ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 31, 2018

CRIME INCIDENTS 31-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-03-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗೆನಾಗರಕೊಪ್ಪ ಗ್ರಾಮದ ಆರೋಪಿತನಾದ ಬಸವರಾಜ ಮಹಾದೇವಪ್ಪ ತಡಸದ @ ಕಿಳ್ಳಿಕೇತರ ಇವನು ತನ್ನ ಕೈಯಲ್ಲಿ ಕಂದ್ಲಿಯನ್ನು ಹಿಡಿದುಕೊಂಡು ತಿರುಗಾಡುತ್ತಾ ಚನ್ನಬಸಪ್ಪಾ ಕಿಳ್ಳಿಕ್ಯಾತರ ಇತನು ತನ್ನ ಹೆಂಡತಿಯ ಜೊತೆಯಲ್ಲಿ ಪೋನಿನಲ್ಲಿ ಮಾತನಾಡುವ ಕಾಲಕ್ಕೆ  ಅವನಿಗೆ ಅಡ್ಡಗಟ್ಟಿ ತರುಬಿ ನಿಲ್ಲಿಸಿ  ವಿನಾಕಾರಣ ಅವನೊಂದಿಗೆ ತಂಟೆ ತೆಗೆದು ಅಂತಾ ಅವಾಚ್ಯ ಬೈದಾಡಿ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 106/2018 ಕಲಂ 341.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಯರಿಕೊಪ್ಪಾ ಗ್ರಾಮದ ಹತ್ತಿರ ಕಾರ ನಂ MH 13 AC 6202 ನೇದ್ದರ ಚಾಲಕ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಹತ್ತಿರ ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ಕಾರನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ತನ್ನ ಕಾರಿನ ಮುಂದೆ ಹೋಗುತ್ತಿದ್ದ ಯಾವುದೊ ಒಂದು ವಾಹನವನ್ನು ಓವರಟೇಕ ಮಾಡಿಕೊಂಡು ಬಂದು ತನ್ನ ಕಾರಿನ ವೇಗ ನಿಯಂತ್ರನ ಮಾಡಲಾಗದೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡ ಸೈಡಿನಲ್ಲಿ ಸಾವಕಾಶವಾಗಿ ಚಲಾಯಿ ಕೊಂಡು ಬರುತ್ತಿದ್ದ ಕಾರ ನಂ KA 02 MN 3654 ನೇದ್ದಕ್ಕೆ ಅಪಘಾತ ಪಡಿಸಿ ಕಾರಿನಲ್ಲಿದ್ದ ಹಮಿದಾಬಾನು ಇವರಿಗೆ ಸಾದಾ  ಗಾಯ ಪಡಿಸಿದ್ದಲ್ಲದೆ  ತನಗೆ ಹಾಗೂ ತನ್ನ ಕಾರಿನಲ್ಲಿದ್ದವರಿಗೆ ಸಾಧಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 34/2018, 35/2018, 36/2018, 37/2018 ಕಲಂ 107 ಸಿ.ಆರ್.ಪಿ ಸಿ ನೇದ್ದವುಗಳಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 49/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 41/2018.42/2018  ಕಲಂ 107   
  ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 107/2018,108/2018 ಕಲಂ 107  
   ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆFriday, March 30, 2018

CRIME INCIDENTS 30-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-03-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಜ್ಜಿಗುಡ್ಡರೋಡ ಹತ್ತಿರ ಆರೋಪಿತನಾದ ಬಸಪ್ಪಾ ಬಿಸಕ್ಕನವರ ಇತನು ತಾನು ಚಲಾಯಿಸುತ್ತಿದ್ದ ಎಚ್.ಎಮ್.ಟಿ ಕಂಪನಿಯ ಟ್ರಾಕ್ಟರ 2522 ಚೆಸ್ಸಿ ನಂಬರ M2011181601-304010 ಹಾಗೂ ಇಂಜಿನ ನಂಬರ 30258001 ನೇದ್ದನ್ನು ಮಜ್ಜಿಗುಡ್ಡ ಕಡೆಯಿಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ಟ್ರಾಕ್ಟರನ್ನು ರಸ್ತೆಯ ಪಕ್ಕದ ತೆಗ್ಗಿನಲ್ಲಿ ಪಲ್ಟಿ ಮಾಡಿ ತನಗೆ ತಲೆಗೆ ಮಾರಾಣಾಂತಿಕ ಭಾರೀ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಬೂದಿಹಾಳ ಗ್ರಾಮದ ಮೌಲಾಸಾಬ ನದಾಫ್ ಇವರ ಹತ್ತಿರ ಹೊಲಮನಿ ವಿಷಯವಾಗಿ ವಿಚಾರಿಸಲು ಅಂತಾ ಹೋದಾಗ  ಆರೋಪಿತರಾದ 1. ಗೌಸುಸಾಬ ಹಸನಸಾಬ ನದಾಫ ಹಾಗೂ ಇನ್ನೂ 03 ಜನರು ಕೊಡಿಕೊಂಡು ತನಗೆ ಎಲ್ಲರೂ ಸೇರಿ ತಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡುತ್ತಾ ಜೀವದ ಧಮಕಿ ಹಾಕಿ ಅವರಲ್ಲಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತನ್ನ ತಲೆಗೆ ಹೊಡೆದು ರಕ್ತ ಘಾಯ ಪಡಿಸಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2018 ಕಲಂ 323.324.341.504.506.34.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 102/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 46/2018,47/2018,48/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 102/2018 ಕಲಂ 107 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆWednesday, March 28, 2018

CRIME INCIDENTS 28-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-03-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಜುನಾಥ ರಾಮಪ್ಪ ಜಲ್ಲಿ ಇತನು ದಿನಾಂಕ 28-03-2018 ರಂದು 09-15 ಗಂಟೆಗೆ ಮಣಕವಾಡ ಗ್ರಾಮದ ಅನ್ನದಾನೇಶ್ವರ ಮಠದ ಹತ್ತಿರ ರಸ್ತೆಯ ಮೇಲೆ ತನ್ನ ಬಳಿಗೆ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಫಾಯದೇಗೋಸ್ಕರ 180 ಎಮ್.ಎಲ್ ಅಳತೆಯ ಒಟ್ಟು 19 ಓಲ್ಟ ಟಾವರ್ನ ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟುಗಳನ್ನು ಮತ್ತು 90 ಎಮ್ ಎಲ್ ಅಳತೆಯ ಒಟ್ಟು 30 ಹೈವರ್ಡಸ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳನ್ನು  ಒಟ್ಟು ಅಕಿ 2151/- ರೂ ನೇದ್ದವುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು  ಮಾರಾಟ ಮಾಡುತ್ತಿದ್ದಾಗ ಸಿಕ್ಕ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 36/2018 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 37/2018, 38/2018 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 39/2018 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 07/02/2018 ರಂದು 19-00 ಗಂಟೆ ಸುಮಾರಕ್ಕೆ ಪೂನಾ ಬೆಂಗಳುರ ರಸ್ತೆ ಮೇಲೆ ವರೂರ ಪೆಟ್ರೊಲ್ ಬಂಕ್ ಹತ್ತಿರ ಮೋಟರ ಸೈಕಲ್ ನಂಬರ ಕೆಎ-25/ಇಜಿ-0507 ನೇದ್ದನ್ನು ಅದರ ಸವಾರನಾದ ಮುತ್ತುರಾಜ ಚನ್ನಪ್ಪ ಮಾಯ್ಕರ ಸಾಃ ಬೆಳಗಲಿ ಇತನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತಿ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹುಬ್ಬಳ್ಳಿ ಕಡೆಯಿಂದ ವರೂರ ಪೆಟ್ರೊಲ್ ಬಂಕ್ ಕಡೆಗೆ ಮೋಟರ ಸೈಕಲ್ ನಂಬರ ಕೆಎ-25/ಇ ಎಕ್ಸ್-6869 ನೇದ್ದನ್ನು ಅದರ ಸವಾರ ಶಿವರುದ್ರಪ್ಪ ಗದಿಗ್ಯಪ್ಪಾ ಉಪ್ಪಿನ ಇತನು ಹೊರಳಿಸುತ್ತಿರುವಾಗ ಸದರ ಮೋಟರ ಸೈಕಲ್ ಗೆ ಹಿಂದಿನಿಂದ ಢಿಕ್ಕಿ ಮಾಡಿ ಅಪಘಾತಪಡಿಸಿ ಅದರ ಸವಾರ ಶಿವರುದ್ರಪ್ಪ ಉಪ್ಪಿನ ಸಾಃ ಕುರಡಿಕೇರಿ ಇತನಿಗೆ ಹಾಗೂ ಹಿಂದೆ ಕುಳಿತುಕೊಂಡಿದ್ದ ಪಿರ್ಯಾದಿ ಯಲ್ಲಪ್ಪಗೌಡ ಶಿವನಗೌಡ ಪಾಟೀಲ  ಸಾಃ ಕುರಡಿಕೇರಿ ಇವರುಗಳಿಗೆ ಸಾದಾ ವ ಭಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೆ ಹೋದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಗುನ್ನಾ ನಂ. 100/2018 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-337,279,338) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 99/2018 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 104/2018 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ.

Tuesday, March 27, 2018

CRIME INCIDENTS 27-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-03-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ  ಆರೋಪಿತನಾದ ಕಲ್ಲಪ್ಪ ತಂದೆ ಈಶ್ವರಪ್ಪ ಶೇರೆವಾಡ ಸಾಃಅಮ್ಮಿನಭಾವಿ ಇವನು ತನ್ನ ಹೆಂಡಿತಿ ಮಗನೋಂದಿಗೆ   ಆಗ್ಗಾಗ ತನ್ನ ಖರ್ಚಿಗೆ ಸಾರಾಯಿ ಕುಡಿಯಲು ಹಣ ಕೊಡರಿ ಇಲ್ಲಂದರ ನೀಮ್ಮ ಸಾವ ನನ್ನ ಕೈಯಲ್ಲಿ ಅಂತಾ ಜಗಳ ತೆಗೆಯುತಿದ್ದನು ಇದೇ ಸಿಟ್ಟಲ್ಲಿ  ದಿಃ27-03-2018 ರಂದು ಬೆಳಗಿನ ಜಾವ 02-00 ಗಂಟೆಗೆ  ತಮ್ಮ ಮನೆಯಲ್ಲಿ ತನ್ನ ಹೆಂಡತಿ  ಪಾರವ್ವಾ ಕೋಂ ಕಲ್ಲಪ್ಪಾ ಶೇರೆವಾಡ  ವಯಾ 48 ವರ್ಷ ಜಾತಿಹಿಂದೂ ಲಿಂಗಾಯತ ಉದ್ಯೋಗಃಕಾಳು ಕಡಿ ವ್ಯಾಪಾರ ಸಾಃಅಮ್ಮಿನಭಾವಿ ಇವಳೊಂದಿಗೆ ಜಗಳ ತೆಗೆದು ಕುಡಗೋಲಿನಿಂದ ಕುತ್ತಿಗೆಯ ಬಲಬಾಗಕ್ಕೆ ಮತ್ತು ಬಲಗೈಗೆ  ಹೊಡೆದು ಭಾರಿ ರಕ್ತ ಗಾಯ ಪಡಿಸಿ  ಎಸ್ ಡಿ ಎಂ  ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ಬೆಳಗಿನ ಜಾವ 04-00 ಗಂಟೆಗೆ ಮರಣ ಹೊಂದುವಂತೆ ಮಾಡಿ ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2018 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಭೂ ಅರಳಿಕಟ್ಟಿ ಗ್ರಾಮದಲ್ಲಿ ಫಕ್ಕೀರಪ್ಪ ಪರಸಪ್ಪ ಹಾದಿಮನಿ ಇವರ ಮನೆಯ ಮುಂದಿನ ಶೇಡ್ಡಿನಲ್ಲಿ ನಿಲ್ಲಿಸಿದ ಹಿರೋ ಹೊಂಡಾ ಫ್ಯಾಷನ್ ಪ್ರೋ ಮೋಟರ ಸೈಕಲ್ ನಂಬರ ಕೆಎ-25/ಇಡ್ಲೂ-4372 ನೇದ್ದರ  ಎರಡು ಗಾಲಿಗಳನ್ನು ಡಿಸ್ಕ, ಮ್ಯಾಗವೀಲ್ ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2018 ಕಲಂ 379 ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಗ್ರಾಮದ ತುಪ್ಪರಿ ಹಳ್ಳ ಆರೋಪಿತರಾದ 1.ಮಲ್ಲಿಕಾಜುಱನ ಸಿಂಗಣ್ಣವರ ಹಾಗೂ ಇನ್ನೂ 04 ಜನರು ಕೊಡಿಕೊಂಡು ಹೊಲದಲ್ಲಿ ತಮ್ಮ ಪಾಯಿದೆಗೋಸ್ಕರ ಜೆ.ಸಿ.ಬಿ. ಯಂತ್ರದಿಂದ ಸರಕಾರದ ಕಂದಾಯ ಇಲಾಖೆಯ ಜಮೀನದಲ್ಲಿ ನಿಯಮದ ಆಳಕ್ಕಿಂತ ಹೆಚ್ಚಿಗೆ ಆಳದಲ್ಲಿ ಜೆ.ಸಿ.ಬಿ. ಯಂತ್ರದಿಂದ ತೆಗ್ಗು ತೆಗೆದು ಉಸುಕು ಕಳ್ಳತನದಿಂದ ಸಂಗ್ರಹಿಸಿ ಬೋಟ ಮೋಟಾರುದಿಂದ ಫಿಲ್ಟರ ಮಾಡಿ ಟಿಪ್ಪರ ಹಾಗೂ ಟ್ಯಾಕ್ಟರ ಮುಖಾಂತರ ಅಕ್ರಮವಾಗಿ ಅನುಮತಿ ಇಲ್ಲದೆ ಕಳ್ಳತನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2018 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು  ಇರುತ್ತದೆ.

4.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 28/2018,29/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.