ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 25, 2018

CRIME INCIDENTS 25-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-02-2018 ರಂದು ವರದಿಯಾದ ಪ್ರಕರಣಗಳು

1 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಯಾದವಾಡ ಗ್ರಾಮದ ಮಂಜುನಾಥ ದೊಡ್ಡಮನಿ ಇತನ ಮೋಟಾರ ಸೈಕಲ್ ನಂಬರ ಕೆಎ25-ಇಝಡ್ -8596 ನೇದರ ಸವಾರನು ತನ್ನ ಮೋಟಾರ ಸೈಕಲ್ ಮೇಲೆ ಹಿಂದೆ ಈರಪ್ಪಾ ಮೆಲಿನಮನಿ ಇವರ ತೆಂದೆಗೆ ಹತ್ತಿಸಿಕೊಂಡು ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ನಡೆಯಿಸಿಕೊಂಡು ಬಂದು ಯಾದವಾಡ ಗ್ರಾಮದ ದುರಗಮ್ಮನ ಗುಡಿಯ ಹತ್ತಿರ ರಸ್ತೆಯ ಮೇಲೆ ರೋಡ ಹಂಪ್ಸ ಹತ್ತಿರ ಜಿಗಿಸಿ ಅಪಘಾತವಾಗುವಂತೆ ಮಾಡಿ ಹಿಂದೆ ಕುಳಿತ ಇತನಿಗೆ  ಕೆಡವಿ ಎಡ ಗೈ ಗೆ ಬಾರಿ ಸ್ವರೂಪ್ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಮುರಗೇಶ ಗಡಾದ ಇತನು ರೌಡಿಶೀಟರ ಇದ್ದು ಧಾರವಾಡ ಗ್ರಾಮೀಣ ಠಾಣೆಯಲ್ಲಿ 1)ಗುನ್ನಾ ನಂ 307/2010 ಕಲಂ 143, 147, 148, 324, 504 ಸಹಕಲಂ 149 ಐಪಿಸಿ, 2)ಗುನ್ನಾ ನಂ 320/2010 ಕಲಂ 107 ಸಿ ಆರ್ ಪಿ ಸಿ , 3) ಗುನ್ನಾ ನಂ 132/2013 ಕಲಂ 143, 147, 148, 307, 324, 427, 448, 504 ಸಹಕಲಂ 149 ಐಪಿಸಿ , 4) ಗುನ್ನಾ ನಂ 95/2016 ಕಲಂ 353, 504, 506 ಐಪಿಸಿ, 5) 234/2016 ಕಲಂ 107 ಸಿ.ಆರ್.ಪಿ.ಸಿ ,6) ಗುನ್ನಾ ನಂ 275/2016 ಕಲಂ 109, 143, 147, 148, 323, 324, 307, 504, 506, ಸಹಕಲಂ 149 ಐಪಿಸಿ, 7) ಗುನ್ನಾ ನಂ 130/2017 ಕಲಂ 323, 504, 506 ಸಹಕಲಂ 34 ಐ.ಪಿ.ಸಿ , 8)172/2017 ಕಲಂ  107 ಸಿ ಆರ್ ಪಿ ಸಿ ,ಪ್ರಕರಣಗಳು ದಾಖಲಾಗಿರುತ್ತವೆ ಸದರಿಯವನು ಮುಂದೆ ಬರುವ ವಿದಾನಸಬಾ ಚುನಾವಣೆ ಸಂದರ್ಬದಲ್ಲಿ ಯಾವುದಾದರೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಇಲ್ಲವೇ ವ್ಯಕ್ತಿಗತವಾಗಿ ತನ್ನ ರೌಡಿ ವರ್ತನೆಯಿಂದ ಅಮ್ಮಿನಭಾವಿ, ಮರೆವಾಡ ,ತಿಮ್ಮಾಪೂರ ಕ್ಯಾರಕೊಪ್ಪ, ಮುಗದ, ಮಂಡಿಹಾಳ, ಮಲ್ಲೂರ,  ನರೇಂದ್ರ, ಚಿಕ್ಕಮಲ್ಲಿಗವಾಡ ಗ್ರಾಮಗಳಲ್ಲಿ ಚುಣಾವಣೆಗೆ ಮುನ್ನ  ಹಾಗೂ ಚುಣಾವಣಾ ಸಮಯದಲ್ಲಿ  ಸಾರ್ವಜನಿಕರಿಗೆ ತನ್ನ ಬೆಂಬಲಿತ ರಾಜಕೀಯ ಪಕ್ಷಕ್ಕೆ ಮಣೆ ಹಾಕುವಂತೆ  ಧಮಕಿ ಹಾಕುವ ಬೆದರಿಕೆ ಹಾಕುವ ಹಾಗೂ ತನ್ನ ಗೂಂಡಾ ವರ್ತನೆಯಿಂದ ಒತ್ತಾಯ ಮಾಡುವ ಸಾದ್ಯತೆಗಳು ಕಂಡು ಬಂದಿರುತ್ತವೆ ಅಲ್ಲದೇ ತನ್ನ ಪ್ರತಿ ಪಕ್ಷದವರೊಂದಿಗೆ ತಂಟೆ ತೆಗೆದು ಯಾವುದಾದರೂ ಸಂಜ್ಞೆಯ  ಅಪರಾಧಗಳನ್ನು ಮಾಡುವ ಸಾದ್ಯತೆಗಳಿರುತ್ತವೆ ಇದರಿಂದ ಮುಂದಿನ ಚುಣಾವಣೆ ದಿನಗಳಲ್ಲಿ ಸದರ ಗ್ರಾಮಗಳಲ್ಲಿ  ಮುಕ್ತ ಚುಣಾವಣೆಗೆ  ಹಾಗೂ ಪ್ರಜಾ ತಂತ್ರಕ್ಕೆ ಧಕ್ಕೆಯನ್ನುಂಟು ಮಾಡುವ  ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ. ದುಷ್ರೇರಿಸುವ ಸಾದ್ಯತೆಗಳಿರುವದರಿಂದ ಸದರಿಯವನ ಗುನ್ನಾನಂ 72/2018  ಮೇಲೆ ಮುಂಜಾಗೃತ ಕ್ರಮ ಕುರಿತು ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಗೊಂಡಿದ್ದು ಇದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೆಹೊನ್ನಳ್ಳಿ ಗ್ರಾಮದಲ್ಲಿ 1] ಚನ್ನಬಸಯ್ಯ @ ಚನ್ನು ತಂದೆ ವೀರಯ್ಯ ಹೀರೆಮಠ ಸಾ: ಧಾರವಾಡ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 300/2015 ಕಲಂ 307.302 ಸಹ ಕಲಂ 34 ಐ.ಪಿಸಿ ನೇದ್ದು ಹಾಗೂ 2] ಶಂಕರ ಅಣ್ಣಪ್ಪ ಚಿಕ್ಕಣ್ಣವರ ಸಾ: ಧಾರವಾಡ ಈತನ ಮೇಲೆ 300/2015 ಕಲಂ 307.302. ಸಹ ಕಲಂ 34 ಐ.ಪಿ.ಸಿ ನೇದ್ದು ಧಾಖಲಾಗಿದ್ದು ಸದರಿಯವರು ಅಪರಾದ ಎಸಗುವ ಪ್ರವೃತ್ತಿಯವರಿದ್ದು ಸದರಿಯವರಿಗೆ ಹಾಗೇ  ಬಿಟ್ಟಲ್ಲಿ ಇದೇ ನೆಪ ಮುಂದೆ ಮಾಡಿಕೊಂಡು ಮುಂಬರುವ ವಿಧಾನಸಭೆ ಚುನಾವಣೆ ಕಾಲಕ್ಕೆ ಯಾವುದಾದರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆ ಉಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಬಂಗಪಡಿಸುವ ಸಂಬವ ಕಂಡು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 74/2018 ಕಲಂ  ಮುಂಜಾಗ್ರತಾ ಕ್ರಮವಾಗಿ ಸದರಿಯವರ ಮೇಲೆ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ ಗ್ರಾಮದ  ಮೃತ ಉಳಕಪ್ಪ @ ಹುಲಕಪ್ಪ ತಂದೆ ಯಲ್ಲಪ್ಪ ಗರ್ಜಪ್ಪನವರ ವಯಾ 60 ಸಾ. ಲಕ್ಕುಂಡಿ ತಾ.ಜಿ ಗದಗ ಹಾಲಿ ವಸ್ತಿ ಬ್ಯಾಹಟ್ಟಿ ತಾ.ಹುಬ್ಬಳ್ಳಿ ಇತನು ಲಕ್ಕುಂಡಿ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದೆ ಮತ್ತು ತನ್ನ ಉಪಜೀವನಕ್ಕಾಗಿ ಇಟ್ಟುಕೊಂಡ 15 ಕುರಿಗಳು ಸಹ ಸತ್ತು ಹೋಗಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ಬ್ಯಾಹಟ್ಟಿಯ ಮಲ್ಲಯ್ಯಸ್ವಾಮಿ ಗುರುಸ್ವಾಮಿ ಮಠದ ಕಬ್ಬಿಣದ ಕಮಾನಿಗೆ ತಾನೂ ಉಟ್ಟ ದೋತರದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದ್ರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವದಿಲ್ಲಾ  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 09/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಉಗ್ನಿಕೇರಿ ಗ್ರಾಮದ ಮೃತ ನಾಗರಾಜ ತಂದೆ ನಿಂಗಪ್ಪ ಗಬ್ಬೂರ ವಯಾ 21 ವರ್ಷ, ಸಾ: ಉಗ್ನಿಕೇರಿ ಇವನು ಚಿಕ್ಕಂದಿನಿಂದ ಮೃದು ಸ್ವಭಾವದವನಿದ್ದು ಯಾರೊಂದಿಗೂ ಹೆಚ್ಚಿಗೆ ಮಾತನಾಡದೇ ತಾನು ತನ್ನ ಕೆಲಸ ಅಂತ ಇರುತ್ತಿದ್ದು ಯಾರೊಂದಿಗೂ ಜಗಳ ತಂಟೆ ತಕರಾರು ಮಾಡಿಕೊಳ್ಳದೇ ಇರುತ್ತಿದ್ದು, ದಿನಾಂಕ: 24/02/2018 ರಂದು ರಾತ್ರಿ 8.40 ಗಂಟೆಯಿಂದ ದಿ: 25/02/2018 ರಂದು ಮುಂಜಾನೆ 7.30 ಗಂಟೆಯ ನಡುವಿನ ಅವಧಿಯಲ್ಲಿ ಏಕಾ ಏಕಿಯಾಗಿ ಮಂಜುನಾಥ ಯಲ್ಲಪ್ಪ ಮುಕ್ಕಲ್ ರವರ ಹೊಲದಲ್ಲಿರುವ ಬೇವಿನ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಉರುಲು ಹಾಕಿಕೊಂಡು ಸತ್ತಿದ್ದರಿಂದ ಅವನು ಹೇಗೆ ಸತ್ತಿರುವನು ಅಂತ ಅವನ ಸಾವಿನಲ್ಲಿ ನಮಗೆ ಸಂಶವಿರುವದಾಗಿ ಮೃತನ ಮಗ ಶಂಕರಪ್ಪಾ ಇವರು ಫಿಯಾಱಧೀ  ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 15/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.