ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, March 4, 2018

CRIME INCIDENTS 04-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-03-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:   ಅರವಟಗಿಗೆ ಗ್ರಾಮದ ಅಳ್ನಾವರ ದಾರವಾಡ ರಸ್ತೆಯ ಅರವಟಗಿ ಗ್ರಾಮದ ಸಮೀಪ ರಸ್ತೆಯ ಮೇಲೆ ಕಾರ ನಂಬರ ಕೆ.ಎ 43/ಎಮ್-8794 ನೇದ್ದರ ಚಾಲಕನಾದ ಮಯೂರ ಕೆ.ಆರ್ ತಂದೆ ರವಿಕುಮಾರ ಕೆ.ಆರ್ ಸಾ|| ದೊಡ್ಡ ಬಳ್ಳಾಪೂರ ತಾ|| ದೊಡ್ಡ ಬಳ್ಳಾಪೂರ ಅವನು ತಾನು ನಡೆಯಿಸುತ್ತಿದ್ದ ಕಾರನ್ನುಅಳ್ನಾವರ( ಗೋವಾ )ಕಡೆಯಿಂದ ದಾರವಾಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಂದ ಕೊಂಡು ಬಂದು ವಾಹನದ ವೇಗವನ್ನು ಕಂಟ್ರೋಲ ಮಾಡಲಾಗದೆ ಕಾರನ್ನು ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಸೋಲಾಪುರ ರೋಡ ಹತ್ತಿರ ಆರೋಪಿತನ ಬುಲೆರೋ ಪಿಕ್ ಅಪ್ ಗೂಡ್ಸ ಗಾಡಿ ನಂ.ಕೆಎ-27-ಬಿ-5917 ನೇದ್ದರ ವಾಹನ ಚಾಲಕನು ತನ್ನ ವಾಹನವನ್ನು ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ನವಲಗುಂದ ಶಹರದ ಕುರಟ್ಟಿ ಪೆಟ್ರೋಲ್ ಬಂಕ್ ಹತ್ತಿರ ಯಾವುದೆ ಮುನ್ಚುಚನೆ ನೀಡದೆ ಒಮ್ಮೇಲೆ ವಾಹನ ನಿಲ್ಲಿಸಿ ಅದರ ಹಿಂದೆ ಹೊರಟಿದ್ದ ಫಿರ್ಯಾದಿಯ ಕಾರ ನಂ.ಕೆಎ-49/ಎಂ-5829 ನೇದ್ದಕ್ಕೆ ಢಿಕ್ಕಿಯಾಗುವಂತೆ ಮಾಡಿ ಕಾರಿಗೆ ಲುಕ್ಸಾನ ಮಾಡಿ ಗಾಡಿ ನಿಲ್ಲಿಸದೆ ಹಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಗುನ್ನಾನಂ 19/2018 ಕಲಂ 279 ನೇದ್ದರಲ್ಲಿ ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದಲ್ಲಿ ಮಂಜುನಾಥ ಶಿವರುದ್ರಯ್ಯ ತೇಗೂರಮಠ ಸಾ; ಕಲಘಟಗಿ ಈತನ ಮೇಲೆ ಕಲಘಟಗಿ ಠಾಣೆಯಲ್ಲಿ 10/2012 ಕಲಂ 143.147.323.324.504 ಸಹ ಕಲಂ 149 ಐ.ಪಿ.ಸಿ  ನೇದ್ದು  55/2014 ಕಲಂ 107 ಸಿ.ಆರ್. ಪಿ.ಸಿ ಮತ್ತು 182/2014 ಕಲಂ 107 ಸಿ.ಆರ್.ಪಿ.ಸಿ  266/2016 ಕಲಂ 143.147.148.307.302.448.109.504.506 ಸಹ ಕಲಂ 149 ಐ.ಪಿ.ಸಿ ನೇದ್ದು ಧಾಖಲಾಗಿದ್ದು ಸದರಿಯವನು ಅಪರಾದ ಎಸಗುವ ಪ್ರವೃತ್ತಿಯನಿದ್ದು ಹಾಗೇ ಬಿಟ್ಟಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕಾಲಕ್ಕೆ ಯಾವುದಾರು ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಪಟ್ಟಣದಲ್ಲಿ ಜನರೊಂದಗೆ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಗಳಿಗೆ ದಕ್ಕೆ ಉಂಟು ಮಾಡಿಕೊಂಡು   ಪಟ್ಟಣದ್ಲಲ್ಲಿ ಸಾರ್ವಜನಿಕ ಶಾಂತಿಯನ್ನು ಹಾಳು  ಮಾಡಿ ಇನ್ನೂ ಹೆಚ್ಚಿನ ಘೋರ ಅಪರಾದ ಎಸಗುವ ಸಂಬವ ಕಂಡು ಬಂದಿರುತ್ತದೆ ಅಲ್ಲದೇ ಗಲಭೆ ದೃಷ್ಟಿಯಿಂದ ಪಟ್ಟಣ ಸೂಕ್ಮ ಪ್ರದೇಶವಾಗಿದ್ದು  ಆದ್ದರಿಂದ ಸದರಿಯವರನ  ಗುನ್ನಾನಂ 83/2018  ಮುಂಜಾಗ್ರತಾ ಕ್ರಮವಾಗಿ ಕಲಂ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಾರುಗೇರಿ ಕಾಮದೇನು ರಸ್ತೆ ಮೇಲೆ ಕಲಮೇಶ್ವರ ದೇವಸ್ಥಾನದ ಸಮೀಪ ಆರೋಪಿತನಾದ ಮಾನಪ್ಪಾ ಕೋಣೆ ಇತನು  ನಡೆಸುತ್ತಿದ್ದ ಮೋಟರ್ ಸೈಕಲ್ ನಂಬರ ಕೆ.ಎ 25/ ಇ.ಎಸ್. 2650 ನೇದ್ದನ್ನು ಹಾರುಗೇರಿ ಕಡೆಯಿಂದ ಕಾಮದೇನು ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲ್ ಮುಂದಿನ ಟೈಯರ ಒಡೆದು ಸ್ಕೀಡಾಗಿ ಕೆಡವಿ ಮೋಟರ್ ಸೈಕಲ್ ನಡೆಸುತ್ತಿದ್ದ ತನಗೆ ಮೈ ಕೈಗೆ ತಲೆಗೆ ಸಾದಾ ವ ಬಾರಿ ಗಾಯಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಿಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪೈಕಿ ಮುಮ್ಮಿಗಟ್ಟಿ ಗ್ರಾಮದಲ್ಲಿರುವ ಮೃತ ನಿರ್ಮಲಾ ತಂದೆ ಚಂದ್ರಪ್ಪಾ ಕಳಸಣ್ಣನವರ. ವಯಾಃ 18 ವರ್ಷ. ಸಾಃ ತಿಗಡೊಳ್ಳಿ. ತಾಃ ಬೈಲಹೊಂಗಲ ಹಾಲಿ ಮುಮ್ಮಿಗಟ್ಟಿ ಇವಳು ತಾನು ನೋಡಿದ ಹುಡುಗನ ಸಂಗಡ ಮದುವೆ ಮಾಡುವದಿಲ್ಲಾ ಅಂತಾ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ವರದಿಗಾರಳು ಇಲ್ಲದ ಸಮಯದಲ್ಲಿ  ತನ್ನಷ್ಟಕ್ಕೆ ತಾನೆ ಜೀವನದಲ್ಲಿ ಜೀಗುಪ್ಸೆಗೊಂಡು ಮನೆಯ ಸಿಮೆಂಟ ತಾಟಿನ ಫೈಪಿಗೆ ಓಡನಿಯಿಂದಾ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ   ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.