ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, March 7, 2018

CRIME INCIDENTS 07-03-2018ದಿನಾಂಕ. 07-03-2018 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:06-03-2018 ರಂದು ಸಂಜೆ 5-30 ಗಂಟೆಯಿಂದ ದಿನಾಂಕ:07-03-2018 ರ ಮುಂಜಾನೆ-9-45 ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಯಲ್ಲಿಯ ಕೊಠಡಿಯ ಕೀಲಿ ಮುರಿದು ಕೊಠಡಿ ಒಳಗೆ ಇದ್ದ 1] ಒಂದು ಸ್ಯಾಮಸಂಗ ಕಂಪನಿಯ ಟಿ.ವಿ.ಅ:ಕಿ:6000-00 ರೂ.2]ಒಂದು ಸ್ಟಬಲೈಸರ್ ಅ:ಕಿ:1500-00 ರೂ ಹಾಗೂ 3] ಆರು ಪ್ಲಾಸ್ಟೀಕ ಕುರ್ಚಿಗಳು ಅ:ಕಿ:3000-00 ರೂ ಒಟ್ಟು 10.500-00 ರೂ ಕಿಮತ್ಮಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 05-03-2018 ರಂದು ರಾತ್ರಿ 1900 ಗಂಟೆಗೆ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಚಿಕ್ಕಮಲ್ಲಿಗವಾಡ ಓವರ ಬ್ರೀಡ್ಜ್ ಹತ್ತಿರ ನಮೂದು ಮಾಡಿದ ಮೋಟರ್ ಸೈಕಲ ನಂ KA-24-V-1401 ನೇದರ ಚಾಲಕ ರಾಘವೇಂದ್ರ ಕಟಾಪೂರ ಸಾ: ಹುಬ್ಬಳ್ಳಿ ಇತನು ತನ್ನ ಮೋಟರ್ ಸೈಕಲನ್ನು ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿ  ವೇಗ ನಿಯಂತ್ರಣ ಮಾಡಲಾಗದೇ ಮೋಟರ್ ಸೈಕಲನ್ನು ರಸ್ತೆ ಮೇಲೆ ಕೆಡವಿ ತನಗೆ ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ ಪಿ:ದಿ: ಮಗ ಸಂತೋಷ ಯಲ್ಲಪ್ಪ ಯಲಿಗಾರ ಇವನಿಗೆ ಭಾರೀ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 05-03-2018 ರಂದು 18-30 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆ ಮೇಲೆ ನೂಲ್ವೀ ಕ್ರಾಸ್ ಹತ್ತಿರ ಇದರಲ್ಲಿಯ ಆರೋಪಿತನಾದ ಚನ್ನಬಸಪ್ಪ ನೀಲಕಂಠಪ್ಪ ಕುರಲಿ ಸಾ!! ಹುಬ್ಬಳ್ಳಿ ನಾರಾಯಣ ಸೋಫಾ ಇತನು ಲಾರಿ ನಂಬರ ಕೆಎ-25/ಬಿ-9820 ನೇದ್ದನ್ನು ಯುನೈಟೆಡ್ ಸ್ಪೀರಿಟ್ ಪ್ಯಾಕ್ಟರಿಯ ಸರ್ವಿಸ್ ರಸ್ತೆಯಿಂದ ಪುನಾ ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಕಡೆಗೆ ಲಾರಿಯನ್ನು ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದ ಟ್ರ್ಯಾಲಿ ಲಾರಿ ನಂಬರ ಎಮ್ ಎಚ್-46/ಎಚ್-7046 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.