ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, March 1, 2018

CRIME INCIDENTS 01-03-2018



 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-03-2018 ರಂದು ವರದಿಯಾದ ಪ್ರಕರಣಗಳು

1 ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಳಸ ಗ್ರಾಮದ ಮೌಲಾಲಿ ಚಾಂದನವರ ಇತನು ರೌಡಿ ಶೀಟರ್ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಕಳಸ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ  ಗುನ್ನಾನಂ 32/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ವೀರಾಪೂರ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ 1.ನಿಂಗಪ್ಪಾ ವಾಘ ಇತನು  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೇ ಪಾಸು ವ ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತನ್ನ  ತಾಬಾದಲ್ಲಿ ಅಕ್ರಮವಾಗಿ ಒಂದು ಗುಟಕಾ ಕೈ ಚೀಲದಲ್ಲಿ 01) ಒಟ್ಟು 84 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 2363/- 02) ಒಟ್ಟು 64 ಓಲ್ಡ್ ಟಾವರನ ವಿಸ್ಕಿ ತುಂಬಿದ 180 ಎಂ.ಎಲ್   ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ:1440/- ನೇದವುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ77/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಳಸ ಗ್ರಾಮದ ಇಂಬ್ರಾಯಿಮ್ ಸುಂಕದ ಇತನು ರೌಡಿ ಶೀಟರ್ ಇದ್ದುದಲ್ಲದೇ ರಾಜಕೀಯ ದ್ವೇಷದಿಂದ ಕೂಡಿದವನು ಇದ್ದು ಇವನು ಕಳಸ ಗ್ರಾಮದಲ್ಲಿ ವಿನಾಃ ಕಾರಣ ತಂಟೇ ತಕರಾರು ಮಾಡುತ್ತಿದ್ದು ಯಾವ ವೇಳೆಯಲ್ಲಿ ಯಾವ ಅನಾಹುತ ಮಾಡುವನೋ? ಯಾರ ಆಸ್ತಿ-ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಾನೋ ಯಾವ ವೇಳೆಗೆ ಸಾರ್ವಜನಿಕ ಶಾಂತಿಭಂಗ ಮಾಡುತ್ತಾನೋ ಹೇಳಲು ಬಾರದ್ದರಿಂದ ಸದರೀಯವನ ಗುನ್ನಾನಂ 33/2018 ಕಲಂ 107 ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.