ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 23, 2018

CRIME INCIDENTS 23-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-02-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ ಆರೋಪಿ ಬಸಪ್ಪ ಶಿವಪ್ಪ ಬೆಳಗಲಿ ವಯಾಃ 50 ವರ್ಷ ಜಾತಿ ಹಿಂದೂ ಉದ್ಯೋಗಃ ಕೂಲಿ ಸಾಃ ಅಂಚಟಗೇರಿ ಇತನು ಅಂಚಟಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ  ಸ್ಥಳದಲ್ಲಿ ನಿಂತುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ತನ್ನ ಫಾಯ್ದೇಗೋಸ್ಕರ ಜನರಿಂದ ಹಣವನ್ನು ಇಸಿದುಕೊಂಡು ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಓ.ಸಿ ಚೀಟಿ , ಬಾಲ್ ಪೇನ , 520/- ರೂಪಾಯಿಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. . ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಗ್ರಾಮದ, ವಿ.ಆರ್.ಎಲ್ ಲಾಜಿಸ್ಟಿಕ್ ಕಂಪನಿಯ ಎದುರಿಗೆ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಲಾರಿ ನಂಬರ ಎಂ.ಹೆಚ್-04-ಹೆಚ್.ವೈ.-7030 ನೇದ್ದರ ಚಾಲಕ ಸಗೀರ ಹಸ್ನೈನ್ ತಂದೆ ರಝಿ ಜಫರ ಸಾ. ಮೆಮನ್ ಸದರ ಪೊ. ಬನೇಡಾ ಜಿ. ಬಿಜ್ನೋರ, ಉತ್ತರ ಪ್ರದೇಶ ಇವನು ಲಾರಿ ನಂಬರ ಎಂ.ಹೆಚ್-04-ಹೆಚ್.ವೈ.-7030 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆಯ ಎಡಗಡೆ ಸೈಡನಿಂದ ಪಿರ್ಯಾದಿ ಧರ್ಮೇಂದ್ರ ರಾಜಭರ ತಂದೆ ಮುದ್ರಿಕಾ ರಾಜಭರ ಇವನು  ಚಾಲನೆ ಮಾಡಿಕೊಂಡು ಹೊರಟಿದ್ದ, ಲಾರಿ ನಂಬರ ಎಂ.ಹೆಚ್.-46-ಎ.ಎಫ್-7599 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ, ಪಿರ್ಯಾದಿಯ ಲಾರಿ ಜಖಂಗೊಳಿಸಿದ್ದಲ್ಲದೇ, ತನ್ನ ಮುಖಕ್ಕೆ ತೀವ್ರ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 74/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ನೀರಲಕಟ್ಟಿ ಗ್ರಾಮದ 1]ಸುನೀಲ.ದೇವೆಂದ್ರಪ್ಪ.ಗಾಳಿ.ಸಾಃನಿರಲಕಟ್ಟಿ ಗ್ರಾಮ ಸದರಿಯವನ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ ಇದ್ದು ಈ ದಿವಸ ಮುಂಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಪೆಟ್ರೊಲಿಂಗ ಕುರಿತು ಎ.ಎಸ್.ಐ.ಗರಗ ಪಿ.ಎಸ್ ರವರು ಸದರ ಗ್ರಾಮಕ್ಕೆ ಬೆಟ್ಟಿಕೊಟ್ಟಾಗ ಗ್ರಾಮದ ಸಾರ್ವಜನಿಕರು ಮೇಲ್ಕಾಣಿಸಿದ ಸದರಿಯವನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿ ಜನರಲ್ಲಿ ಆತಂಕ ಉಂಟಾಗುವಂತೆ ಮಾತನಾಡಿದ್ದು ಅಲ್ಲದೇ ಯಾವದೇ ಸಮಯದಲ್ಲಿ ಏನಾದರೂ ನೇಪ ಮಾಡಿ ಸಾರ್ವಜನಿಕರೊಂದಿಗೆ ತಂಟೆ ತೆಗೆದು ಸಾರ್ವಜನಿಕ ಶಾಂತತಾ ಭಂಗಪಡಿಸುವ ಹಾಗೂ ವಿಧಾನಸಭಾ ಚುನಾವಣೆ ಕಾಲಕ್ಕೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಧಕ್ಕೆಯನ್ನುಂಟು ಮಾಡುವ ಸಂಭವ ಇರುತ್ತದೆ ಅಂತಾ ತಿಳಿದು ಬಂದಿದ್ದರಿಂದ ಸದರಿಯವನ ಮೇಲೆ ಮುಂಜಾಕ್ರತಾ ಕ್ರಮವಾಗಿ ಗುನ್ನಾನಂ 39/2018 ಕಲಂ.107 ಸಿಆರಪಿಸಿ ಪ್ರಕಾರ  ಕ್ರಮ ಕೈಗೊಂಡಿದ್ದು ಅದೆ.

4.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಳ್ಳಿಕಟ್ಟಿ ಗ್ರಾಮದ ಮೃತ ವಿಜಯ ತಂದೆ ಬಸಪ್ಪ ಬೆಳ್ಳಿಕಟ್ಟಿ ವಯಾ 23 ವರ್ಷ ಜಾತಿ ಹಿಂದು ಕ್ಷೇತ್ರೀಯ ಉದ್ಯೋಗ ಕಿರಾಣಿ ಅಂಗಡಿ ವ್ಯಾಪಾರ ಸಾ: ರಾಮಾಪುರ ಇತನು ಮಾನಸಿಕ ಅಸ್ವಸ್ಥನಿದ್ದು ಇದರಿಂದ ಮಾನಸಿಕ ಮಾಡಿಕೊಂಡು ಸರಾಯಿ ಕುಡಿಯುವ ಚಟವನ್ನು ಹೊಂದಿ ಮದ್ಯೆವ್ಯಸನೆಯಾಗಿದ್ದು ಈ ಬಗ್ಗೆ ಸರಾಯಿಯನ್ನು ಕುಡಿಯ ಬೇಡಾ ಅಂತಾ ಮನೆಯ ಜನರು ಹೇಳಿದರು ಸಹಿತಾ ಸರಾಯಿಯನ್ನು ಕುಡಿಯುವದನ್ನು ಬಿಡದೆ ಸರಾಯಿ ಕುಡಿದ ನಶೆಯಲ್ಲಿ ತನ್ನ ಜಮೀನುದಲ್ಲಿ ಯಾವೂದು ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದುಕೊಂಡು ಬಂದು ಧಾಖಲ ಮಾಡಿದಾಗ ಉಪಚಾರವು ಪಲೀಸದೆ ದಿನಾಂಕ 23-02-2018 ರಂದು ಬೆಳಗಿನ 0530 ಘಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ, ಸದರಿಯವನ ಸಾವಿನಲ್ಲಿ ಯಾವುದೆ ಸಂಶಯ  ವಗೈರಿ ಇರುವದಿಲ್ಲಾ ಅಂತಾ ಮೃತನ ತಂದೆ ಕೊಟ್ಟ ವರದಿಯನ್ನು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ನೆಲ್ಲಹರವಿ ಗ್ರಾಮದ ಮೃತ ದೇವಿಂದ್ರ ತಂದೆ ಈರಪ್ಪ ಅಗಡಿ ವಯಾ 21 ವರ್ಷ ಸಾ: ನೆಲ್ಲಿಹರವಿ ಇವನು ತನ್ನ ತಂದೆ ತೀರಿಕೊಂಡ ಚಿಂತೆಯಿಂದ ಮಾನಸಿಕ ಮಾಡಿಕೊಂಡು ಮತ್ತು ತನ್ನ ತಾಯಿಗೆ ಹಾಟರ್ಿನ ತೊಂದರೆ ಇದ್ದು ಆಪರೇಷನ್ ಆಗಬೇಕು ಅಂತಾ ವೈದ್ಯರು ಹೇಳಿದ್ದರಿಂದ ಈ ವಿಷಯವಾಗಿಯೂ ಚಿಂತೆ ಮಾಡುತ್ತಿದ್ದವನು ಮನೆಯ ಮತ್ತು ಓಣಿಯ ಹಿರಿಯರು ತಿಳಿಸಿ ಹೇಳಿದರೂ ಚಿಂತೆ ಮಾಡುವದನ್ನು ಬಿಡದೇ ಮಾನಸಿಕ ಮಾಡಿಕೊಂಡು ದಿನಾಂಕ: 22/02/2018 ರಂದು ಮದ್ಯಾಹ್ನ 02.30 ಗಂಟೆಯಿಂದ ರಾತ್ರಿ 10.30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಹೊಲದಲ್ಲಿಯ ಮಾವಿನ ಮರಕ್ಕೆ ಪ್ಲಾಸ್ಟಿಕ್ ಹಗ್ಗದ ಸಹಾಯದಿಂದ ತಾನಾಗಿಯೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಾಯಿ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.