ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 19, 2018

CRIME INCIDENTS 19-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-02-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶರೇವಾಡ-ಬೆಟದೂರ ಗ್ರಾಮಗಳ ನಡುವೆ ರಸ್ತೆಯ ಮೇಲೆ ಆರೋಪಿತನಾದ ಅಲ್ಲಾವುದ್ದೀನ ಮಹಬೂಬಸಾಬ ತಾಡಪತ್ರಿ, ಸಾ: ನ್ಯೂಆನಂದನಗರ ಹಳೇ ಹುಬ್ಬಳ್ಳಿ ಇವನು ರಿಕ್ಷಾ ನಂ: ಕೆಎ 25 / ಡಿ: 8662 ನೇದ್ದನ್ನು ಶರೇವಾಡ ಕಡೆಯಿಂದ ಬೆಟದೂರ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ತನ್ನ ಹತ್ತಿರ ಮುಂದಿನ ಸೀಟಿನಲ್ಲಿ ಕುಳಿತ ಅಬ್ದುಲಖಯೂಮ ತಂದೆ ಮಹ್ಮದಆಶೀಪ್ ತಾಡಪತ್ರಿ, ವಯಾ: 10 ವರ್ಷ, ಸಾ: ನ್ಯೂಆನಂದನಗರ ಹಳೇ ಹುಬ್ಬಳ್ಳಿ ಈತನು ಆಯತಪ್ಪಿ ಪುಟಿದು ಕೆಳಗೆ ಬೀಳುವಂತೆ ಮಾಡಿ ಹೊಟ್ಟೆಗೆ ಭಾರೀ ಒಳಪೆಟ್ಟಾಗುವಂತೆ ಹಾಗೂ ಮೈ ಕೈ ಗಳಿಗೆ ಸಣ್ಣ ಪುಟ್ಟ ಗಾಯಪೆಟ್ಟುಗಳಾಗುವಂತೆ ಮಾಡಿದ್ದು, ಸದರಿಯವನಿಗೆ ಹುಬ್ಬಳ್ಳಿಯ ಬಿಜಾಪೂರ ಆಸ್ಪತ್ರೆಯಲ್ಲಿ ಪ್ರಥಮೋಪಚಾರ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ವಿವೇಕಾನಂದ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯೊಳಗೆ ಒಯ್ಯುವಷ್ಟರಲ್ಲಿ ಸಂಜೆ 5-00 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 49/2018 ಕಲಂ 279.304(ಏ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ರೌಡಿ ಅಕೀಲ ಭಜಂತ್ರಿ ಇತನು ರೌಡಿ ಶಿಟರ್ ಇದ್ದು ಸದರಿಯವನ ಚಟುವಟಿಕೆಯ ಬಗ್ಗೆ ಬೆಟದೂರ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಚಾರಿಸಿದ್ದು ಸದರಿಯವನು ಒಳ್ಳೆಯ ನಡತೆಯಿಂದ ಇರದೇ ಮುಂಬರುವ ದಿನಗಳಲ್ಲಿ ಹಾಗೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ  ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಾಧ್ಯತೆಗಳು ಇರುವ ಬಗ್ಗೆ ಸ್ಥಾನಿಕ ಚೌಕಾಶಿಯಿಂದ ತಿಳಿದುಬಂದಿದ್ದು ಸದರಿಯವನು ಯಾವುದಾದರೂ ಘೋರ ಸ್ವರೂಪದ ಅಪರಾಧವೆಸಗಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಬಗ್ಗೆ ನಮಗೆ ಮನವರಿಕೆಯಾಗಿದ್ದರಿಂದ ಶಾಂತತೆ ಕಾಪಾಡುವ ದೃಷ್ಟಿಯಿಂದ ಸದರಿಯವನ ಮೇಲೆ ಗುನ್ನಾನಂ 50/2018 ಕಲಂ 107 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಮನಸೂರ ಗ್ರಾಮದ ಹದ್ದಿನ ಗುಡ್ಡದ ಹತ್ತಿರ  ರಸ್ತೆ ಮೇಲೆ  ಲಾರಿ ನಂ MH 10 AW 7634  ನೇದ್ದರ ಚಾಲಕನಾದ ದಯಾನಂದ ತಂದೆ ಬಸಪ್ಪ ಕಾಂಬಳೆ ವಯಾಃ25ವರ್ಷ ಜಾತಿಃಹಿಂದೂ ಹರಿಜನ ಸಾಃಗಣೆಶ ನಗರ ಮುಚ್ಚಂಡಿ ತಾಃಜತ್ತ ಜಿಲ್ಲಾ ಸಾಂಗಲಿ ಇವನು ಲಾರಿಯನ್ನು ಧಾರವಾಡ  ಕಡೆಯಿಂದ ಹುಬ್ಬಳ್ಳಿ  ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿ ಲಾರಿಯನ್ನು ಎಡಹೋಳು ಮಗ್ಗಲಾಗಿ  ಪಲ್ಟಿ ಮಾಡಿ ಕೆಡವಿ ಲಾರಿಯನ್ನು ಜಖಂ ಗೊಳಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದಲ್ಲಿ ಹಾಗೂ ಕಂದ್ಲಿ  ಗ್ರಾಮದ 1] ನಿಂಗಯ್ಯ ಬಸಲಿಂಗಯ್ಯ ಪಟದಯ್ಯನವರ ಸಾ : ಮಡಕಿಹೊನ್ನಳ್ಳಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 263/2016 ಕಲಂ 420 ಸಹ ಕಲಂ 34 ಐ.ಪಿ.ಸಿ ಮತ್ತು 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದು ಧಾಖಲಾಗಿದ್ದು ಇನ್ನೊಬ್ಬ ಎದುರುಗಾರ 2] ಕುಮಾರ ಗಂಗಯ್ಯ ತೇಗೂರಮಠ ಸಾ : ಬೆಂಡಿಗೇರಿ ಓಣಿ ಕಲಘಟಗಿ ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಇನ್ನೂಬ್ಬ 3] ಧಾದಾಪೀರ ತಂದೆ ಶರೀಪಸಾಬ ಬೆಳೋಗಿ ಸಾ : ಬಸವೇಶ್ವರ ನಗರ ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದು ದಾಖಲಾಗಿದ್ದು ಇನ್ನೂಬ್ಬ 4] ಹಾಲಪ್ಪ ತಂದೆ ರಾಮಣ್ಣ ಟೋಸೂರ ಸಾ ; ಕಂದ್ಲಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 14/2016 427.504.506 ಐ.ಪಿ.ಸಿ ಮತ್ತು 3 [1] ಎಸ್.ಸಿ.ಎಸ್.ಟಿ ಕಾಯ್ದೆ ನೇದ್ದು ಮತ್ತು 324/2016 307.ಸಹ ಕಲಂ 34 ಐ.ಪಿ.ಸಿ 25.27.ಆಮ್ಸರ್ ಕಾಯ್ದೆ 2 [1] 3 ಎಸ್.ಸಿ ಎಸ್.ಟಿ ಕಾಯ್ದೆ ನೇದ್ದು ದಾಖಲಾಗಿದ್ದು  ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಗೆ  ಹಾಗೇ ಬಿಟ್ಟಲ್ಲಿ ಇತಂಹದೇ ಪ್ರಕರಣಗಳನ್ನು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೇ ಈ ಎಲ್ಲಾ  ಎದುರುಗಾರರು ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾದಗಳು ಜರುಗುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ ಆದ್ದರಿಂದ   ಸದರಿಯವರ  ಗುನ್ನಾನಂ 65/2018 ಕಲಂ  ಮುಂಜಾಗೃತಾ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದ್ದು ಇರುತ್ತದೆ.