ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 26, 2018

CRIME INCIDENTS 26-02-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-02-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಸಮೀಪ ಗೂಡ್ಸ ಲಾರಿ ನಂ MH-46-AF-5783 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಹುಬ್ಬಳ್ಳಿ  ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಹೋಗಿ ತನ್ನ ಮುಂದೆ ಹೊರಟ LPG ಗ್ಯಾಸ್ ಟ್ಯಾಂಕರ್ ನಂ KA-01-AG-2066 ನೇದ್ದಕ್ಕೆ ಓವರ್ ಟೇಕ್ ಮಾಡಲು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ಗ್ಯಾಸ್ ಟ್ಯಾಂಕರ್ ಹಿಂಬದಿ ಡಿಕ್ಕಿ ಮಾಡಿ ಅಪಘಾತಪಡಿಸಿ ಗ್ಯಾಸ್ ಸೋರುವಂತೆ ಮಾಡಿ ತನ್ನ ಲಾರಿಯನ್ನು ಸಹಾ ರಸ್ತೆಯ ಬದಿ ಪಲ್ಟಿ ಮಾಡಿ ಕೆಡವಿ ಲಾರಿಯನ್ನು ಸಂಪೂರ್ಣ ಜಕಂಗೊಳೀಸಿ ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 75/2018 ಕಲಂ 279.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಂಗಡಿ ಗ್ರಾಮದ ಮೃತ ಬಸಪ್ಪ ಬಸಲಿಂಗಪ್ಪ ಹಾನಗಲ್ ವಯಾಃ 42 ವರ್ಷ ಸಾಃ ಅಗಡಿ ಇವನು ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೆ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಉಪಚಾರಕ್ಕೆಂದು ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲು ಮಾಡಿದಾಗ ಉಪಚಾರ ಫಲಿಸದೇ ದಿನಾಂಕ 25/02/2018 ರಂದು ಸಂಜೆ 6-50 ಗಂಟೆ ಸುಮಾರಕ್ಕೆ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ರೇವಣಸಿದ್ದೇಶ್ವರ ಪಾರ್ಕಿನಲ್ಲಿರುವ ಬಸವರಾಜ ತಿಪ್ಪಣ್ಣ ಕೊಪ್ಪದ, ಇವರ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ ಮೃತ ಶ್ರೀಮತಿ ಸುವರ್ಣಾ ಕೋಂ ಸಂತೋಷ ಸವದಿ, ವಯಾ: 32 ವರ್ಷ, ಸಾ: ಕಣಕೂರ ತಾ:ಜಿ: ಧಾರವಾಡ ಹಾಲಿ: ಕುಂದಗೋಳ ಇವಳು ತನಗೆ ಇದ್ದ ಹೊಟ್ಟೆ ನೋವಿನ ಭಾದೆಯನ್ನು ತಾಳಲಾರದೇ ಸದರ ಮನೆಯ ಬೆಡ್ ರೂಮಿನ ಮೇಲ್ಚಾವಣಿಯ ಕಬ್ಬಿಣದ ಕೊಂಡಿಗೆ ಪತ್ತಲವನ್ನು ಕಟ್ಟಿ ತನ್ನಷ್ಟಕ್ಕೇ ತಾನೇ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಸದರಿಯವಳ ಮರಣದಲ್ಲಿ ತಮ್ಮದು ಯಾವುದೇ ಸಂಶಯ ಇರುವುದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅದರಗುಂಚಿ ಗ್ರಾಮದ  ಮೃತ ಶಿವಾನಂದ ಗುರುನಾಥ ಖಗದಾಳ ವಯಾ. 45 ವರ್ಷ ಸಾ. ಅದರಗುಂಚಿ, ಅಂಚಿಕಟ್ಟಿ ಓಣಿ ತಾ. ಹುಬ್ಬಳ್ಳಿ ಇವರು, ಅದರಗುಂಚಿ ಗ್ರಾಮದ ತಮ್ಮ ಮನೆಯ ಮಾಳಗಿಯ ಮೇಲೆ, ಅತಿಯಾದ ಸಾರಾಯಿ ಸೇವನೆ ಮಾಡಿ, ಸಾರಾಯಿ ಸೇವನೆ ಮಾಡಿದ ಅಮಲಿನಲ್ಲಿ ಯಾವುದೋ ವಿಷ ಸೇವನೇ ಮಾಡಿ, ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.