ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 6, 2018

CRIME INCIDENTS 06-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-03-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಳವಟಗಿ ಗ್ರಾಮದ  ಆರೋಪಿ ಕಾರ ನಂ.MH-43/AN-4231 ನೇದ್ದರ ಚಾಲಕನು ತನ್ನ ಕಾರನ್ನು ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮಾತ್ತು ನಿಷ್ಲಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ನವಲಗುಂದ ಕಡೆಯಿಂದ ನರಗುಂದ ಕಡೆಗೆ ಹೊರಟ ಮೋಟಾರ ಸೈಕಲ್ ನಂ.ಕೆಎ-25-ಇ.ಎಚ್.-1799 ನೇದ್ದಕ್ಕೆ ಢಿಕ್ಕಿ ಮಾಡಿ ಮೋಟಾರು ಸೈಕಲ ಸವಾರ ಹಾಗೂ ಹಿಂದೆ ಕುಳಿತವನಿಗೆ ಸಾದಾ ವ ಭಾರಿ ಗಾಯಪಡಿಸಿ ಕಾರನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2018 ಕಲಂ 279.337.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ ಕ್ರಾಸ್ ಹತ್ತಿರ ಇದರಲ್ಲಿಯ ಆರೋಪಿ ಬಸಪ್ಪ ಗೂಳಪ್ಪ ನಾಗರಹಳ್ಳಿ ಸಾಃ ಬ್ಯಾಹಟ್ಟಿ ಯಡ್ರಾವಿ ಓಣಿ ಇತನು ತನ್ನ ಫಾಯ್ದೇಗೋಸ್ಕರ ಯಾವುದೆ ಪಾಸ್ ವ ಪರ್ಮಿಟ ಇಲ್ಲದೆ 1) ಒಟ್ಟು 40 ಓಲ್ಡ್ ಟಾರ್ವಿನ್ 180 ಎಮ್.ಎಲ್  ವಿಸ್ಕಿ ತುಂಬಿದ ಟೇಟ್ರಾ ಪೌಚ ಅ.ಕಿ= 2720 ರೂಪಾಯಿಗಳು 2) ಒಟ್ಟು 35 ಬ್ಯಾಗ್ ಪೈಪರ 180 ಎಂ.ಎಲ್ ವಿಸ್ಕಿ ಪೌಗಳ ಅ.ಕಿ = 2870 ರೂ ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 79/2018 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆ ಕಲಘಟಗಿ ತಾಲೂಕಿನ ಜುಂಜನ ಬೈಲ್ ಕ್ರಾಸ್ ಹತ್ತಿರ ರಸ್ತೆ ಮೇಲೆ ಆರೋಪಿತನು ತಾನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ KA19/EQ 3789 ನೇದ್ದರ ಮೇಲೆ ಮೊಹಿನುದ್ದಿನ ಸಾ: ಅಳವಂಡಿ ಈತನಿಗೆ ಕೂಡ್ರಿಸಿಕೊಂಡು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರು ವ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ರಸ್ತೆ ಯಾವದೇ ಮುನ್ಸೂಚನೆ ಬೋರ್ಡ ಅಳವಡಿಸದೇ ರಸ್ತೆ ಮೇಲೆ ನಿಲ್ಲಸಿದ್ದ ಗೂಡ್ಸ ಟಿಪ್ಪರ ಲಾರಿ ನಂ KA36/ 6370 ನೇದ್ದಕ್ಕೆ ಹಿಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಮೊಟಾರ ಸೈಕಲ್ಲ ಮೇಲಿದ್ದ ಮೊಹಿನುದ್ದಿನ ಈತನಿಗೆ ಸಾದಾಗಾಯ ಪಡಿಸಿ ತಾನು ಬಲವಾದ ಗಾಯಗೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2018 ಕಲಂ 279.283.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮೊರಬ ಮೃತ ಯೋಗಪ್ಪ  ಗ್ರಾಮದ ಶಿವನಪ್ಪ ಗೋಡಿಕಟ್ಟಿ @ ಹೊಸುರ ವಯಾ: 55 ವರ್ಷ ಸಾ:ಮೊರಬ ಈತನು ಜಮೀನು ಸಾಗುವಳಿಗಾಗಿ ಮೊರಬ ಗ್ರಾಮದ ವಿಜಯಾ ಬ್ಯಾಂಕದಲ್ಲಿ 2,64,000=00 ರೂ. ಹಾಗೂ ಮೊರಬ ಗ್ರಾಮದ ಕೆ.ವಿ.ಜಿ. ಬ್ಯಾಂಕದಲ್ಲಿ 1,50,000=00 ಹಾಗೂ ಮೊರಬ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 80,000=00 ರೂ. ಸಾಲ ಮಾಡಿದ್ದು ಈ ವರ್ಷ ಸರಿಯಾಗಿ ಮಳೆ ಬೆಳೆ ಬಾರದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ತನ್ನಷ್ಟಕ್ಕೆ ತಾನೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಇತನ  ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.