ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 22, 2018

CRIME INCIDENTS 22-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-02-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ದಿವತ್ತರ ಇವರರಿಗೆ ಆರೋಪಿತರಾದ ಬುದ್ದಪ್ಪಾ ಕರಡಿ ಮಂಜುನಾಥ ಅಣ್ಣಿಗೇರಿ ಇವರಿಬ್ಬರು ಮೊಟಾರು  ಸೈಕಲ್ ಮೇಲೆ ಆರೋಪಿತನಿಗೆ ಮನೆಗೆ ಬಿಡಲಿಲ್ಲ ತಂಟೆ ತೆಗೆದು ಅವಾಚ್ಯ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಬಿಡಿಸಲು ಬಂದ ಪಿರ್ಯಾದಿಗೂ ಸಹಿತ ಕೈಯಿಂದ ಹೊಡಿ ಬಡಿ ಮಾಡಿ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2018 ಕಲಂ 323.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ  1]ಬಸವರಾಜ.ರಾವಸಾಹೇಬ.ದೇಸಾಯಿ. 2]ಪ್ರಕಾಶ.ರುದ್ರಪ್ಪ. ಮರಿತಮ್ಮನವರ.ಸಾಃಇಬ್ಬರೂ ಮುಮ್ಮಿಗಟ್ಟಿ ಗ್ರಾಮ ಸದರಿಯವರ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ ಇದ್ದು ಈ ದಿವಸ ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಪೆಟ್ರೊಲಿಂಗ ಕುರಿತು ಪಿ,ಎಸ್.ಐ.ಗರಗ ಪಿ.ಎಸ್ ರವರು ಸದರ ಗ್ರಾಮಕ್ಕೆ ಬೆಟ್ಟಿಕೊಟ್ಟಾಗ ಗ್ರಾಮದ ಸಾರ್ವಜನಿಕರು ಮೇಲ್ಕಾಣಿಸಿದ ಸದರಿಯವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿ ಜನರಲ್ಲಿ ಆತಂಕ ಉಂಟಾಗುವಂತೆ ಮಾತನಾಡಿದ್ದು ಅಲ್ಲದೇ ಯಾವದೇ ಸಮಯದಲ್ಲಿ ಏನಾದರೂ ನೇಪ ಮಾಡಿ ಸಾರ್ವಜನಿಕರೊಂದಿಗೆ ತಂಟೆ ತೆಗೆದು ಸಾರ್ವಜನಿಕ ಶಾಂತತಾ ಭಂಗಪಡಿಸುವ ಹಾಗೂ ವಿಧಾನಸಭಾ ಚುನಾವಣೆ ಕಾಲಕ್ಕೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಧಕ್ಕೆಯನ್ನುಂಟು ಮಾಡುವ ಸಂಭವ ಇರುತ್ತದೆ ಅಂತಾ ತಿಳಿದು ಬಂದಿದ್ದರಿಂದ ಸದರಿಯವರ ಮೇಲೆ  ಗುನ್ನಾನಂ 19/2018 ಕಲಂ ಕಲಂ.107 ಸಿಆರಪಿಸಿ ಪ್ರಕಾ ಕ್ರಮ ಕೈಗೊಂಡಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಲಕನಕೊಪ್ಪ ಗ್ರಾಮದ ಪಿರ್ಯಾಧಿ ಚೆನ್ನವ್ವಾ ಕೋಂ ನಿಂಗಪ್ಪ ದೇಸಾಯಿ ಸಾ..ಮಲಕನಕೊಪ್ಪ ಇವರ ವಾಸದ ಮನೆಯಿಂದಾ ನಿಂಗಪ್ಪ ತಂದೆ ಬಸಲಿಂಗಪ್ಪ ದೇಸಾಯಿ 58 ವರ್ಷ ಸಾ..ಮಲಕನಕೊಪ್ಪ ತಾ..ಕಲಘಟಗಿ ಇವನು ಮನೆಯಲ್ಲಿ ಊಟ ಮಾಡಿ ಓಣಿಯಲ್ಲಿ ಮಾತನಾಡಲು ಅಂತಾ ಬಂದವನು ಮರಳಿ ಮನೆಗೆ ಹೋಗದೆ ಎಲ್ಲಿಯೋ ಹೋಗದೆ ಕಾಣೆಯಾಗಿದ್ದು  ಎಲ್ಲ ಕಡೆ ಹುಡಕಲಾಗಿ ಸಿಗದೇಇದ್ದದಕ್ಕೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 70/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಸುಂದರಪ್ಪಾ ಹರಿಜನ 1)132/2015 ಕಲಂ 448,447,323,354,504, ಸಹ ಕಲಂ 34 ಐಪಿಸಿ, 2)136/2015 ಕಲಂ 107 ಸಿ ಆರ್ ಪಿ ಸಿ  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ನರೇಂದ್ರ, ದಾಸನಕೊಪ್ಪ,  ಚಿಕ್ಕಮಲ್ಲಿಗವಾಡ, ಕ್ಯಾರಕೊಪ್ಪ ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರಿ ಎದುರುಗಾರನು ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಮೇಲೆ ಗುನ್ನಾನಂ61/2018 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇರುತ್ತದೆ

5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಬಸಯ್ಯ ಪೂಜಾರ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 1)ಗುನ್ನಾ ನಂ 87/1999 ಕಲಂ 78(iii) ಕೆಪಿ ಆಕ್ಟ, 2)145/1999 ಕಲಂ 78(iii) ಕೆಪಿ ಆಕ್ಟ,  3)164/1999 ಕಲಂ 78(iii) ಕೆಪಿ ಆಕ್ಟ, 4)83/2007 ಕಲಂ 78(iii) ಕೆಪಿ ಆಕ್ಟ, 5)265/2014 ಕಲಂ 78(iii) ಕೆಪಿ ಆಕ್ಟ, 6)40/2015 ಕಲಂ 78(iii) ಕೆಪಿ ಆಕ್ಟ, 7)46/2016 ಕಲಂ 78(iii) ಕೆಪಿ ಆಕ್ಟ,  ಗರಗ ಪೊಲೀಸ್ ಠಾಣಾ ಗುನ್ನಾ ನಂ ಗುನ್ನಾ ನಂ 1)66/2003 ಕಲಂ 78(iii) ಕೆಪಿ ಆಕ್ಟ, 2) 104/2004 ಕಲಂ 78(iii) ಕೆಪಿ ಆಕ್ಟ, ಧಾರವಾಡ ಉಪನಗರ ಪೊಲೀಸ್ ಠಾಣಾ ಗುನ್ನಾ ನಂ 37/2014 ಕಲಂ 78(iii) ಕೆಪಿ ಆಕ್ಟ,  ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ನರೇಂದ್ರ, ದಾಸನಕೊಪ್ಪ,  ಚಿಕ್ಕಮಲ್ಲಿಗವಾಡ, ಕ್ಯಾರಕೊಪ್ಪ ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಸದರಿಯವರನ ಮೇಲೆ ಗುನ್ನಾನಂ 60/2018 ಕಲಂ 107 ಸಿ.ಆರ್.ಪಿ.ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕುರುವಿನಕೊಪ್ಪ ಗ್ರಾಮದ ಮೃತ ಚಂದನ ಸಂಗೋಳ್ಳಿ ವಯಾ:8 ವಷಱ ಇವರ ಮನೆಯ ಹಿಂದಿನ ಹಿತ್ತಲದಲ್ಲಿದ್ದ ಎರಡು ಬಣಿವೆಗಳಿಗೆ ಆಕಸ್ಮೀಕವಾಗಿ ಬೆಂಕಿ ಹತ್ತಿ ಅಲ್ಲಿಯೇ ಆಟ ಆಡುತ್ತಿದ್ದ ಈತನಿಗೆ ಬೆಂಕಿ ಹತ್ತಿ ಸಂಪೂರ್ಣವಾಗಿ ಸುಟ್ಟು ಅಲ್ಲಿಯೇ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವುದೆ ಸಂಶಯ ಇರುವದಿಲ್ಲಾ  ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ  ಯುಡಿನಂ 13/201/ ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.