ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 20, 2018

CRIME INCIDENTS 20-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದಲ್ಲಿ ಹಾಗೂ ಗುಡ್ಡದಹುಲಿಕಟ್ಟಿ  ಗ್ರಾಮದ 1] ಶಂಕ್ರಯ್ಯ @ವಿನಾಯಕ ತಂದೆ ಗಂಗಯ್ಯ ಚಿಕ್ಕಮಠ ಸಾ : ಮಿಠಾಯಿಗಾರ ಓಣಿ ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯ ಗುನ್ನಾ ನಂಬರ 244/2017 ಕಲಂ 143.147.148.302.201. ಸಹ ಕಲಂ 149 ಐ.ಪಿ.ಸಿ ನೇದ್ದು ಧಾಖಲಾಗಿದ್ದು. ಇನ್ನೊಬ್ಬ 2] ಸುರೇಶ ತಂದೆ ಗುಂಡುರಾವ ರಗಟೆ ಸಾ : ಗೌಡ್ರ ಓಣಿ ಕಲಘಟಗಿ  ಈತನ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಗುನ್ನಾ ನಂಬರ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದವುಗಳು ಪ್ರಕರಣ ಧಾಖಲಾಗಿದ್ದು ಇನ್ನೂಬ್ಬ 3] ಬಸಯ್ಯ ತಂದೆ ನಂದಯ್ಯ ತೇಗೂರಮಠ ಸಾ : ಬೆಂಡಿಗೇರಿ ಓಣಿ ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 244//2017 ಕಲಂ 143.147.148.302.201 ಸಹಕಲಂ 149  ಐ.ಪಿ.ಸಿ ನೇದ್ದು ದಾಖಲಾಗಿದ್ದು 4] ಗುರಸಿದ್ದನಗೌಡ @ ಸಿದ್ದನಗೌಡ  ತಂದೆ ಸೋಮನಗೌಡ ಪಾಟೀಲ ಸಾ : ಗುಡ್ಡದಹುಲಿಕಟ್ಟಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 381/2015 ಕಲಂ 323.353.504.506. ಸಹ ಕಲಂ 34 ಐ.ಪಿ.ಸಿ 273/2016 ಕಲಂ 107 ಸಿ.ಆರ್.ಪಿ.ಸಿ ನೇದ್ದು ದಾಖಲಾಗಿದ್ದು  ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಗೆ  ಹಾಗೇ ಬಿಟ್ಟಲ್ಲಿ ಇತಂಹದೇ ಪ್ರಕರಣಗಳನ್ನು ಮಾಡಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವುದಲ್ಲದೇ ಈ ಎಲ್ಲಾ  ಎದುರುಗಾರರು ಮುಂಬರುವ ವಿಧಾನಸಭಾ  ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮಗಳಲ್ಲಿಯ ಜನರೊಂದಿಗೆ ಹಾಗೂ ಸುತ್ತಮುತ್ತಲಿನ ಜನರೊಂದಿಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು  ಗ್ರಾಮಗಳಲ್ಲಿ ಹೆಚ್ಚಿನ ಅನಾಹುತ ಮಾಡುವುದಲ್ಲದೇ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿ ಇನ್ನೂ ಘೋರ ಅಪರಾದಗಳು ಜರುಗುವ ಸಂಬವ ಇರುತ್ತದೆ ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ   ಸದರಿಯವರ  ಮೇಲೆ  ಗುನ್ನಾನಂ 68/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಮುಂಜಾಗೃತಾ ಕ್ರಮ ವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಇರುತ್ತದೆ.

2. ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಹದ್ದಿಯ, ಗ್ಯಾಸ ಗೊಡೌನ್ ಹತ್ತಿರ, ಸುಳ್ಳ ಬ್ಯಾಹಟ್ಟಿ ರಸ್ತೆ ಮೇಲೆ, ಆರೋಪಿ ಲಾರಿ ನಂಬರ ಕೆ.ಎ-23-ಎ-3203 ನೇದ್ದರ ಚಾಲಕ ಮಂಜಪ್ಪ ಶಿವಪ್ಪ ಕವಲಿ ಸಾ. ಡೋಣಿ ತಾ. ಮುಂಡರಗಿ ಜಿ. ಗದಗ ಇವನು ಲಾರಿಯನ್ನು  ಸುಳ್ಳ ಕಡೆಯಿಂದ ಬ್ಯಾಹಟ್ಟಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಬ್ಯಾಹಟ್ಟಿ ಕಡೆಯಿಂದ ಸುಳ್ಳದ ಕಡೆಗೆ ಪಿರ್ಯಾದಿಯ ಸಹೋದರ ಮಲ್ಲಿಕಾರ್ಜುನ@ಮಲ್ಲಪ್ಪ ತಂದೆ ದಾನಪ್ಪ ಮ್ಯಾಣಾಸೂರ ಸಾ. ಸುಳ್ಳ ಇವನು ಚಾಲನೆ ಮಾಡಿಕೊಂಡು ಹೊರಟಿದ್ದ ಮೋಟರ ಸೈಕಲ್ ನಂಬರ ಕೆಎ-25-ಇ.ವಿ-0192 ನೇದ್ದಕ್ಕೆ ಡಿಕ್ಕಿ ಮಾಡಿ, ಅಪಘಾತಪಡಿಸಿ ಬಲಗಾಲಿಗೆ ತೀವ್ರ ಗಾಯಪಡಿಸಿದ್ದಲ್ಲದೇ, ಮೋಟರ ಸೈಕಲ್ ಜಖಂಗೊಳಿಸಿ, ರಸ್ತೆಯ ಸೈಡ್ ಹಿಡಿದು ಬ್ಯಾಹಟ್ಟಿ ಕಡೆಗೆ ನಡೆದುಕೊಂಡು ಹೊರಟಿದ್ದ, ಗಾಯಾಳು ಮಹಾದೇವಿ ಕೋಂ ಸಿದ್ದಪ್ಪ ಮಡ್ಡಿ ಸಾ. ಬ್ಯಾಹಟ್ಟಿ ಇವರಿಗೂ ಸಹ ಡಿಕ್ಕಿ ಮಾಡಿ ಮೈ ಕೈಗೆ ಒಳನೋವು ಸಾದಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ  ವ್ಯಾಪ್ತಿಯ: ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಶೆಟ್ಟಿ ಲಂಚ ಹೋಮ್ ಹತ್ತಿರ ಆರೋಪಿತನಾದ ಮಹೇಶ ಇತನು ತಾನು ನಡೆಸುತ್ತಿದ್ದ ಟಿಂಪೋ ಟ್ರಾವೇಲ್ಸ್ ನಂಬರ ಕೆ.ಎ 22/ ಸಿ 3578 ನೇದ್ದನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ರಸ್ತೆ ರೀಪೇರಿ ಮಾಡುವ ಜಾಗೆಯಲ್ಲಿ ವಾಹನ ಕಡೆವಿ ವಾಹನದಲ್ಲಿದ ಫಿರ್ಯಾದಿಗೆ ಹಾಗೂ ಫಿರ್ಯಾದಿ ಹೆಂಡತಿ ಮಕ್ಕಳಿಗೆ ಹಾಗೂ ಸಂಬಂದಿಕರಿಗೆ ಸಾದಾ ವ ಭಾರಿ ಗಾಯಪಡಿಸಿ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 69/2018 ಕಲಂ 279.337.338. ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.