ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 21, 2018

CRIME INCIDENTS 21-02-2018

 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-02-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮರೇವಾಡ ಗ್ರಾಮದ ಕ್ರಾಸ ಹತ್ತಿರ ಧಾರವಾಡ ಸವದತ್ತಿ ರಸ್ತೆ ಮೇಲೆ ಆರೋಪಿತರಾದ 1.ಬಿಬಿಜಾನ ಮುಲ್ಲಾಣ್ಣವರ 2.ಅಬ್ದುಲ್ ಮುಲ್ಲಾಣ್ಣವರ  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಪಾಸು ವ ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತಮ್ಮ  ತಾಬಾದಲ್ಲಿ ಅಕ್ರಮವಾಗಿ ಒಂದು ಗುಲಾಬಿ ಕೈ ಚೀಲಗಳಲ್ಲಿ 01) ಒಟ್ಟು 12 ಓಲ್ಡ ಟವರನ್ ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ ಟೆಟ್ರಾ ಪಾಕೀಟಗಳು ಅಕಿಃ822/- ರೂ   02) ಒಟ್ಟು 24 ಹೈವಡ್ಸ ಚಿಯರ್ಸ ವಿಸ್ಕಿ ತುಂಬಿದ 90 ಎಂ.ಎಲ್     ಅಳತೆಯ ಟೆಟ್ರಾ ಪಾಕೀಟಗಳು ಅಕಿಃ675/-  ರೂ ನೇದವುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 57/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಗರಗ ಗ್ರಾಮದ ಮೃತ ಶಿಲ್ಪಾ ಕೋಂ.ಪ್ರವೀಣ.ಅರಿಷಿಣಕರ.ವಯಾ-23 ವರ್ಷ.ಸಾ:ಗರಗ ಇವಳು ದಿನಾಂಕ:13-02-2018 ರಂದು ಮದ್ಯಾಹ್ನ-2-30 ಗಂಟೆ ಸುಮಾರಿಗೆ ತನಗಿದ್ದ ಹೊಟ್ಟೆ ನೋವಿನ ಭಾದೆ ತಾಳಲಾರದೆ ಮನೆಯಲ್ಲಿದ್ದ ಇಲಿಗೆ ಇಡುವ ಗುಳಿಗೆಯನ್ನು ತಿಂದು ಅಸ್ತವ್ಯಸ್ಥಳಾಗಿ ದಿನಾಂಕ:19-02-2018 ರಂದು ಉಪಚಾರಕ್ಕೆಅಂತಾ ಹುಬ್ಬಳ್ಳಿಯ ಸುಚಿರಾಯ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ದಿ:20-02-2018 ರಂದು 11-12 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಸದರಿ ಮೃತಳ ಸಾವಿನಲ್ಲಿ ಬೇರೆ ಏನು ಸಂಶಯ ಹಾಗೂ ಪಿರ್ಯಾದಿಯು ಇರುವದಿಲ್ಲಾಂತಾ ಮೃತಳ ತಾಯಿ ಕೊಟ್ಟ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.