ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, March 5, 2018

CRIME INCIDENTS 05-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-03-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಿರೆಸೂರ ಗ್ರಾಮದ  ಮೃತ ವೀರಪ್ಪ ವಿರುಪಾಕ್ಷಪ್ಪ ಸವದತ್ತಿ ವಯಾಃ 40 ವರ್ಷ ಸಾಃ ಕೀರೆಸೂರ ಇತನು 4-5 ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ಮಾಡಿದ ಬೆಳೆ ಸಾಲ ಮತ್ತು ಟ್ಯಾಕ್ಟರ ಸಾಲ ಈಗ ಎರಡು ಮೂರು ವರ್ಷಗಳಿಂದ ಮಳೆ ಬೆಳೆ ಸರಿಯಾಗಿ ಬಾರದೆ ಸಾಲ ಕಟ್ಟಲಾಗದೆ ಮನಸ್ಸಿಗೆ ಹಚಿಕೊಂಡು ತನ್ನಷ್ಟಕ್ಕೆ ತಾನೆ ದಿನಾಂಕಃ 03/03/2018 ರಂದು ರಾತ್ರಿ 11-50 ಗಂಟೆ ಸುಮಾರಿಗೆ ಮನೆಯ ಜನರು ಮಲಗಿಕೊಂಡಾಗ ಮನೆಯಲ್ಲಿದ್ದ ಯಾವುದೊ ಕೀಟ ನಾಶಕ ಸೇವನೆ ಮಾಡಿ ಉಪಚಾರಕ್ಕೆ ಕಿಮ್ಸ ಹುಬ್ಬಳ್ಳಿಗೆ ದಾಖಲಾದಾಗ ಉಪಚಾರ ಫಲಿಸದೆ ಈ ದಿವಸ ದಿನಾಂಕಃ 05/03/2018 ರಂದು ಬೆಳಿಗ್ಗೆ 09-25 ಗಂಟೆಗೆ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೆ ಸಂಶಯ ಇರುವದಿಲ್ಲಾ ಅಂತಾ  ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2018 ಕಲಂ 174 ಸಿ.ಆರ್ ಪಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಂಗೇರಿ ಗ್ರಾಮದ ಮೃತ  ರಾಜು ತಂದೆ ರಾಮದಾಸ ಪಾಸಪ್ಲೇಟ್ ವಯಾ 48 ವರ್ಷ, ಸಾ; ಮಾರುತಿ ನಗರ ಹೆಗ್ಗೇರಿ ಹುಬ್ಬಳ್ಳಿ. ಹಾ:ವ: ಯಾದಗಿರಿ ಇವನು ವಿಪರೀತವಾಗಿ ಹಮೇಶಾ ಕುಡಿಯುವದರಿಂದ ಅವನ ಆರೋಗ್ಯ ಹಾಳಾಗಿದ್ದರಿಂದ ಸರಿಯಾಗಿ ಎಲ್ಲಿಯೂ ದುಡಿಯದೇ ಇದ್ದವನು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಹುಬ್ಬಳ್ಳಿಯ ತನ್ನ ತಮ್ಮನ ಮನೆಗೆ ಬಂದು ಸರಿಯಾಗಿ ಕೂಲಿ ಕೆಲಸ ಮಾಡದೇ ಅಲ್ಲಿಂದ ಕೂಲಿ ಕೆಲಸಕ್ಕೆ ಕಲಘಟಗಿಯ ಕಡೆಗೆ ಬಂದು ದಿ: 04/03/2018 ರಂದು ಮುಂಜಾನೆ 05 ಗಂಟೆಯಿಂದ 09 ಗಂಟೆಯ ನಡುವಿನ ಅವಧಿಯಲ್ಲಿ ರಸ್ತೆಯ ಪಕ್ಕ ಮಲಗಿದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 17/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಯಮನೂರ ಗ್ರಾಮದ ಆರೋಪಿತರಾದ ಇಮ್ರಾನ್ ರಫೀಕ್ಅಲಿ  ಇರಾನಿ ಹಾಗೂ 8 ಜನರು ಇರಾನಿ ಗ್ಯಾಂಗ ಕೂಡಿಕೊಂಡು ದಿನಾಂಕ 05-032018 ರಂದು ಬೆಳಗಿನ 08-00 ಗಂಟೆ ಸುಮಾರಿಗೆ ಯಮನೂರ ಗ್ರಾಮದ ಜಾತ್ರೆಯಲ್ಲಿ ಅಕ್ರಮವಾಗಿ ಗುಳುಗೂಳಿ ಜೂಜಾಟ ನಡೆಸುವ ಸಲುವಾಗಿ ಜಾತ್ರಾ ಬಯಲ್ದಲ್ಲಿ ಟೆಂಟ್ ಹಾಕಲು ಬಂದ ಜಾತ್ರಾರ್ತಿಗಳಿಗೆ ಜೂಜಾಟದ ಬಗ್ಗೆ ಪ್ರಚೋದಣೆ ಮಾಡುತ್ತಿದ್ದಲ್ಲದೆ ಸಂಶಯಾಸ್ಪದದಲ್ಲಿ ತಮ್ಮ ಇರುವಿಕೆ ಮುಚ್ಚಿಕೊಂಡು ಟೆಂಟ್ ಗಳಲ್ಲಿ  ಸಣ್ಣ ಪುಟ್ಟ ಕಳ್ಳತನ ಪೀಕ್ ಪಾಕೇಟ್ ಮಾಡುವ ಉದ್ದೇಶದಿಂದ ತಿರುಗಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2018 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.