ಮಾಡಿ ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಗುನ್ನಾನಂ 53/2018 ಕಲಂ 107 ಸಿಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಲ್ಲಿ  ಮುಂಜಾಗೃತ ಕ್ರಮವಾಗಿ ಸಿ.ಆರ್.ಪಿ ಸಿ ನೇದ್ದರಲ್ಲಿ ಗುನ್ನಾನಂ 51/2018, 52/2018  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ:ಶಿರೂರ ಗ್ರಾಮದ ಮೃತಳು  ಲಕ್ಷ್ಮೀ ಕೋಂ ಮಂಜುನಾಥ ಬೇವೂರ ವಯಾ-28 ವರ್ಷ ಈತಳಿಗೆ ಕಳೆದ 2 ವರ್ಷಗಳಿಂದ ಹೊಟ್ಟೆ ನೋವಿನ ಸಮಸ್ಯೆ ಇದ್ದು ತವರು ಮನೆಯವರೂ ಮತ್ತು ಗಂಡನಮನೆಯವರೂ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದರೂ ಕಡಿಮೆ ಆಗಿರಲಿಲ್ಲ. ದಿನಾಂಕ 13-02-2018 ರಂದು ಮೃತಳ ಗಂಡ ಮಂಜುನಾಥ ಇನಾಮಹೊಂಗಲದ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದ್ದನು . ಸದರಿ ಆಸ್ಪತ್ರೆಯಲ್ಲಿ  ಹೊಟ್ಟೆ ನೋವು ಕಡಿಮೆ ಆಗುವ ಎಣ್ಣೆಯನ್ನು  ಕೊಟ್ಟಿದ್ದರು.  ದಿನಾಂಕ 13-02-2018 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ  ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವಸರವಸರವಾಗಿ ತೋಟಕ್ಕೆ ಹೊಡೆಯುವ ಎಣ್ಣೆ ಬಾಟಲ್  ಹಾಗೂ ಖಾಸಗಿ ವೈದ್ಯರು ಕೊಟ್ಟ ಎಣ್ಣೆ ಬಾಟಲ್ ಎರಡೂ ಒಂದೆ ತರನಾಗಿದ್ದು ಅವಸರದಲ್ಲಿ ತೋಟಕ್ಕೆ ಹೊಡೆಯುವ ಎಣ್ಣೆ   ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು  ಉಪಚಾರಕ್ಕೆಂದು ಇನಾಮಹೊಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿಯ ವೈದ್ಯರು ಹೆಚ್ಚಿನ ಉಪಚಾರಕ್ಕೆಂದು ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರ ಫಲೀಸದೆ ದಿನಾಂಕ 13-02-2018 ರಂದು ರಾತ್ರಿ 08-00 ಗಂಟೆಗೆ ಮರಣಪಟ್ಟಿದ್ದು ಇರುತ್ತದೆಯೆ ಹೊರತು ಸದರಿ ನನ್ನ ಮಗಳ ಮರಣದಲ್ಲಿ ಯಾರ ಮೇಲೂ ಸಂಶಯ ಇರುವುದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.