ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, March 2, 2018

CRIME INCIDENTS 02-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-03-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಹತ್ತಿರ  ಎಸ್ ಆರ್ ಎಸ್ ಬಸ್ಸ ನಂ KA 51 AA 2782  ನೇದರ ಚಾಲಕನು ತನ್ನ ಬಸ್ಸನ್ನು ಬೆಳಗಾಂವ  ಕಡೆಯಿಂದ ಹುಬ್ಬಳ್ಳಿ  ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಬಸ್ಸಿನ  ವೇಗ ನಿಯಂತ್ರಣ ಮಾಡಲಾಗದೇ ಒಮ್ಮೆಲೆ ರಾಂಗ ಸೈಡಿಗೆ ತೆಗೆದು ಕೊಂಡು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಟ್ರ್ಯಾಕ್ಟರ ಇಂಜಿನ ನಂ KA 27 TA 5463 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅಪಘಾತದಲ್ಲಿ   ಟ್ರ್ಯಾಕ್ಟರ ಚಾಲಕನಿಗೆ ಭಾರಿ ಗಾಯ ಪಡಿಸಿದ್ದಲ್ಲದೆ ಟ್ರ್ಯಾಕ್ಟರನ್ನು ಸಂಪೂರ್ಣ ಜಖಂ ಗೊಳಿಸಿದ್ದಲ್ಲದೆ ಬಸ್ಸನ್ನು ಪಲ್ಟಿಮಾಡಿ ಬಸ್ಸನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 79/2018 ಕಲಂ 279.338.ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬ್ಯಾಹಟ್ಟಿ ಗ್ರಾಮದ, ಜಾಡಗೇರಿ ಓಣಿಯಲ್ಲಿರುವ, ಅಶೋಕ ಮಲ್ಲಪ್ಪ ನಾಂದಿ ಇವರ, ಮಗಳಾದ ಮೃತ ಅಶ್ವಿನಿ ತಂದೆ ಅಶೋಕ ನಾಂದಿ ವಯಾ. 20 ವರ್ಷ ಸಾ. ಬ್ಯಾಹಟ್ಟಿ, ಜಾಡಗೇರಿ ಓಣಿ, ಇವಳಿಗೆ ತನ್ನ ಅಜ್ಜಿ ಮನೆಯಲ್ಲಿ ಬೇಗ ಎದ್ದು ಅಡಿಗೆ ಮಾಡು, ಕಾಲೇಜಿನಿಂದ ತಡವಾಗಿ ಬರಬೇಡ ಬೇಗ ಬಾ ಅಂತ ಹೇಳಿದ್ದಕ್ಕೆ ಮನಸ್ಸಿಗೆ ಬೇಜಾರ ಮಾಡಿಕೊಂಡು, ಮನೆಯ ಹಿತ್ತಲದಲ್ಲಿ ತನ್ನಷ್ಟಕ್ಕೆ ತಾನೇ ಕೀಟನಾಶಕ ಸೇವನೆ ಮಾಡಿ, ಅಸ್ವಸ್ಥಗೊಂಡಿದ್ದು, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿ ಉಪಚಾರ ಹೊಂದುತ್ತಿದ್ದಾಗ, ಉಪಚಾರ ಫಲಿಸದೇ ದಿನಾಂಕ: 01-03-2018 ರಂದು ರಾತ್ರಿ 10-40 ಗಂಟೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ವಿನಃ ಸದರಿಯವಳ ಮರಣದಲ್ಲಿ ತನ್ನದಾಗಲಿ, ತನ್ನ ಮನೆಯವರದಾಗಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.